More

    ಮಾರ್ಗಸೂಚಿ ಉಲ್ಲಂಘಿಸಿದರೆ ಕ್ರಮ

    ಹುಕ್ಕೇರಿ: ಪಟ್ಟಣದಲ್ಲಿ ಕರೊನಾ ಸೋಂಕಿತರ ಪ್ರಕಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಬುಧವಾರ ಪುರಸಭೆ ಸಿಬ್ಬಂದಿ ಜನದಟ್ಟಣೆ ಪ್ರದೇಶಗಳಲ್ಲಿ, ಮಾರುಕಟ್ಟೆಗಳಲ್ಲಿ ಸ್ಯಾನಿಟೈಸರ್ ಸಿಂಪಡಣೆ ಮಾಡಿದರು.

    ಪಟ್ಟಣದ ಮಠಗಲ್ಲಿ, ಹೌಸಿಂಗ್ ಕಾಲನಿ, ಸುಭಾಷ ರಸ್ತೆ ಸೇರಿದಂತೆ ವಿವಿಧ ಕಡೆ ಸೋಂಕಿತ ವ್ಯಕ್ತಿಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಅಗ್ನಿಶಾಮಕ ಹಾಗೂ ಪುರಸಭೆ ಸಿಬ್ಬಂದಿ ಸೋಡಿಯಂ ಹೈಪೋಕ್ಲೋರೈಡ್ ದ್ರಾವಣ ಸಿಂಪಡಿಸಲಾಗುತ್ತಿದೆ. ಮತ್ತೊಂದೆಡೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಹಾಕಿಕೊಳ್ಳದ, ದೈಹಿಕ ಅಂತರ ಕಾಪಾಡಿಕೊಳ್ಳದಿರುವವರ ವಿರುದ್ಧ 19600 ಪ್ರಕರಣ ದಾಖಲಿಸಿ 1,96,000 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಜಗದೀಶ ಈಟಿ ತಿಳಿಸಿದ್ದಾರೆ.

    ಕರೊನಾ ಮಹಾಮಾರಿ ವೇಗವಾಗಿ ಹಬ್ಬುತ್ತಿದ್ದು, ಜನರು ಕೂಡ ಸರ್ಕಾರದ ನಿಯಮಾವಳಿ ಪಾಲನೆಗೆ ಕೈಜೋಡಿಸಬೇಕು. ಜೀವ ಇದ್ದರೆ ಏನಾದರೂ ಸಾಧಿಸಬಹುದು. ಹಾಗಾಗಿ, ಕರೊನಾದಿಂದ ಬದುಕುಳಿಯಲು ವೈಯಕ್ತಿಕ ಸ್ವಚ್ಛತೆಯ ಜತೆಗೆ ಮಾರ್ಗಸೂಚಿ ಪಾಲನೆಗೂ ಒತ್ತು ನೀಡಬೇಕು ಎಂದು ತಿಳಿಸಿದರು. ಸಾಂಕ್ರಾಮಿಕ ರೋಗ ನಿಯಂತ್ರಣಕ್ಕಾಗಿ ಅನಗತ್ಯ ಸಂಚಾರ ತಡೆಯಲಾಗುತ್ತಿದ್ದು, ಅನವಶ್ಯಕವಾಗಿ ಸಂಚರಿಸುತ್ತಿದ್ದ 35 ದ್ವಿಚಕ್ರ ವಾಹನಗಳನ್ನು ಸೀಜ್ ಮಾಡಿ ಅವರ ಮೇಲೆ ಪ್ರಕರಣ ದಾಖಲಿಸಿದ್ದೇವೆ. ಜತೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಉಲ್ಲಂಘನೆಯಡಿ ನಿಯಮಾವಳಿ ಮೀರಿ ಹೆಚ್ಚು ಜನ ಸೇರಿಸಿ ಮದುವೆ ನಡೆಸಿದ ಮತ್ತು ಜಾತ್ರೆ ಕೈಗೊಂಡ ಎರಡು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪಿಎಸ್‌ಐ ಗಣಪತಿ ಕೊಂಗನೊಳಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts