More

    ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡ ಹಳೇ ಸ್ನೇಹಿತರು

    ಚಿಕ್ಕಮಗಳೂರು: ನಗರದ ಮಿಲನ್ ಚಿತ್ರಮಂದಿರದಲ್ಲಿ ಮೊದಲ ದಿನ ಗುರುವಾರ ರೋಣ ವಿಕ್ರಾಂತ್ ಚಿತ್ರ ವೀಕ್ಷಣೆ ಮಾಡಿದ ನಂತರ ಹಳೇ ಸ್ನೇಹಿತರು ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡಿದ್ದಾರೆ.  ನಗರದ ಭರತ್, ಜೀವನ್, ಸಾಗರ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರೋಪಿಗಳಲ್ಲಿ ಕೆಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಕೆಲವರು ಪರಾರಿಯಾಗಿದ್ದರೆ. ಮಧ್ಯಾಹ್ನ ಚಿತ್ರ ಆರಂಭವಾಗುವ ಮುನ್ನವೇ ಬ್ಯಾಂಡ್ ಸದ್ದಿಗೆ ಒಟ್ಟಿಗೆ ಕುಣಿದು ಸಂಭ್ರಮಿಸಿದ್ದರು. ಥಿಯೇಟರ್​ನಲ್ಲಿ ಚಿತ್ರ ವೀಕ್ಷಿಸಿದ ಯುವಕರು ಕೊನೆಯಲ್ಲಿ ಬರುವ ಎಕ್ಕಸಕ್ಕ ಹಾಡಿಗೆ ಪರದೆ ಮುಂದೆ ಬಂದು ಕುಣಿಯಲಾರಂಭಿಸಿದರು. ಇದ್ದಕ್ಕಿದ್ದಂತೆ ಮಾತಿನಚಕಮಕಿ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪಿತು. ಇದನ್ನು ಕಂಡ ಥಿಯೇಟರ್ ಸಿಬ್ಬಂದಿ ಇವರನ್ನೆಲ್ಲ ಹೊರ ಹೋಗಲು ತಿಳಿಸಿದರೂ ಹೋಗದ ಕಾರಣ ಪೊಲೀಸರು ಆಗಮಿಸಿ ಹೊರಗೆ ಕಳುಹಿಸಿದರು. ಹೊರಗೆ ಬರುವವರೆಗೂ ತಳ್ಳಾಡಿಕೊಂಡು ಆಗಮಿಸಿದ ಯುವಕರು ಗೇಟ್ ಬಳಿ ಬರುವ ವೇಳೆಗೆ ಒಂದು ಗುಂಪಿನ ಕಾರಿನಲ್ಲಿದ್ದ ಲಾಂಗ್, ಮಚ್ಚನ್ನು ತೆಗೆದು ಭರತ್, ಜೀವನ್, ಸಾಗರ್ ಮೇಲೆ ಹಲ್ಲೆ ಮಾಡಿದರು. ಭರತ್ ಎಂಬುವನಿಗೆ ಗಂಭೀರ ಗಾಯವಾಗಿದೆ. ಜೀವನ್​ಗೂ ಗಾಯವಾಗಿದ್ದು ಇಬ್ಬರನ್ನೂ ಹಾಸನಕ್ಕೆ ಕರೆದೊಯ್ಯಲಾಗಿದೆ. ಸಾಗರ್ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಹಳೇ ವೈಷಮ್ಯವೇ ಹೊಡೆದಾಟಕ್ಕೆ ಕಾರಣ ಎಂದು ತಿಳಿದುಬಂದಿದೆ. ಥಿಯೇಟರ್​ಗೆ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ದೂರು-ಪ್ರತಿ ದೂರು ದಾಖಲಿಸುವ ಸಾಧ್ಯತೆ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts