More

    ಮಾನವ ಕಲ್ಯಾಣಕ್ಕೆ ವಿಜ್ಞಾನದ ಕೊಡುಗೆ ಅನುಪಮ: ವಿಜ್ಞಾನಿ ಡಾ. ಕೆ.ವಿ.ಗುರುರಾಜ್ ಸಲಹೆ

    ಶಿಕಾರಿಪುರ: ಮನುಕುಲದ ಒಳಿತಿಗೆ ವಿಜ್ಞಾನ ಪೂರಕವಾಗಿದೆ ಮತ್ತು ಪ್ರೇರಕವಾಗಿದೆ. ದಿನ ದಿನಕ್ಕೂ ವಿಜ್ಞಾನದ ಹೊಸ ಹೊಸ ಆವಿಷ್ಕಾರಗಳಾಗುತ್ತಿವೆ. ಮಾನವ ಕಲ್ಯಾಣಕ್ಕೆ ವಿಜ್ಞಾನದ ಕೊಡುಗೆ ಅನುಪಮ ಎಂದು ಸೃಷ್ಟಿ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್, ಡಿಸೈನ್ ಮತ್ತು ಟೆಕ್ನಾಲಜಿ ಬೆಂಗಳೂರು ಘಟಕದ ವಿಜ್ಞಾನಿ ಡಾ. ಕೆ.ವಿ.ಗುರುರಾಜ್ ಹೇಳಿದರು.
    ಗುರುವಾರ ಪಟ್ಟಣದ ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನ ಸಸ್ಯಶಾಸ್ತ್ರ ವಿಭಾಗ, ಐಕ್ಯೂಎಸಿ ಹಾಗೂ ಕಲಬುರಗಿಯ ಖಾಜಾ ಬಂದನವಾಜ್ ವಿಶ್ವವಿದ್ಯಾಲಯ ಇವುಗಳ ಸಹಯೋಗದಲ್ಲಿ ಆಯೋಜಿಸಿದ್ದ ಜೈವಿಕ ವಿಜ್ಞಾನಗಳ ರಾಜ್ಯಮಟ್ಟದ ವಿದ್ಯಾರ್ಥಿ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ನಮ್ಮಲ್ಲಿ ವೈಜ್ಞಾನಿಕ ಚಿಂತನೆಗಳು ಹೆಚ್ಚು ಸೃಜಿಸಬೇಕು. ಪ್ರತಿ ದೇಶದ ಅಭಿವೃದ್ಧಿ ವಿಜ್ಞಾನದ ಮೇಲೆ ಅವಲಂಬಿಸಿದೆ. ವಿಜ್ಞಾನ ಭಾರತ ದೇಶದ ಶಕ್ತಿ. ವಿಜ್ಞಾನ, ತಂತ್ರಜ್ಞಾನದ ವಿರಾಟ್ ಸ್ವರೂಪ ನಮಗೆ ಪ್ರತ್ಯಕ್ಷ ಕಾಣುತ್ತಿದೆ ಎಂದರು.
    ಭಾರತದ ಸಮಗ್ರ ಶಿಕ್ಷಣ ವ್ಯವಸ್ಥೆಯಲ್ಲಿ ರಚನಾತ್ಮಕ ಸುಧಾರಣೆಗಳನ್ನು ತರಲಾಗಿದೆ. ಪುಸ್ತಕದ ಜ್ಞಾನ ದಾಟಿ, ವಿಷಯವನ್ನು ಕೆದಕುವ, ವಿಚಾರಿಸುವ ಮನೋಭಾವ ಮತ್ತು ಸ್ಫೂರ್ತಿಯನ್ನು ಹೊಸ ಶಿಕ್ಷಣ ವ್ಯವಸ್ಥೆಯಲ್ಲಿ ಉತ್ತೇಜಿಸಲಾಗಿದೆ. ಸಂಶೋಧನೆ, ಅನುಶೋಧನೆ ಮತ್ತು ಅನ್ವಯಿಕಗಳಿಗೆ ಆದ್ಯತೆಯ ಗಮನ ಕೊಡಲಾಗುತ್ತಿದೆ. ಇದು ನಮ್ಮ ಹೊಸ ಮತ್ತು ಉದಯೋನ್ಮುಖ ವಿಜ್ಞಾನಿಗಳನ್ನು ಉತ್ತೇಜಿಸಲು ನೆರವಾಗಲಿದ ಎಂದು ಹೇಳಿದರು.
    ಪ್ರಾಚಾರ್ಯ ಡಾ. ಜಿ.ಆರ್.ಹೆಗಡೆ ಮಾತನಾಡಿ, ನಾವು ವಿಜ್ಞಾನ ಮತ್ತು ತಂತ್ರಜ್ಞಾನದ ಸಮಯದಲ್ಲಿ ಜೀವಿಸುತ್ತಿದ್ದೇವೆ. ನಮ್ಮೆಲ್ಲರ ಜೀವನ ವೈಜ್ಞಾನಿಕ ಅಭಿವೃದ್ಧಿ ಮತ್ತು ಆಧುನಿಕ ತಂತ್ರಜ್ಞಾನಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ವಿಜ್ಞಾನದ ಬೆಳವಣಿಗೆ ಜೀವನದ ಮೇಲೆ ದೊಡ್ಡ ಪ್ರಭಾವ ಬೀರಿದೆ. ಪ್ರತಿಯೊಬ್ಬರೂ ವಿಜ್ಞಾನವನ್ನು ಒಳ್ಳೆಯ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು. ವಿಜ್ಞಾನ ನಮ್ಮ ದೈನಂದಿನ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ವಿಜ್ಞಾನವಿಲ್ಲದೆ ಮನುಷ್ಯರು ಜೀವನವನ್ನು ಸಾಗಿಸಲು ಕಷ್ಟವಾಗುತ್ತದೆ. ವಿಜ್ಞಾನವು ಜಗತ್ತಿಗೆ ಅಭಿವೃದ್ಧಿಗೆ ಅಪಾರವಾದ ಕೊಡುಗೆಗಳನ್ನು ನೀಡಿದೆ ಎಂದು ಹೇಳಿದರು.
    ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಜಿ.ಎಸ್.ಶಿವಕುಮಾರ್ ಮಾತನಾಡಿ, ಈ ಆಧುನಿಕ ಜಗತ್ತಿನಲ್ಲಿ ಒಂದು ದೇಶವು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳನ್ನು ಮಾಡುವುದು ಇತರ ದೇಶಗಳಿಗಿಂತ ಪ್ರಬಲ, ಶಕ್ತಿಯುತ ಮತ್ತು ಉತ್ತಮವಾಗಿ ಅಭಿವೃದ್ಧಿ ಹೊಂದಲು ಬಹಳ ಅವಶ್ಯಕವಾಗಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮುಂದೆ ಸಾಗಲು ಮತ್ತು ಜೀವನದಲ್ಲಿ ಯಶಸ್ವಿಯಾಗಲು ನಮಗೆ ಹೆಚ್ಚಿನ ವಿಜ್ಞಾನದ ಅರಿವು ಅಗತ್ಯವಾಗಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts