More

    ಮಾನವೀಯತೆಯ ಶ್ರದ್ಧಾಕೇಂದ್ರ ದೇವಸ್ಥಾನ



    ಲಕ್ಷ್ಮೇಶ್ವರ: ದೇವಸ್ಥಾನಗಳು ಭಕ್ತರಲ್ಲಿ ನಂಬಿಕೆ, ಶ್ರದ್ಧೆ, ಸೌಹಾರ್ದ, ಪ್ರೀತಿ, ಮಾನವೀಯತೆ ಕರುಣಿಸುವ ಶಕ್ತಿ ಮತ್ತು ಶ್ರದ್ಧಾ ಕೇಂದ್ರಗಳಾಗಿದ್ದು, ನಿತ್ಯ ಪೂಜೆ, ಶುಚಿತ್ವದ ಜತೆಗೆ ಪಾವಿತ್ರ್ಯೆ ಕಾಪಾಡಬೇಕು ಎಂದು ಹೂವಿನ ಶಿಗ್ಲಿ ವಿರಕ್ತಮಠದ ಶ್ರೀ ಚನ್ನವೀರ ಮಹಾಸ್ವಾಮಿಗಳು ಹೇಳಿದರು.

    ಪಟ್ಟಣದಲ್ಲಿ ಸೂರ್ಯವಂಶ ಕ್ಷತ್ರೀಯ ಸಮಾಜ ಮತ್ತು ಭಕ್ತರ ಸಹಕಾರದಿಂದ ನಿರ್ವಣಗೊಂಡ ದುರ್ಗಾದೇವಿ ದೇವಸ್ಥಾನದ ಕಳಸಾರೋಹಣವನ್ನು ಶುಕ್ರವಾರ ನೆರವೇರಿಸಿ ಅವರು ಆಶೀರ್ವಚನ ನೀಡಿದರು. ಮನುಷ್ಯ ಶಾಶ್ವತವಲ್ಲ. ಆದರೆ, ಅವರು ಮಾಡುವ ಕಾರ್ಯಗಳು ಅಜರಾಮರ. ಸಮಾಜದಲ್ಲಿನ ಪ್ರತಿಯೊಬ್ಬರೂ ತಮ್ಮ ಕೈಲಾದಮಟ್ಟಿಗೆ ದೇವರು, ಧರ್ಮ, ಸಂಪ್ರದಾಯ, ಆಚರಣೆಗಳಿಗೆ ಸಹಾಯ-ಸಹಕಾರ ನೀಡಬೇಕು ಎಂದರು.

    ದೇವಸ್ಥಾನ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ದೇವಸ್ಥಾನಗಳು ಸಂಸ್ಕೃತಿಯ ಜೀವಾಳ ಮತ್ತು ಅಮೂಲ್ಯ ಆಸ್ತಿಯಾಗಿವೆ. ದೇವಸ್ಥಾನಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು ದೇವಸ್ಥಾನದಲ್ಲಿ ಪಾವಿತ್ರ್ಯೆ ಕಾಪಾಡಿಕೊಂಡು ಧರ್ಮ ಕಾರ್ಯಗಳು ನಡೆಯುವಂತಾಗಲು ಎಲ್ಲರೂ ಬದ್ಧರಾಬೇಕು ಎಂದರು.

    ಕಾರ್ಯಕ್ರಮದಲ್ಲಿ ಕೆಸಿಸಿ ಬ್ಯಾಂಕ್ ನಿರ್ದೇಶಕ ಸುನೀಲ ಮಹಾಂತಶೆಟ್ಟರ್, ದರ್ಗಾ ಕಮಿಟಿ ಅಧ್ಯಕ್ಷ ಸುಲೇಮಾನ ಕಣಿಕೆ, ಪುರಸಭೆ ಸದಸ್ಯರಾದ ಎಸ್.ಕೆ. ಹವಾಲ್ದಾರ, ಅಶ್ವಿನಿ ಅಂಕಲಕೋಟಿ, ಮಹದೇವಪ್ಪ ಅಣ್ಣಿಗೇರಿ, ಪಿಎಸ್​ಐ ಪಿ.ಎಂ. ಬಡಿಗೇರ, ವಿ.ಜಿ. ಪಡಗೇರಿ, ಮಂಜುನಾಥ ಮಾಗಡಿ, ಎಂ.ಆರ್. ಪಾಟೀಲ, ಯಲ್ಲಪ್ಪಗೌಡ ಉದ್ದನಗೌಡ್ರ, ವಾಸು ಬೋಮಲೆ, ಪ್ರಕಾಶ ಗುತ್ತಲ, ಶಾರದವ್ವ ಮಲ್ಲಾಡದ, ಮಲ್ಲೇಶಪ್ಪ ಚಿಕ್ಕೇರಿ, ನಿಂಗಪ್ಪ ಕಾಳೆ, ಕೃಷ್ಣಪ್ಪ ಅಣ್ಣಿಗೇರಿ, ಶರಣಪ್ಪ ಸವಣೂರ, ರಮೇಶ ಕಾಳೆ, ನಿಂಗಪ್ಪ ಕೋಳೂರ, ಇತರರಿದ್ದರು.

    ಕಾರ್ಯಕ್ರಮದ ನಿಮಿತ್ತ ಪಟ್ಟಣದ ಅನುಷಾ ಅಂಗಡಿ ಮತ್ತು ಮೇಘಾ ಅಂಕಲಕೋಟಿ ಸಂಗೀತ ಕಾರ್ಯಕ್ರಮ ಮತ್ತು ಕಲಾ ಸುಜಯ ಭರತನಾಟ್ಯ ಶಾಲೆಯ ಭವ್ಯ ಕತ್ತಿ ಅವರಿಂದ ಭರತನಾಟ್ಯ ಪ್ರದರ್ಶನ ನಡೆಯಿತು. ಸಮಾಜದ ಮುಖಂಡ ತಿಪ್ಪಣ್ಣ ರೊಟ್ಟಿಗವಾಡ, ಶಿಕ್ಷಕ ಈಶ್ವರ ಮೆಡ್ಲೇರಿ ನಿರ್ವಹಿಸಿದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts