More

    ಮಾನವೀಯತೆಯಿಂದ ಸಾತ್ವಿಕ ಸಮಾಜ -ಲೋಕಾಯುಕ್ತ ನಿವೃತ್ತ ನ್ಯಾಯಾಧೀಶ ಸಂತೋಷ್ ಹೆಗಡೆ – ಲೇಸರ್ ಶೋ ಪ್ರದರ್ಶನ

    ದಾವಣಗೆರೆ: ಪ್ರತಿಯೊಬ್ಬರೂ ಮಾನವೀಯತೆ ರೂಢಿಸಿಕೊಂಡಾಗ ಮಾತ್ರ ಸಾತ್ವಿಕ ಸಮಾಜ ನಿರ್ಮಾಣ ಸಾಧ್ಯ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಾಧೀಶ ಎನ್. ಸಂತೋಷ್ ಹೆಗಡೆ ಹೇಳಿದರು.

    ಸ್ವಸ್ತಿಕ್ ಗ್ರೂಪ್‌ವತಿಯಿಂದ ಗಣೇಶೋತ್ಸವದ ಅಂಗವಾಗಿ ನಗರದ ನರಹರಿಶೇಟ್ ಸಭಾಭವನದಲ್ಲಿ ಆಯೋಜಿಸಿದ್ದ ಸಂಗೀತ ಕಾರಂಜಿಯ ಲೇಸರ್ ಶೋ ಉದ್ಘಾಟಿಸಿ ಮಾತನಾಡಿದರು.
    ಮನುಷ್ಯ ಬೆಳೆಯುತ್ತ ಹೋದಂತೆ ಮಾನವೀಯತೆ ರೂಢಿಸಿಕೊಳ್ಳಬೇಕು. ಸಾವಿನವರೆಗೂ ಅದು ಇರಬೇಕು. ಇದು ಸಂಸ್ಕಾರದಿಂದ ಬರಬೇಕು ಎಂದು ತಿಳಿಸಿದರು.
    ಭ್ರಷ್ಟಾಚಾರ, ಅನೈತಿಕತೆ, ಅವ್ಯವಹಾರ ಎಲ್ಲದಕ್ಕೂ ದುರಾಸೆ ಕಾರಣ. ಇದಕ್ಕೆ ತೃಪ್ತಿಯೇ ಮದ್ದು. ಶ್ರೀಮಂತಿಕೆ ಹೊಂದುವುದು ತಪ್ಪಲ್ಲ. ಆದರೆ, ಅದು ಕಾನೂನು ಚೌಕಟ್ಟು ಹಾಗೂ ನೈತಿಕತೆ ಆಧಾರದಲ್ಲಿ ಇರಬೇಕು ಎಂದು ಹೇಳಿದರು.
    ನಾವು ಚಿಕ್ಕವರಿದ್ದಾಗ ಹಳ್ಳಿಗಳಲ್ಲಿ ಅಪರಾಧ ಮಾಡಿದವರನ್ನು ಸಮಾಜ ಕೀಳಾಗಿ ಕಾಣುವ ಮೂಲಕ ಪಾಠ ಕಲಿಸುತ್ತಿತ್ತು. ಆದರೆ, ಈಗ ಜೈಲಿಗೆ ಹೋಗಿ ಬಂದವರಿಗೆ ಹಾರ ಹಾಕಿ ಅಧಿಕಾರದಲ್ಲಿ ಕೂರಿಸುವ ಪರಿಪಾಠ ನಡೆದಿದೆ. ಹಿಂದಿನಂತೆ ತಪ್ಪು ಮಾಡಿದವರಿಗೆ ಮನೆಯಲ್ಲಿ ಶಿಕ್ಷೆ ನೀಡುವುದು ಹಾಗೂ ಶಾಲೆಯಲ್ಲಿ ನೀತಿ ಪಾಠ ಹೇಳುವುದು ಈಗ ಇಲ್ಲವಾಗಿದೆ ಎಂದು ವಿಷಾದಿಸಿದರು.
    ವ್ಯಂಗ್ಯ ಚಿತ್ರಕಾರ ಎಚ್.ಬಿ. ಮಂಜುನಾಥ್ ಅವರು ರಚಿಸಿ ಸಂಯೋಜಿಸಿದ ಭಗೀರಥ ಪ್ರಯತ್ನದ ಪುರಾಣ ಕಥನದ ಲೇಸರ್ ಶೋ ನಡೆಯಿತು. ಎ.ಜಿ. ಮಂಜುನಾಥ್, ನಾಗರಾಜ್, ರವಿ, ಎ.ಎಂ. ಮಹೇಶ್, ಎ.ಎಂ. ಕೃಷ್ಣ, ಪ್ರವೀಣ್, ಪ್ರಸನ್ನ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts