More

    ಮಾನವರ ನಡುವೆ ಗೋಡೆ ಕಟ್ಟಲು ಬಿಡಬಾರದು- ಸಿದ್ದರಾಮಯ್ಯ

    ದಾವಣಗೆರೆ: ಜಾತಿ-ಧರ್ಮದ ಹೆಸರಲ್ಲಿ ಕೆಲವರು, ಮಾನವರ ನಡುವೆ ಗೋಡೆ ಕಟ್ಟುತ್ತಿದ್ದಾರೆ. ಇಂತಹ ಗೋಡೆ ಒಡೆಯುವುದು ನಮ್ಮೆಲ್ಲರ ಜವಾಬ್ದಾರಿ ಆಗಬೇಕು ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

    ಇಲ್ಲಿನ ರಾಜವೀರ ಮದಕರಿನಾಯಕ ವೃತ್ತದಲ್ಲಿ ಶುಕ್ರವಾರ, ಎಲ್‌ಬಿಕೆ ಕಲ್ಯಾಣ ಟ್ರಸ್ಟ್‌ನಿಂದ ಹಮ್ಮಿಕೊಂಡಿದ್ದ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಸಾಮೂಹಿಕ ವಿವಾಹವಾದವರು ತಮ್ಮ ಮಕ್ಕಳಿಗೂ ಸರಳ ಅಥವಾ ಸಾಮೂಹಿಕ ವಿವಾಹದ ಬಗ್ಗೆ ಅರಿವು ಮೂಡಿಸಿದಲ್ಲಿ ಸಮಾಜದಲ್ಲಿ ಬಡತನ ಸ್ವಲ್ಪ ಪ್ರಮಾಣದಲ್ಲಿ ತಗ್ಗಲಿದೆ ಎಂದು ಹೇಳಿದರು.
    ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮಾತನಾಡಿ, ಸರ್ವಧರ್ಮ ವಿವಾಹ ಆಯೋಜನೆ ಒಳ್ಳೆಯ ಹೆಜ್ಜೆ. ರಾಜಕಾರಣಿ, ಬುದ್ಧಿಜೀವಿಗಳು ಇದನ್ನು ಆಯೋಜಿಸಬೇಕು ಎಂದರು.
    ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮಾತನಾಡಿ, ಸತಿ-ಪತಿ ಇಬ್ಬರೂ ರಥದ ಎರಡು ಗಾಲಿಗಳು. ನವ ಜೋಡಿಗಳು ಹೊಂದಾಣಿಕೆ ಜೀವನದಿಂದ ದೇಶಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದು ಹೇಳಿದರು.
    ಸಾನ್ನಿಧ್ಯ ವಹಿಸಿದ್ದ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ ಸಿದ್ದರಾಮಯ್ಯಅವರು ಮುಂದಿನ ಮುಖ್ಯಮಂತ್ರಿ ಆದರೆ ಕರ್ನಾಟಕ ಕಲ್ಯಾಣ ಆಗಲಿದೆ ಎಂದರು.
    ಕಾರ್ಯಕ್ರಮದಲ್ಲಿ ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಶಾಸಕ ಎಸ್.ರಾಮಪ್ಪ, ಎಂಎಲ್ಸಿ ಅಬ್ದುಲ್ ಜಬ್ಬಾರ್, ಮುಖಂಡರಾದ ಎಂ.ಟಿ.ಸುಭಾಶ್ಚಂದ್ರ, ಹೊದಿಗೆರೆ ರಮೇಶ್, ಡಾ.ವೈ.ರಾಮಪ್ಪ, ಕೆ.ಪಿ.ಪಾಲಯ್ಯ, ಡಿ.ಬಸವರಾಜ್, ಅಯೂಬ್ ಪೈಲ್ವಾನ್, ಸವಿತಾ ಮಲ್ಲೇಶನಾಯ್ಕ, ಸಾದಿಕ್ ಪೈಲ್ವಾನ್, ಬಿ.ವೀರಣ್ಣ, ಲಕ್ಷ್ಮೀದೇವಿ ವೀರಣ್ಣ, ಆಂಜನೇಯ ಗುರೂಜಿ, ವಿನಾಯಕ ಪೈಲ್ವಾನ್ ಇತರರಿದ್ದರು. 15 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts