More

    ಮಾನವನ ಹಕ್ಕುಗಳನ್ನು ರಕ್ಷಿಸಿ

    ಹುಕ್ಕೇರಿ: ದಿನನಿತ್ಯ ಮುಗ್ಧ ಜನಗಳ ಮೇಲೆ ಒಂದಿಲ್ಲೊಂದು ರೀತಿಯಲ್ಲಿ ಆಗುತ್ತಿರುವ ಹಿಂಸೆಯನ್ನು ತಡೆದು ಮಾನವ ಹಕ್ಕುಗಳನ್ನು ರಕ್ಷಿಸಬೇಕಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಎಸ್.ರೊಟ್ಟೇರ ಹೇಳಿದರು. ಇಲ್ಲಿನ ಮಿನಿ ವಿಧಾನಸೌಧ ಬಳಿಯ ಕಂದಾಯ ಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ತಾಲೂಕಾಡಳಿತದ ವತಿಯಿಂದ ಶನಿವಾರ ಜರುಗಿದ ಅಂತಾರಾಷ್ಟ್ರೀಯ ಮಾನವ ಹಕ್ಕು ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜೀತ ಪದ್ಧತಿ, ಬಾಲ ಕಾರ್ಮಿಕರ ದುಡಿಮೆ, ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ, ಪೊಲೀಸ್ ಇಲಾಖೆ ಆರೋಪಿಗಳಿಗೆ ನೀಡುವ ಚಿತ್ರಹಿಂಸೆಯಿಂದ ಮಾನವ ಹಕ್ಕು ಉಲ್ಲಂಘನೆ ಆಗುತ್ತಿದೆ. ಮಾನವ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವುದರಿಂದ ಹಿಂಸೆಯ ಪ್ರಮಾಣ ಕಡಿಮೆಯಾಗುತ್ತದೆ ಎಂದರು. ಸಿವಿಲ್ ನ್ಯಾಯಾಧೀಶ ಕೆ.ಅಂಬಣ್ಣ ಮತ್ತು ವಕೀಲರ ಸಂಘದ ಅಧ್ಯಕ್ಷ ರಾಜೀವ ಚೌಗಲಾ ಮಾತನಾಡಿದರು. ವಕೀಲ ಕೆ.ಪಿ.ಶಿರಗಾಂವಕರ ಹಾಗೂ ಮಹಿಳಾ ಸಾಂತ್ವನ ಕೇಂದ್ರದ ಸುರೇಖಾ ಪಾಟೀಲ ಉಪನ್ಯಾಸ ನೀಡಿದರು. ವಕೀಲರ ಸಂಘದ ಉಪಾಧ್ಯಕ್ಷ ಎನ್.ಐ.ದೇಮಣ್ಣವರ, ಬಿ.ಕೆ.ಮಗೆನ್ನವರ, ಎಸ್.ಜಿ.ಗೌವಡ್ಯಾಗೋಳ, ಆಶಾ ಸಿಂಗಾಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts