More

    ಮಾಧ್ಯಮ-ಆಂದೋಲನದಿಂದ ಪರಿವರ್ತನೆ ಸಾಧ್ಯ

    ಚಿತ್ರದುರ್ಗ: ಮೂಲ ಸಂಗತಿಗಳ ಬದಲಾವಣೆ ಗುರುತಿಸ ಬೇಕಾದ ಮಾಧ್ಯಮಗಳಿಂದು ಉದ್ಯಮಗಳಾಗಿ ಬದಲಾಗುತ್ತಿರುವುದಾಗಿ ಜಾಗೃತ ಕರ್ನಾಟಕ ವೇದಿಕೆ ಅಧ್ಯಕ್ಷ ಡಾ.ವಾಸು ವಿಷಾದಿಸಿದರು.
    ಬೆಂಗಳೂರು ಡಿಜಿಟಲ್ ಮಾಧ್ಯಮ, ಧಮ್ಮ ಸಾಂಸ್ಕೃತಿಕ ವೇದಿಕೆ, ಕರ್ನಾಟಕ ಶಾಂತಿ ಮತ್ತು ಸೌಹಾರ್ದ ವೇದಿಕೆ ಸಹಯೋಗದಲ್ಲಿ ಸೀ ಬಾರದ ಧಮ್ಮ ಕೇಂದ್ರದಲ್ಲಿ ಶುಕ್ರವಾರ ನಡೆದ ‘ಸಮಾಜ ನಿರ್ಮಾಣದಲ್ಲಿ ಮಾಧ್ಯಮಗಳ ಪಾತ್ರ’ ಸಂವಾದ ಕಾರ‌್ಯಕ್ರಮ ಉದ್ಘಾಟಿಸಿ ಅವ ರು ಮಾತನಾಡಿದರು.
    ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಅಧಿಕಾರಾವಧಿ ಆದ ತುರ್ತು ಪರಿಸ್ಥಿತಿ ಘೋಷಣೆ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಕರಾಳ ದಿನವಾಗಿತ್ತು. ಪ್ರತಿಭಟನಾಕಾರರನ್ನು ಜೈಲಿಗೆ ಹಾಕಲಾಯಿತು. ಮಾಧ್ಯಮ ಸ್ವಾತಂತ್ರವನ್ನು ಹರಣಗೊಳಿಸಲಾಗಿತ್ತು. ಆದರೆ ಈಗ ಸಮಾಜ ದ ಬದಲಾವಣೆಗೆ ಮಾಧ್ಯಮಗಳ ಕೊಡುಗೆ ಏನು ಎಂಬ ಪ್ರಶ್ನೆ ಸಾಮಾನ್ಯ ಜನರಲ್ಲಿ ಕಾಡತೊಡಗಿದೆ. ಬದಲಾವಣೆ ಕಂಡು ಕೊಳ್ಳದಿದ್ದರೆ ಹೋರಾಟ, ಚಳವಳಿಗಳು ಅಪ್ರಸ್ತುತವಾಗುತ್ತವೆ.
    ಕೇಂದ್ರದ ಕೃಷಿ ಕಾಯ್ದೆ ನೀತಿ ವಿರೋಧಿಸಿ ಹೊಸದಿಲ್ಲಿಯಲ್ಲಿ ರೈತರು ಗಾಳಿ ಮಳೆ ಲೆಕ್ಕಿಸದೆ ಹಗಲು-ರಾತ್ರಿ ಹೋರಾಟ ನಡೆಸುತ್ತಿದ್ದಾಗ ಮಾಧ್ಯಮಗಳ ಪ್ರಭಾವ ಅಷ್ಟಾಗಿ ಕಂಡು ಬರಲಿಲ್ಲ. ಡಿಜಿಟಲ್ ಮೀಡಿಯಾ ಪ್ರಭಾವವಿಂದು ಅಧಿಕವಾಗುತ್ತಿದೆ. ಮಾಧ್ಯಮವಿಂದು ಹೊಸ ಬೆಳವಣಿಗೆ ಕಾಲಘಟ್ಟದಲ್ಲಿದೆ. ಮಾಧ್ಯಮ, ಆಂದೋಲನ ಸೇರಿದಾಗ ಪರಿವರ್ತನೆ ಸಾಧ್ಯ. ಎಲ್ಲ ರಂಗಗಳಂತೆ ಈ ರಂಗವೂ ಕೆಟ್ಟಿದೆ ಎಂದು ಇಡೀ ಮಾಧ್ಯಮ ದೂಷಣೆ ಕೂಡ ಸಲ್ಲದೆಂದರು.
    ಸಾಮಾಜಿಕ ಚಿಂತಕ ಜೆ.ಯಾದವರೆಡ್ಡಿ ಮಾತನಾಡಿ, ಕಂಬಾಲಪಲ್ಲಿ ದಲಿತರ ಹತ್ಯಾಕಾಂಡ, ಮಡೆಸ್ನಾನ ಹೀಗೆ ಹತ್ತು ಹಲವು ಪ್ರಕರಣ ಗಳಲ್ಲಿ ಮಾಧ್ಯಮಗಳ ಪಾತ್ರ ಅತ್ಯಂತ ಗಂಭೀರವಾಗಿದ್ದುದರಿಂದ ನಿಜ ಸಂಗತಿಗಳು ಹೊರಬರಲು ಸಾಧ್ಯವಾಯಿತು. ಎಷ್ಟೊ ಮುಚ್ಚಿ ಹೋಗಿದ್ದ ಪ್ರಕರಣಗಳನ್ನು ಬೆಳಕಿಗೆ ತಂದು ನೊಂದವರಿಗೆ ನ್ಯಾಯ ಕೊಡಿಸುವಲ್ಲಿ ಮಾಧ್ಯಮಗಳು ಇಂದಿಗೂ ನಿಷ್ಠುರವಾಗಿ ಕೆಲಸ ಮಾಡುತ್ತಿವೆ. ಅಪ್ಪರ್‌ಭದ್ರಾ ಯೋಜನೆ ಜಾರಿಗೆ ನಡೆದ ಹೋರಾಟದಲ್ಲಿ ಮಾಧ್ಯಮದ ಪಾತ್ರ ಸಾಕಷ್ಟಿದೆ ಎಂದರು.
    ಧಮ್ಮ ಕೇಂದ್ರದ ಆರ್.ವಿಶ್ವಸಾಗರ್,ವಿಮುಕ್ತಿ ಧಮ್ಮ ಕೇಂದ್ರದ ಅಧ್ಯಕ್ಷೆ ಅನ್ನಪೂರ್ಣ ಆರ್.ವಿಶ್ವಸಾಗರ್,ಕರ್ನಾಟಕ ಶಾಂತಿ ಮತ್ತು ಸೌ ಹಾರ್ದ ವೇದಿಕೆ ಅಧ್ಯಕ್ಷ ನರೇನಹಳ್ಳಿ ಅರುಣ್‌ಕುಮಾರ್,ಮಕ್ಕಳ ತಜ್ಞ ಡಾ.ಚಂದ್ರನಾಯ್ಕ ಇದ್ದರು. ವಾಲ್ಮೀಕಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಎಂ.ಎನ್.ಅಹೋಬಲಪತಿ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಎಚ್.ಲಕ್ಷ್ಮಣ್, ಪತ್ರಿಕಾ ಛಾಯಾಗ್ರಾಹಕ ದ್ವಾರಕನಾಥ್ ಅವರನ್ನು ಗೌರವಿಸಲಾಯಿತು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts