More

    ಮಾದಿಗ ಜನಾಂಗದಿಂದ ಸಂಭ್ರಮಾಚರಣೆ

    ನಂಜನಗೂಡು: ಹಲವು ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಮಾದಿಗ ಜನಾಂಗದ ಒಳ ಮೀಸಲಾತಿಯನ್ನು ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಜಾರಿಗೆ ತಂದಿರುವುದಕ್ಕೆ ನಂಜನಗೂಡಿನಲ್ಲಿ ಮಾಜಿ ಸಚಿವ ಕೋಟೆ ಎಂ.ಶಿವಣ್ಣ ನೇತೃತ್ವದಲ್ಲಿ ಮಾದಿಗ ಜನಾಂಗದವರು ಬುಧವಾರ ಸಿಹಿ ಹಂಚಿ ಸಂಭ್ರಮ ಆಚರಿಸಿದರು.

    ನಗರದ ಡಾ..ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಕೋಟೆ ಎಂ.ಶಿವಣ್ಣ, ರಾಜ್ಯದಲ್ಲಿ ಎಸ್ಸಿಗೆ ಸೇರಿದ 101 ಜಾತಿಗಳಿದ್ದು, ಎಡಗೈ ಸಮಾಜಕ್ಕೆ ಹೆಚ್ಚಿನ ಮೀಸಲಾತಿಯನ್ನು ಜಾರಿಗೊಳಿಸುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ದಿಟ್ಟ ನಿಲುವು ಪ್ರದರ್ಶಿಸುವ ಮೂಲಕ ಜಾರಿಗೆ ತಂದಿದ್ದಾರೆ ಎಂದು ಪ್ರಶಂಸಿಸಿದರು.

    ಕಳೆದ 30 ವರ್ಷಗಳಿಂದ ಎಡಗೈ ಸಮಾಜವು ಮೀಸಲಾತಿಗಾಗಿ ಹೋರಾಟ ಮಾಡುತ್ತಿತ್ತು. 2004ರಲ್ಲಿ ಸರ್ಕಾರ ಸದಾಶಿವ ಆಯೋಗಗಳ ರಚನೆ ಮಾಡಿತು. ಆದರೆ ವರದಿಯನ್ನು ಜಾರಿಗೊಳಿಸಿರಲಿಲ್ಲ. ಬಿಜೆಪಿ ಪಕ್ಷದ ವರಿಷ್ಠರು ಎಲ್ಲರೂ ಸೇರಿ ಸದಾಶಿವ ಆಯೋಗದ ಬದಲು ಒಳ ಮೀಸಲಾತಿಯನ್ನು ಈ ಜನಾಂಗಕ್ಕೆ ನೀಡಬೇಕೆಂದು ತೀರ್ಮಾನಿಸಿ ಒಳಮೀಸಲಾತಿ ಜಾರಿಗೆ ತಂದಿರುವುದು ಶ್ಲಾಘನೀಯ. ಇದರಿಂದ ಇಡೀ ರಾಜ್ಯದಲ್ಲಿ ಮಾದಿಗ ಜನಾಂಗಕ್ಕೆ ಒಳಮೀಸಲಾತಿಯಿಂದ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಉದ್ಯೋಗದಲ್ಲಿ ಅನುಕೂಲ ದೊರಕಲು ನೆರವಾಗಲಿದೆ ಎಂದರು.

    ಬಿಜೆಪಿ ಯುವ ಮೊರ್ಚಾ ಜಿಲ್ಲಾ ಉಪಾಧ್ಯಕ್ಷ ಮಧುರಾಜ್, ನಗರಸಭಾ ಸದಸ್ಯರಾದ ವಿಜಯಲಕ್ಷ್ಮೀ, ಮಂಗಳಮ್ಮ, ದೇವು, ಮಹದೇವಪ್ರಸಾದ್, ಮುಖಂಡ ಹುಲ್ಲಹಳ್ಳಿ ಮಹದೇವು, ಪುರಸಭಾ ಮಾಜಿ ಉಪಾಧ್ಯಕ್ಷ ದೇವರಾಜು, ರಾಜೇಶ್, ಶ್ರೀನಿವಾಸ್, ಪ್ರಸನ್ನ ಚಕ್ರವರ್ತಿ, ಕೃಷ್ಣಪ್ಪ, ನಂಜಪ್ಪ, ಆನಂದ್, ಪ್ರತಿಧ್ವನಿ ತ್ರಿಣೇಶ್, ರೇವಣ್ಣ, ಚಂದ್ರು, ಸಿದ್ದರಾಜು ಸೇರಿದಂತೆ ಹಲವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts