More

    ಮಾದರಿ ಸಮಾಜ ನಿರ್ಮಾಣಕ್ಕೆ ಮುಂದಾಗಿ

    ಯಾದಗಿರಿ: ಖಾಸಗಿ ಶಿಕ್ಷಣ ಸಂಸ್ಥೆಗಳು ನಿಸ್ವಾರ್ಥದಿಂದ ಸಮಾಜ ಸೇವೆಗೆ ಮುಂದಾಗುವ ಮೂಲಕ ಮಾದರಿ ಸಮಾಜ ನಿರ್ಮಾಣಕ್ಕೆ ಮುಂದಾಗುವ ಅವಶ್ಯಕತೆ ಇದೆ ಎಂದು ಪ್ರಭಾರಿ ಡಿಡಿಪಿಐ ಸುರೇಶ ಹುಗ್ಗಿ ಅಭಿಪ್ರಾಯಪಟ್ಟರು.

    ನಗರದ ಆರ್.ವಿ.ವಿದ್ಯಾ ಸಂಸ್ಥೆಯಲ್ಲಿ ಗುರುವಾರ ಆಯೋಜಿಸಿದ್ದ ಶಾಲಾ ಸಂಸ್ಥಾಪನಾ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗುಣಾತ್ಮಕ ಶಿಕ್ಷಣದ ಜತೆಗೆ ಸಮಾಜದಲ್ಲಿನ ಕಟ್ಟ ಕಡೆಯ ವ್ಯಕ್ತಿಯ ಹಿತ ಕಾಪಾಡುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಹೆಚ್ಚಿದೆ. ಒಬ್ಬ ಪ್ರತಿಭಾನಿತ್ವ ವಿದ್ಯಾಥರ್ಿ ಆಥರ್ಿಕ ಸಮಸ್ಯೆ ಎದುರಿಸುತ್ತಿದ್ದರೆ, ಅಂಥವನಿಗೆ ಸಂಸ್ಥೆಯಲ್ಲಿ ಸೀಟು ಕೊಡಿಸಿ, ಉನ್ನತ ಹುದ್ದೆ ಪಡೆಯುವಂತೆ ಮಾಡಿದ ಅನೇಕ ಸಂಸ್ಥೆಗಳು ನಮ್ಮೆದುಗಡೆ ಇವೆ ಎಂದು ಹೇಳಿದರು.

    ಆರ್ವಿ ಶಿಕ್ಷಣ ಸಂಸ್ಥೆ ಯಾದಗಿರಿಯಲ್ಲಿ ಕಳೆದ 2 ದಶಕದಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೆಯಾದ ಕೊಡುಗೆ ನೀಡಿದೆ. ಇಲ್ಲಿ ಶಿಕ್ಷಣ ಕಲಿತ ಸಾವಿರಾರು ವಿದ್ಯಾಥರ್ಿಗಳು ಒಂದು ಹೊರದೇಶದಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ ಎಂದು ಬಣ್ಣಿಸಿದರು. ಇದೇ ವೇಳೆ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತೀಹೆಚ್ಚು ಅಂಕ ಪಡೆದ ಸಂಸ್ಥೆಯ ವಿದ್ಯಾಥರ್ಿಗಳನ್ನು ಸನ್ಮಾನಿಸಲಾಯಿತು.

    ಸಂಸ್ಥೆಯ ಅಧ್ಯಕ್ಷೆ ಕಮಲಾ ಎನ್. ದೇವರಕಲ್, ಪ್ರಾಚಾರ್ಯ ನಾಗರಾಜ ಡಿ., ನಿವೃತ್ತ ಪ್ರಾಚಾರ್ಯ ನರೇಂದ್ರ ಬಡಶೇಷಿ, ಬಸನಗೌಡ, ಸುರೇಶ್ ನೀಲಂಗಿ ಇದ್ದರು. ರೇಣುಕಾ ನಾಯಕ ಸ್ವಾಗತಿಸಿದರು. ಗೀತಾ ಹಿರೇಮಠ ನಿರೂಪಿಸಿದರು. ಕವಿತಾ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts