More

    ಮಾದರಿ ಕಾರ್ಖಾನೆ ಮಾಡಲು ಶ್ರಮ

    ನಿಪ್ಪಾಣಿ: ಸರ್ಕಾರವು ಬಡ್ಡಿಗೆ ರಿಯಾಯಿತಿ ನೀಡಲಾಗುವುದೆಂದರೂ ಯಾವ ಬ್ಯಾಂಕ್‌ಗಳು ಕಾರ್ಖಾನೆಗೆ ಸಾಲ ಕೊಡಲು ಮುಂದಾಗಲಿಲ್ಲ. ಆದಾಗ್ಯೂ ಕಾರ್ಖಾನೆಯನ್ನು ಅಭಿವೃದ್ಧಿಪಡಿಸಿ ಮಾದರಿ ಕಾರ್ಖಾನೆ ಮಾಡಲಾಗುವುದು ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

    ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಶುಕ್ರವಾರ ಮದ್ಯಸಾರ ಘಟಕ ಹಾಗೂ ಬಾಯ್ಲಿಂಗ್ ಹೌಸ್‌ನ ವಾಸ್ತುಶಾಂತಿ ಪೂಜೆ ಸಮಾರಂಭ ಮತ್ತು ಪುನಶ್ಚೇತನಗೊಂಡ 30್ಡ60 ಅಡಿ ಕಬ್ಬು ನುರಿಸುವ ಗಿರಣಿಗೆ ಚಾಲನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಕಾರ್ಖಾನೆಯ ಹಳೆಯ ಗಿರಣಿ (ಮಿಲ್) ಯ ಯಂತ್ರೋಪಕರಣಗಳನ್ನು ಮಾರಾಟ ಮಾಡಿದಲ್ಲಿ 8 ಕೋಟಿ ರೂ.ಮಾತ್ರ ಆದಾಯ ಬರುವಂತಿತ್ತು. ಅದೇ ಹಳೆಯ ಯಂತ್ರೋಪಕರಣಗಳನ್ನು ಸುಮಾರು 50 ಕೋಟಿ ರೂ.ವೆಚ್ಚದಲ್ಲಿ ಆಧುನೀಕರಣಗೊಳಿಸಿ ಪ್ರತಿದಿನ ಸುಮಾರು 2.5 ಸಾವಿರ ಕಬ್ಬು ನುರಿಸುವ ಕ್ಷಮತೆಯ ಮತ್ತೊಂದು ಗಿರಣಿ ಪುನಶ್ಚೇತನಗೊಳಿಸಲಾಗಿದೆ. ಕ್ಷಮತೆ ಹೆಚ್ಚಿದಂತೆ ವೆಚ್ಚ ಕಡಿಮೆ ಬರುತ್ತಿದ್ದರಿಂದ 110 ಕೋಟಿ ರೂ.ವೆಚ್ಚದಲ್ಲಿ 150 ಕೆಎಲ್‌ಪಿಡಿ ಕ್ಷಮತೆಯ ಎಥೆನಾಲ್ ಘಟಕ ಸ್ಥಾಪನೆ ಮಾಡಲಾಗಿದೆ ಎಂದರು.

    ಕಾರ್ಖಾನೆ ಅಧ್ಯಕ್ಷ ಚಂದ್ರಕಾಂತ ಕೋಠಿವಾಲೆ ಮಾತನಾಡಿ, ಸಂಸದ ಜೊಲ್ಲೆ ಅವರು 15 ಸಾವಿರ ಮೆ.ಟನ್ ಕಬ್ಬು ನುರಿಸಲು ಚಿಂತನೆ ನಡೆಸಿದ್ದಾರೆ. ಇದರಿಂದ ಈ ಭಾಗದ ರೈತರಿಗೆ, ಕಾರ್ಮಿಕರಿಗೆ ಮತ್ತಷ್ಟು ಒಳಿತಾಗಲಿದೆ ಎಂದರು.

    ವ್ಯವಸ್ಥಾಪಕ ನಿರ್ದೇಶಕ ಶಿವ ಕುಲಕರ್ಣಿ ಮಾತನಾಡಿ, ಜೊಲ್ಲೆ ದಂಪತಿ ಸಹಕಾರದಿಂದ ಕಾರ್ಖಾನೆ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದರು. ಸಂಚಾಲಕ ಆರ್.ವೈ.ಪಾಟೀಲ ಮಾತನಾಡಿದರು. ಚಿಂಚಣಿಯ ಸಿದ್ಧಸಂಸ್ಥಾನಮಠದ ಅಲ್ಲಮಪ್ರಭು ಸ್ವಾಮೀಜಿ, ರಾಜು ಕಾನಡೆ ಮಾತನಾಡಿದರು.

    ರಾಜ್ಯ ಸಕ್ಕರೆ ಮಹಾಮಂಡಳ ಅಧ್ಯಕ್ಷ ವಿಶ್ವನಾಥ ಕಮತೆ, ಕಾರ್ಖಾನೆ ನಿರ್ದೇಶಕ ಅಪ್ಪಾಸಾಹೇಬ ಜೊಲ್ಲೆ, ರಾಮಗೊಂಡ ಪಾಟೀಲ, ಸಮಿತ ಸಾಸನೆ, ಸುಕುಮಾರ ಪಾಟೀಲ, ಮಾಳಪ್ಪ ಪಿಸೂತ್ರೆ, ಪ್ರತಾಪ ಮೇತ್ರಾನಿ, ಉಜ್ವಲಾ ಶಿಂಧೆ, ರಾಜಾರಾಮ ಖೋತ, ಕಲ್ಲಪ್ಪ ನಾಯಿಕ, ಮನಿಷಾ ರಾಂಗೋಳೆ, ಜಯಕುಮಾರ ಖೋತ, ಕಿರಣ ನಿಕಾಡೆ, ಅಮಿತ ರಣದಿವೆ, ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ರಾಜೇಂದ್ರ ಗುಂದೇಶಾ ಇತರರು ಇದ್ದರು. ಇಂಜಿನಿಯರ್ ನವೀನ ಬಾಡಕರ ನಿರೂಪಿಸಿದರು. ಉಪಾಧ್ಯಕ್ಷ ಮಲಗೊಂಡ ಪಾಟೀಲ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts