More

    ಮಾದಕ ವಸ್ತುಗಳಿಂದ ದೂರವಿರಿ – ಪೊಲೀಸ್​ ಆಯುಕ್ತ ಡಾ.ಬೋರಲಿಂಗಯ್ಯ

    ಬೆಳಗಾವಿ: ಪ್ರಸ್ತುತ ದಿನಗಳಲ್ಲಿ ಮಾದಕ ವ್ಯಸನವು ಕ್ರಿಮಿನಲ್​ ಅಪರಾಧಕ್ಕಿಂತ ಸಾಮಾಜಿಕ ಸಮಸ್ಯೆಯಾಗಿ ಪರಿಣಮಿಸಿದೆ. ಇದರ ಪರಿಣಾಮ ಆರ್ಥಿಕತೆಯೊಂದಿಗೆ ಆರೋಗ್ಯದ ಮೇಲೂ ಬೀರುತ್ತಿದೆ ಎಂದು ಮಹಾನಗರ ಪೊಲೀಸ್​ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ಹೇಳಿದ್ದಾರೆ.

    ನಗರದ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯ ಹಾಗೂ ಪೊಲೀಸ್​ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಾದಕ ದ್ರವ್ಯ, ಸೈಕೋಟ್ರೋಫಿಕ್​ ವಸ್ತು ಕಾಯ್ದೆ&1985 ಕುರಿತು ಪೊಲೀಸ್​ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಹಮ್ಮಿಕೊಂಡಿದ್ದ ಅರಿವು ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

    ಪ್ರಸಕ್ತ ಸಾಲಿನಲ್ಲಿ ಮಾದಕ ದ್ರವ್ಯ, ಸೈಕೋಟ್ರೋಫಿಕ್​ ವಸ್ತು ಕಾಯ್ದೆ&1985 ಅಡಿ 29 ಪ್ರಕರಣ ದಾಖಲಿಸಿದ್ದೇವೆ. ನಮ್ಮ ಅಧಿಕಾರಿಗಳು ಹಳೆಯ ಪ್ರಕರಣಗಳ ವಿಚಾರಣೆಯಲ್ಲಿ ತೊಡಗಿದ್ದಾರೆ. ಯುವಕರು ಮಾದಕ ವಸ್ತುಗಳಿಂದ ದೂರವಿದ್ದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

    ಸಂಪನ್ಮೂಲ ವ್ಯಕ್ತಿ ಜಿ.ಎಂ.ವಾಘ್​, ನಿವೃತ್ತ ಸರ್ಕಾರಿ ಅಭಿಯೋಜಕ ಅಣ್ಣಾಸಾಹೇಬ ಪರಶೆಟ್ಟಿ, ಡಿಸಿಪಿಗಳಾದ ರವೀಂದ್ರ ಗಡಾದಿ, ಪಿ.ವಿ.ಸ್ನೇಹಾ, ಕಾಲೇಜು ಆಡಳಿತ ಮಂಡಳಿ ಅಧ್ಯ ಎಂ.ಆರ್​.ಕುಲಕರ್ಣಿ, ಪ್ರಾಂಶುಪಾಲ ಎ.ಎಚ್​.ಹವಾಲ್ದಾರ್​ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts