More

  1200 ಕಿ.ಮೀ, 12 ದಿನ ಹುಡುಕಾಡಿ ಆರೋಪಿಯನ್ನು ಬಂಧಿಸಿದ ಮುಂಬೈ ಪೊಲೀಸರು

  ಮುಂಬೈ: 12 ದಿನಗಳ ಕಾಲ ವಿವಿಧ ರಾಜ್ಯಗಳಲ್ಲಿ ಸುಮಾರು 1200 ಕಿಲೋಮೀಟರ್ ಹುಡುಕಾಡಿದ ಬಳಿಕ ಮುಂಬೈ ಪೊಲೀಸರು ಪತ್ನಿ ಮತ್ತು ಸಹೋದರನನ್ನು ಕೊಂದು ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಡ್ರೈಸನ್ (40) ಬಂಧಿತ ಆರೋಪಿ.

  ಇದನ್ನೂ ಓದಿ:ಅಯೋಧ್ಯೆ ರಾಮಮಂದಿರ ಉದ್ಘಾಟನೆ: 84 ಗಂಗಾ ಘಾಟ್‌ಗಳಲ್ಲಿ ಭಕ್ತರಿಗೆ ಸಿಗಲಿದೆ ಉಚಿತ ದೋಣಿ ಸವಾರಿ! 

  ಡಿಸೆಂಬರ್ 29 ರಂದು ಪತ್ನಿ ಚಿತ್ರಾ (35) ಮತ್ತು ಹಿರಿಯ ಸಹೋದರ ಡೇಮಿಯನ್ ಜೊತೆ ಜಗಳ ಮಾಡಿ ನಂತರ ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದ.

  ಘಟನೆ ಬಗ್ಗೆ ಆರೋಪಿಯ ಅತ್ತಿಗೆ ಬಿಂದು ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ತಾನು ಕಚೇರಿಗೆ ಹೋಗಿದ್ದ ಸಮಯದಲ್ಲಿ ಡ್ರೇಸನ್ ಮತ್ತು ಅವರ ಪತ್ನಿ ಚಿತ್ರಾ ಮತ್ತು ಸಹೋದರ ಡಾಮಿಯನ್ ಅವರನ್ನು ಹೂವಿನ ಮಡಕೆಯಿಂದ ಹೊಡೆದಿದ್ದಾನೆ ಮತ್ತು ಕೆಲ ಚೂಪಾದ ವಸ್ತುಗಳಿಂದ ಇರಿದಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

  ಚಿತ್ರಾ ತಕ್ಷಣ ಸಾವನ್ನಪ್ಪಿದರೆ, ಡಾಮಿಯನ್ ಕೋಮಾಕ್ಕೆ ಜಾರಿದ್ದ. ಐದು ದಿನಗಳ ನಂತರ ಖಾಸಗಿ ಆಸ್ಪತ್ರೆಯಲ್ಲಿ ಆತ ಕೊನೆಯುಸಿರೆಳೆದಿದ್ದ. ಈ ಘಟನೆಗೆ ಹಳೆಯ ಆಸ್ತಿ ವಿವಾದವೇ ಕೊಲೆಗೆ ಕಾರಣವಾಗಿದೆ ಎನ್ನಲಾಗಿದೆ. ಬಿಂದು ನೀಡಿದ ದೂರಿನ ಆಧಾರದ ಮೇಲೆ, ಬಂಗೂರ್ ನಗರ ಲಿಂಕ್ ರೋಡ್ ಪೊಲೀಸ್ ಠಾಣೆಯಲ್ಲಿ ಡಬಲ್ ಮರ್ಡರ್ ಎಫ್ಐಆರ್ ದಾಖಲಾಗಿದೆ.

  ಆರೋಪಿ ಡ್ರೇಸನ್ ಮೊಬೈಲ್, ಬ್ಯಾಂಕ್ ಕಾರ್ಡ್​ಗಳನ್ನು ಬಳಸಿರಲಿಲ್ಲ. ಹೀಗಾಗಿ ಆತನನ್ನು ಪತ್ತೆ ಮಾಡುವುದು ಪೊಲೀಸರಿಗೆ ಸವಾಲಾಗಿತ್ತು. ಪೊಲೀಸರು ಕೊನೆಗೂ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.

  ಆರೋಪಿಗಾಗಿ ಪೊಲೀಸರು ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕಗಳಲ್ಲಿ ಹುಡುಕಾಡಿ ಕೊನೆಗೆ ಕೋಲ್ಕತ್ತಾದಲ್ಲಿ ಆತನನ್ನು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದಿಂದ ಗಡಿ ದಾಟಿ ಬಾಂಗ್ಲಾದೇಶ ಅಥವಾ ನೇಪಾಳಕ್ಕೆ ಪರಾರಿಯಾಗಲು ಆರೋಪಿ ಪ್ರಯತ್ನಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಉನ್ನತ ಪೊಲೀಸ್ ಅಧಿಕಾರಿಗಳು ಒಟ್ಟು 12 ದಿನಗಳ ಕಾಲ ವಿವಿಧ ರಾಜ್ಯಗಳ ಮೂಲಕ 1200 ಕಿ.ಮೀ.ಗಿಂತ ಹೆಚ್ಚು ದೂರ ಕ್ರಮಿಸಿ ಆರೋಪಿಯನ್ನು ಬಂಧಿಸಿದ್ದಾರೆ.

  ‘ಪುಷ್ಪ 2’ ರಿಲೀಸ್​ ಡೇಟ್​ನಲ್ಲಿ ಬದಲಾವಣೆ? ಈ ಬಗ್ಗೆ ನಿರ್ದೇಶಕರು ಕೊಟ್ರು ಅಧಿಕೃತ ಮಾಹಿತಿ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts