More

    ಮಾತೆ ಮಹಾದೇವಿ ಸಂಸ್ಮರಣೋತ್ಸವ 31ರಂದು

    ಕಲಬುರಗಿ: ನಗರದ ಡಾ.ಎಸ್.ಎಂ.ಪಂಡಿತ ರಂಗ ಮಂದಿರದಲ್ಲಿ ಮಾ.೩೧ರಂದು ಬೆಳಗ್ಗೆ ೧೦ಕ್ಕೆ ಜಗದ್ಗುರು ಡಾ.ಮಾತೆ ಮಹಾದೇವಿ ಸಂಸ್ಮರಣೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಲಿಂಗಾಯತ ಧರ್ಮ ಅಧ್ಯಯನ ಕೇಂದ್ರದ ಅಧ್ಯಕ್ಷ ನಾಗೇಂದ್ರಪ್ಪ ನಿಂಬರ್ಗಿ ತಿಳಿಸಿದರು.
    ಲಿಂಗಾಯತ ಧರ್ಮ ಅಧ್ಯಯನ ಕೇಂದ್ರ, ರಾಷ್ಟ್ರೀಯ ಬಸವದಳ, ಕ್ರಾಂತಿ ಗಂಗೋತ್ರಿ ಅಕ್ಕ ನಾಗಲಾಂಬಿಕಾ ಮಹಿಳಾ ಗಣದ ಸಹಯೋಗದಲ್ಲಿ ಹಮ್ಮಿಕೊಂಡಿದ್ದು, ಕುಂಬಳಗೋಡದ ಶ್ರೀ ಚನ್ನಬಸವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಬೀದರನ ಮಾತೆ ಸತ್ಯದೇವಿ ನೇತೃತ್ವ ವಹಿಸುವರು. ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಶಾಸಕ ಅಲ್ಲಮಪ್ರಭು ಪಾಟೀಲ್ ಬಸವ ಧ್ವಜಾರೋಹಣ ನೆರವೇರಿಸಲಿದ್ದು, ಪ್ರೊ.ಆರ್.ಕೆ.ಹುಡಗಿ, ಜೆ.ಎಸ್.ಪಾಟೀಲ್, ವಿಶ್ವಾರಾಧ್ಯ ಸತ್ಯಂಪೇಟೆ, ಶ್ರೀಶೈಲ ಮಸೂತೆ ಉಪನ್ಯಾಸ ನೀಡಲಿದ್ದಾರೆ. ನಿವೃತ್ತ ಕೆಎಎಸ್ ಅಧಿಕಾರಿ ಎಸ್.ದಿವಾಕರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು. ಜಿಲ್ಲೆಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಬೀದರ್‌ನ ಬಸವಕುಮಾರ ಪಾಟೀಲ್ ಹಾಗೂ ಬೆಂಗಳೂರಿನ ಅಶೋಕ ದೊಮ್ಮಲೂರ ಆಹ್ವಾನಿತರಾಗಿದ್ದಾರೆ ಎಂದರು.
    ಪ್ರಮುಖರಾದ ರವಿ ವಿಭೂತಿ, ಶರಣು ಮಹಾಜನ್, ಬಸವರಾಜ ಹೊಸಮನಿ, ಜಗದೇವಿ ಚಟ್ಟಿ, ದೀಪಾ ಬಿರಾದಾರ, ಜ್ಯೋತಿ ಕಟಾಳೆ, ಸಂತೋಷ ಕಟಾಳೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts