More

    ಮಾತೃಭಾಷೆ ಬಳಕೆಗೆ ಆದ್ಯತೆ ನೀಡಿ


    *ಭೀಮನಬೀಡು ಸರ್ಕಾರಿ ಪ್ರೌಢಶಾಲೆ ಶಿಕ್ಷಕ ನಂದೀಶ್ ಸಲಹೆ


    ಗುಂಡ್ಲುಪೇಟೆ
    : ಜಾಗತೀಕರಣದ ಪ್ರಭಾವದಿಂದಾಗಿ ಹಲವು ಭಾಷೆಗಳು ತನ್ನ ಸಂಪ್ರದಾಯ, ಕಲೆ ಮತ್ತು ತಮ್ಮತನ ಕಳೆದುಕೊಳ್ಳುತ್ತಿದ್ದು, ಕನ್ನಡ ಭಾಷೆಯೂ ಇದೇ ಸಾಲಿಗೆ ಸೇರುತ್ತಿದೆ ಎಂದು ಭೀಮನಬೀಡು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ನಂದೀಶ್ ವಿಷಾದ ವ್ಯಕ್ತಪಡಿಸಿದರು.

    ಪಟ್ಟಣದ ಸರ್ಕಾರಿ ಯಂತ್ರೋಪಕರಣ ಹಾಗೂ ತರಬೇತಿ ಕಾಲೇಜಿನಲ್ಲಿ ಜೆ.ಎಸ್.ಬಿ. ಪ್ರತಿಷ್ಠಾನ ವತಿಯಿಂದ ಆಯೋಜಿಸಿದ್ದ ಕನ್ನಡ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಜಾಗತೀಕರಣದ ಹೊಡೆತ ಪ್ರಾಂತೀಯ ಭಾಷೆಗಳ ಮೇಲೂ ಪ್ರಭಾವ ಬೀರಿದ್ದು, ದಕ್ಷಿಣ ಭಾರತದಲ್ಲಿ ಹಿಂದಿ ಹೇರುವ ಹುನ್ನಾರ ನಡೆಯುತ್ತಲೇ ಇವೆ. ಆದ್ದರಿಂದ ಕನ್ನಡಿಗರು ಮಾತೃಭಾಷೆ ಬಳಕೆಗೆ ಆದ್ಯತೆ ನೀಡಬೇಕು. ಆ ಮೂಲಕ ಭಾಷೆಯ ಗುಣಮಟ್ಟ ಹೆಚ್ಚಿಸುವ ಕೆಲಸ ಆಗಬೇಕು ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಸಂಗೀತ ಶಿಕ್ಷಕ ಮಹಾಂತಯ್ಯ, ಕಾಲೇಜು ಪ್ರಾಂಶುಪಾಲ ಅನಿಲ್‌ಕುಮಾರ್, ಪ್ರತಿಷ್ಠಾನದ ಶಶಿಕುಮಾರ್ ಮಾತನಾಡಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಕನ್ನಡ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು.

    ಉಪನ್ಯಾಸಕರಾದ ರಾಜಶೇಖರ್, ರವಿಕುಮಾರ, ಶಿವಕುಮಾರ, ಸುಭಾಷ್‌ಚಂದ್ರ, ಆಶಾಜ್ಯೋತಿ, ಕೃಪಾಲಿನಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts