More

    ಮಾತು ಬರದ, ಕಿವಿ ಕೇಳಿಸದ ಬಡ ಪರಿವಾರಕ್ಕೆ ಬೇಕಿದೆ ಸಹಾಯಹಸ್ತ

    ಮಾರ್ಥಂಡ ಜೋಶಿ ಬಸವಕಲ್ಯಾಣ
    ಅಪ್ಪ-ಅಮ್ಮ ಮಾತಾಡಲ್ಲ. ನಮಗೂ ಮಾತಿಲ್ಲ. ನಾವು ಹೇಳಿದ್ದು ಯಾರಿಗೂ ತಿಳಿಯಲ್ಲ. ಬೇರೆಯವರು ಹೇಳಿದ್ದು ನಮಗೆ ಕೇಳಿಸಲ್ಲ! ಎಲ್ಲರಂತೆ ನಾವೇಕಿಲ್ಲ? ಇದು ತಾಲೂಕಿನ ನಾರಾಯಣಪುರ ಗ್ರಾಮದ ಮಾತು ಬಾರದ ಕುಟುಂಬದಲ್ಲಿ ಹುಟ್ಟಿದ ಬಾಲೆಯ ಮುಗ್ಧ ಮನಸ್ಸಿನಲ್ಲಿ ಕಾಡುತ್ತಿರುವ ಪ್ರಶ್ನೆ.

    ಎಲ್ಲರ ಅಮ್ಮ-ಅಪ್ಪ ಮಾತಾಡ್ತಾರೆ. ಆದರೆ ನಮ್ಮವರಿಗೆ ಮಾತು ಬರಲ್ಲ, ಕಿವಿ ಕೇಳಿಸಲ್ಲ. ಅವರಂತೆ ನನಗೂ ಮಾತು ಬರಲ್ಲ, ಕಿವಿ ಕೇಳಲ್ಲ. ಇನ್ನು ನನ್ನ ತಮ್ಮನೂ ಹೀಗೆ ಇರೋದು ಎಂದು ಮನದಾಳದಲ್ಲೇ ನೊಂದುಕೊಳ್ಳುವ ಒಂಬತ್ತು ವರ್ಷದ ಎಳೆಯ ಜೀವ ನೋಡಿದರೆ ಎಂಥವರ ಮನಸ್ಸು ಕರಗದೆ ಇರದು.

    ಇದು ಬಾಲಕಿಯಷ್ಟೇ ಅಲ್ಲ. ಇಂಥ ಅಸಹಾಯಕ ಸ್ಥಿತಿ ಇರೋದು ಆಶಾ-ಪ್ರಭಾಕರರಾವ ಕುಲಕಣರ್ಿ ದಂಪತಿಯ ಮಗ ರಾಘವೇಂದ್ರ ಅವರ ಇಡೀ ಕುಟುಂಬದ್ದು. ಎಲ್ಲರೂ ಮೂಕ-ಕಿವುಡರು. ರಾಘವೇಂದ್ರ ತಾಯಿ ಆಶಾ ಹೊರತುಪಡಿಸಿ ಮಗ-ಸೊಸೆ, ಇಬ್ಬರು ಮೊಮ್ಮಕ್ಕಳಿಗೆ ಮಾತು ಬರಲ್ಲ, ಕಿವಿ ಕೇಳಲ್ಲ. ಎಲ್ಲವೂ ಸರಿ ಇದ್ದರೇನೇ ಜೀವನ ನಡೆಸುವುದು ಕಷ್ಟಕರವಾಗಿರುವಾಗ ಈ ಕುಟುಂಬ ನಿತ್ಯ ಜೀವನದಲ್ಲಿ ಅದೆಷ್ಟು ಸಮಸ್ಯೆ-ಸವಾಲು ಎದುರಿಸುತ್ತಿದೆಯೋ ಆ ದೇವರೇ ಬಲ್ಲ.

    ರಾಘವೇಂದ್ರ ಕುಲಕಣರ್ಿ ಜನ್ಮತಃ ಮೂಕ-ಕಿವುಡ. 11 ವರ್ಷದ ಹಿಂದೆ ಕೈಹಿಡಿದ ಪತ್ನಿ ಪಲ್ಲವಿ ಸ್ಥಿತಿಯೂ ಭಿನ್ನವಾಗಿಲ್ಲ. ನಾವು ಹೇಗಿದ್ದರೂ ಮಕ್ಕಳು ಎಲ್ಲರಂತಿದ್ದರೆ ಸಾಕು ಎಂದು ನಿರೀಕ್ಷಿಸಿದ ದಂಪತಿಗೆ ಮತ್ತೆ ದೈವ ಕೈಕೊಟ್ಟಿದೆ. ಹುಟ್ಟಿದ ಇಬ್ಬರು ಮಕ್ಕಳಾದ ಪ್ರವಾಲಿ ಮತ್ತು ಪದ್ಮನಾಭ ಸಹ ಮೂಕ-ಕಿವುಡರು. ಇದು ಈ ದಂಪತಿಗೆ ಗಾಯದ ಮೇಲೆ ಬರೆ ಎಳೆದಿದೆ. ಅಲ್ಲದೆ ಅಜ್ಜಿ ಆಶಾ ಚಿಂತೆಗೂ ಕಾರಣವಾಗಿದೆ.

    ಉದ್ಯೋಗವಿಲ್ಲ. ಪಾಲಿಗೆ ಬರುವ ಒಂದಿಷ್ಟು ಹೊಲವಿದ್ದರೂ ಜೀವನ ನಿರ್ವಹಣೆಗೆ ಆದಾಯ ಇಲ್ಲ. ಏನಾದರೂ ಮಾಡಬೇಕೆಂದರೆ ಮೂಕ-ಕಿವುಡ ಎಂಬ ಕಾರಣಕ್ಕೆ ಕೆಲಸ ಸಿಗಲ್ಲ. ತಂದೆ ಅಗಲಿಕೆ ನಂತರ ತಾಯಿಗೆ ಬರುವ ಪಿಂಚಣಿ ಹಣ, ಅಂಗವಿಕಲರಿಗೆ ಸಿಗುವ ಮಾಸಾಶನವೇ ಈ ಪರಿವಾರಕ್ಕೆ ಆಸರೆ. ಇಂಥದರಲ್ಲಿ ಮಕ್ಕಳಿಗೆ ಮಾತು ಬರುವ ನಿಟ್ಟಿನಲ್ಲಿ ಚಿಕಿತ್ಸೆ ಕೊಡಿಸುವುದು ಸವಾಲೇ ಸರಿ.

    ಮಕ್ಕಳ ಚಿಕಿತ್ಸೆಗಾಗಿ ಅನೇಕ ಆಸ್ಪತ್ರೆಗಳಿಗೆ ಸುತ್ತಾಡಿದರೂ ಲ ಶೂನ್ಯ. ಕೆಲ ತಿಂಗಳ ಹಿಂದೆ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಮಗನನ್ನು ತೋರಿಸಿದ್ದು, 6 ವರ್ಷ ವಯಸ್ಸಿನೊಳಗೆ ಚಿಕಿತ್ಸೆ ನೀಡಿದರೆ ಗುಣವಾಗುವ ಸಾಧ್ಯತೆ ಇದೆ. ಆದರೆ ಅಂದಾಜು 12 ಲಕ್ಷ ರೂ. ಖಚರ್ಾಗಬಹುದು. ಸುಮಾರು ಒಂದೂವರೆ ವರ್ಷ ಬೆಂಗಳೂರಲ್ಲೇ ಇರಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರಂತೆ. ಕುಟುಂಬ ನಿರ್ವಹಣೆಯೇ ಸವಾಲಾಗಿರುವ ಈ ಪರಿವಾರಕ್ಕೆ ಇಷ್ಟು ಹಣ ಹೊಂದಿಸುವುದು, ಅಲ್ಲೇ ಇರೋದು ಕಷ್ಟಸಾಧ್ಯ. ಸಕರ್ಾರ, ಸಂಘ-ಸಂಸ್ಥೆಗಳು ಅಥವಾ ಕೊಡುಗೈ ದಾನಿಗಳೇನಾದರೂ ನೆರವಿನಹಸ್ತ ಚಾಚಿದರೆ ಬಡ ಕುಟುಂಬದಲ್ಲಿ ನಗೆಯ ಹೊನಲು ಕಾಣಬಹುದಾಗಿದೆ.

    ಎಲ್ಲರಂತೆ ಮಾತಾಡುವಂತಾಗಲಿ: ವೃದ್ಧಾವಸ್ಥೆಯಲ್ಲಿ ಮಕ್ಕಳು ನೆರವಾಗಬೇಕು. ಸಾಧ್ಯವಾಗದಿದ್ದರೆ ತಾವಾದರೂ ಸುಖವಾಗಿರಲಿ ಎಂದು ಪ್ರತಿ ಪಾಲಕರು ಬಯಸುವುದು ಸಹಜ. ಆದರೆ ನೆರವಿಗೆ ಬರಬೇಕಾದ ಮಗನೇ ಮೂಕ-ಕಿವುಡನಾಗಿದ್ದರೆ ಆ ಮಾತೃ ಹೃದಯದ ವೇದನೆ ಶಬ್ದಕ್ಕೆ ನಿಲುಕದು. ತಾಯಿ ಆಶಾಗೆ ಬರುವ 12 ಸಾವಿರ ರೂ. ಪಿಂಚಣಿಯೇ ಮಗನ ಕುಟುಂಬ ನಿರ್ವಹಣೆಗೆ ಮೂಲ ಆಧಾರ. ಮಗ-ಸೊಸೆಗೆ ಮಾತು ಬರಲ್ಲ. ಅವರಿಗೆ ಹುಟ್ಟಿದ ಮಕ್ಕಳೆರಡೂ ಮೂಕ-ಕಿವುಡ. ಚಿಕಿತ್ಸೆ ಸಿಕ್ಕು ಎಲ್ಲರಂತೆ ಮಾತಾಡುವಂತಾಗಲಿ ಎಂಬುದೇ ಅಜ್ಜಿ ಆಶಾ ಮಹದಾಸೆ.

    ಖಾಸಗಿ ಕಂಪನಿ ಕೆಲಸಕ್ಕೂ ಅಡ್ಡಿ: ಹೈದರಾಬಾದ್ನಲ್ಲಿ (ಐಟಿಐ) ತಾಂತ್ರಿಕ ತರಬೇತಿ ಪಡೆದಿರುವ ರಾಘವೇಂದ್ರ ಈ ಮೊದಲು ಅಲ್ಲಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಇಲ್ಲೂ ಕಿವಿ ಕೇಳಿಸದಿರುವುದೇ ಅಡ್ಡಿಯಾಯಿತು. ಹೀಗಾಗಿ ಕೆಲಸ ಬಿಟ್ಟು ಊರ ಕಡೆ ಮುಖ ಮಾಡಿದರು. 9 ವರ್ಷದ ಮಗಳು ಹಾಗೂ ಐದು ವರ್ಷದ ಮಗ ಬಸವಕಲ್ಯಾಣದ ಮೂಕ-ಕಿವುಡರ ಶಾಲೆಯಲ್ಲಿ ಕಲಿಯುತ್ತಾರೆ. ಇವರನ್ನು ಬೈಕ್ನಲ್ಲಿ ಶಾಲೆಗೆ ಬಿಟ್ಟು ಮತ್ತೆ ಕರೆದೊಯ್ಯುತ್ತಾರೆ. ಆದರೆ ಬೈಕ್ನಲ್ಲಿ ಬರುವಾಗ ಹಿಂದಿನಿಂದ ಬರುವ ವಾಹನ ಹಾನರ್್ ಹಾಕಿದರೂ ಕೇಳಿಸಲ್ಲ. ಇದು ಸಹ ಕೆಲವೊಮ್ಮೆ ಸಮಸ್ಯೆಗೆ ಕಾರಣವಾಗುತ್ತಿದೆ.

    ಸಂಕಷ್ಟದಲ್ಲಿರುವ ಬಡ ಕುಟುಂಬಕ್ಕೆ ಸಕರ್ಾರದಿಂದ ಸಾಧ್ಯವಿರುವಷ್ಟು ಸಹಾಯ-ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಅವರ ಮಗನ ಚಿಕಿತ್ಸೆಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಣ ಮಂಜೂರಿಗೆ ಪ್ರಾಮಾಣಿಕ ಪ್ರಯತ್ನ ಮಾಡುವೆ.
    | ಶರಣು ಸಲಗರ, ಬಸವಕಲ್ಯಾಣ ಶಾಸಕ

    ಪದ್ಮನಾಭನಿಗೆ ಈಗ 5 ವರ್ಷ 8 ತಿಂಗಳು. ಆರು ವರ್ಷದೊಳಗೆ ಚಿಕಿತ್ಸೆ ನೀಡಿದರೆ ಸ್ಪಂದಿಸಬಹುದು ಎಂದು ಬೆಂಗಳೂರಿನ ವೈದ್ಯರು ಹೇಳಿದ್ದಾರೆ. ಆದರೆ ಚಿಕಿತ್ಸೆಗೆ 10-12 ಲಕ್ಷ ರೂ. ಖಚರ್ಾಗಬಹುದು ಎಂದು ಹೇಳಲಾಗುತ್ತಿದೆ. ಏನು ಮಾಡಬೇಕು? ಇಷ್ಟು ಹಣ ಎಲ್ಲಿಂದ ತರಬೇಕು ಎನ್ನುವುದೇ ದೊಡ್ಡ ಚಿಂತೆ, ಸಮಸ್ಯೆಯಾಗಿ ಕಾಡುತ್ತಿದೆ.
    | ಸ್ಫೂತರ್ಿ ಹನುಮೇಶ ಕುಲಕಣರ್ಿ, ರಾಘವೇಂದ್ರ ಸಹೋದರಿ

    ಈ ಖಾತೆಗೆ ನೆರವು ನೀಡಿ:
    ರಾಘವೇಂದ್ರ ಕುಲಕಣರ್ಿ

    ಎಸ್ಬಿಐ ಬಸವಕಲ್ಯಾಣ ಶಾಖೆ
    ಖಾತೆ ನಂ. 62112372846
    ಐಎ್ಎಸ್ಸಿ: ಎಸ್ಬಿಐಎನ್0020238
    ಸಂಪರ್ಕ: ಆಶಾ ಕುಲಕಣರ್ಿ (77959 16045).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts