More

    ಮಾಜಿ ಸಚಿವ ಶಾಸಕ ದಿ. ಎಂ.ಸಿ. ಮನಗೂಳಿ‌ ನಿಧನಕ್ಕೆ ಕಂಬನಿ ಮಿಡಿದ ಗಣ್ಯಾತಿಗಣ್ಯರು

    ವಿಜಯಪುರ: ಗುತ್ತಿಬಸವಣ್ಣ ಏತ ನೀರಾವರಿ ಯೋಜನೆ ಹರಿಕಾರ ಮಾಜಿ ಸಚಿವ ಶಾಸಕ ಎಂ.ಸಿ. ಮನಗೂಳಿ ಅವರ ನಿಧನಕ್ಕೆ ಜಿಲ್ಲೆಯ ಗಣ್ಯಾತಿ ಗಣ್ಯರು ಕಂಬನಿ ಮಿಡಿದಿದ್ದು ಅವರ ಅಂತಿಮ ದರ್ಶನ ಪಡೆದು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.

    ಮಾಜಿ ಸಚಿವ ಶಾಸಕ ಎಂ.ಬಿ. ಪಾಟೀಲ ಭಾಗವಹಿಸಿ, ಎಂ.ಸಿ. ಮನಗೂಳಿ,ಬಿ.ಕೆ. ಗುಡದಿನ್ನಿ ಮತ್ತು ನಮ್ಮ ತಂದೆ ತುಂಬ ಒಡನಾಟ ಹೊಂದಿದ್ದರು.

    ಗ್ರಾಮೀಣ ಭಾಗದಿಂದ ಬಂದ ಅವರು ಜನರ ಸುಖ- ದುಃಖ ಅರಿತವರಾಗಿದ್ದರು. ಜನರ ಕಷ್ಟ ಸುಖ ಅವರ ಸಮಸ್ಯೆ ಅರಿತವರಾಗಿದ್ದರು.

    ಎಂ.ಸಿ. ಮನಗೂಳಿ ಅವರು
    ಶಾಸಕರಾಗಿ ಅನೇಕ ಜನಪರ ಕಾರ್ಯ ಮಾಡಿದ್ದಾರೆ. ಗುತ್ತಿ ಬಸವಣ್ಣ ಏತ ನೀರಾವರಿಗಾಗಿ ಸಾಕಷ್ಟು ಹೋರಾಟ ಮಾಡಿದ್ದಾರೆ. ಚಪ್ಪಲಿ ಹಾಕಿಕೊಳ್ಳದೇ ಬರಿಗಾಲಲ್ಲಿ ತಿರುಗಿದರು. ಆ ಮೂಲಕ ಬರದ ನಾಡಿನ ಭಗೀರಥ ಎನ್ನಿಸಿಕೊಂಡರು ಎಂದು ಕೊಂಡಾಡಿದರು.
    ಮಾಜಿ ಸಚಿವ ಶಾಸಕ ಶಿವಾನಂದ ಪಾಟೀಲ ಮಾತನಾಡಿ, ಜನ ನಾಯಕ ಆಗುವುದು ಎಷ್ಟು ಕಷ್ಟ ಎಂಬುದು ಎಂ.ಸಿ‌. ಮನಗೂಳಿ ಅವರನ್ನು ನೋಡಿದಾಗ ನಮಗೆ ಗೊತ್ತಾಗುತ್ತದೆ. ನಾವೆಲ್ಲರೂ ಮನಗೂಳಿ ಅವರನ್ನು ಬಹಳ ಗೌರವಿಸುತ್ತಿದ್ದೆವು. ಕಾರಣ ನಮ್ಮೆಲ್ಲರ ಮಧ್ಯೆ ಅವರು ಹಿರಿಯರಾಗಿದ್ದರು. ಅಂಥ ಹಿರಿಯರನ್ನು ಕಳೆದುಕೊಂಡಿದ್ದು ಜಿಲ್ಲೆ ಪಾಲಿಗೆ ದುಃಖದ ಸಂಗತಿ ಎಂದರು.

    ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಮನಗೂಳಿ ಅವರ ನಿಧನದಿಂದ ನಾನು ವಿಚಲಿತನಾಗಿದ್ದು ಮಾತು ಬರದಾಗಿದೆ. ಅವರ ಕುಟುಂಬಕ್ಕೆ ದುಃಖ ಬರಿಸುವ ಶಕ್ತಿ ಆ ದೇವರು ದಯಪಾಲಿಸಲಿ ಎಂದು ಪ್ರಾರ್ಥಿಸಿದರು.

    ಮಾಜಿ ಸಚಿವ ಶಾಸಕ ಎಚ್.ಕೆ. ಪಾಟೀಲ ಮಾತನಾಡಿ, ಮನಗೂಳಿ ಅವರ ವಿಶೇಷ ಗುಣ ಎಂದರೆ ಅವರ ಸರಳ ಬದುಕು. ಸಜ್ಜನಿಕೆ, ಕೃಷಿಕರು, ಬಡವರ ಬಗ್ಗೆ ಅವರು ಹೊಂದಿದ್ದ ವಿಶೇಷ ಕಳಕಳಿ ನನ್ನನ್ನು ಆಕರ್ಷಿಸಿದೆ. ಹೇಳಿದೆ ಹಾಗೆ ನಡೆಯುವ ಅವರ ಸ್ವಭಾವ ನಾನು ಅತ್ಯಂತ ಸಮೀಪದಿಂದ ಗಮನಿಸಿದ್ದೇನೆ. ಜನರಿಗೆ ಆರ್ಥಿಕ ಸಹಾಯ ಒದಗಿಸುವ ಅವರ ಕಾಳಜಿ ನಿಜಕ್ಕೂ ಮೆಚ್ಚುವಂಥದ್ದು. ತಮ್ಮ ರಾಜಕೀಯ ಅವಕಾಶವನ್ನು ಬಳಸಿಕೊಂಡು ಈ ಭಾಗದ ನೀರಾವರಿಗೆ ಶ್ರಮಿಸಿದರು. ಅವರ ನಿಧನದಿಂದ ಉತ್ತರ ಕರ್ನಾಟಕಕ್ಕೆ ತುಂಬಲಾರದ ಹಾನಿಯಾಗಿದೆ ಎಂದರು.

    ಕಾಂಗ್ರೆಸ್ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ, ಎಂ.ಸಿ. ಮನಗೂಳಿ ರೈತರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. ಅವರ ಆದರ್ಶ, ಅವರ ಕನಸು ಇನ್ನೂ ‌ಈಡೇರಬೇಕಿದೆ. ಅವರ ಅಭಿವೃದ್ಧಿ ಕನಸು ಸಾಕಾರಗೊಳಿಸಲು ಶ್ರಮಿಸೋಣ ಎಂದರು.

    ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ, ಈ ಭಾಗದಲ್ಲಿ ಮನಗೂಳಿ ಅವರು ಮಾಡಿದ ಕಾರ್ಯಗಳು ಅವಿಸ್ಮರಣೀಯ.

    ಮನಗೂಳಿ ಅವರು ನಮ್ಮನ್ನು ಅಗಲಿರಬಹುದು ಆದರೆ ಅವರು ಮಾಡಿದ ಕಾರ್ಯಗಳು ಸೂರ್ಯ ಚಂದ್ರ‌ ಇರುವವರೆಗೂ ಇರಲಿವೆ ಎಂದರು.

    ಶಾಸಕ ಎ.ಎಸ್. ಪಾಟೀಲ ನಡಹಳ್ಳಿ, ದೇವಾನಂದ ಚವಾಣ್, ಮಾಜಿ ಶಾಸಕರಾದ ಶರಣಪ್ಪ ಸುಣಗಾರ, ರಮೇಶ ಭೂಸನೂರ, ಮುಖಂಡರಾದ ಅಪ್ಪುಗೌಡ ಪಾಟೀಲ, ರಾಜುಗೌಡ ಪಾಟೀಲ, ಉಮೇಶ ಕೋಳಕೂರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts