More

    ಮಾಜಿ ಮೇಯರ್​ಗೆ ಕರೊನಾ

    ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆಯ ಮಾಜಿ ಮಹಾಪೌರರೊಬ್ಬರಿಗೆ ಕರೊನಾ ಸೋಂಕು ತಗುಲಿದೆ.

    ಸರಳ ವ್ಯಕ್ತಿತ್ವದ (52 ವರ್ಷದ) ಸಿಬಿಟಿ ಬಳಿ ನಿವಾಸಿಯಾಗಿರುವ ಅವರು ಕಳೆದ ಅವಧಿಯಲ್ಲಿ (ಬಿಜೆಪಿ ಅಧಿಕಾರದಲ್ಲಿ) ಮಹಾಪೌರರಾಗಿದ್ದರು. ಎರಡು ದಿನದ ಹಿಂದಷ್ಟೇ (ಬಿಜೆಪಿ) ಪಾಲಿಕೆಯ ಮಾಜಿ ಸದಸ್ಯರೊಬ್ಬರಲ್ಲಿ ಕರೊನಾ ದೃಢಪಟ್ಟಿತ್ತು. ಇಬ್ಬರಿಗೂ ಚಿಕಿತ್ಸೆ ಮುಂದುವರಿದೆ.

    ಬಸ್ ಚಾಲಕಗೆ: ನಗರ ಸಾರಿಗೆ ಬಸ್​ನಲ್ಲಿ ಚಾಲಕ ಕಂ ಕಂಡಕ್ಟರ್ ಆಗಿರುವ ವ್ಯಕ್ತಿಯೊಬ್ಬನಿಗೆ ಕರೊನಾ ಕಾಡಿದೆ. ಆತ ಸೇವೆ ನೀಡಿದ ಬಸ್​ನಲ್ಲಿ ಪ್ರಯಾಣಿಸಿದವರು ಆತಂಕ ಪಡುವಂತಾಗಿದೆ.

    ಮಹಿಳಾ ಪೊಲೀಸ್: ಉಪನಗರ ಠಾಣೆಯ ಮಹಿಳಾ ಸಿಬ್ಬಂದಿಗೂ ಕರೊನಾ ಬಂದಿದೆ. ಈ ಠಾಣೆಯವರು ಬಂಧಿಸಿದ್ದ ಕಳ್ಳತನ ಆರೋಪಿಯೊಬ್ಬನಲ್ಲಿ ಕರೊನಾ ಸೋಂಕು ಪತ್ತೆಯಾಗಿತ್ತು.

    ಮಹಿಳಾ ಕಾನ್ಸ್​ಟೇಬಲ್​ಗೂ ಸೋಂಕು !

    ಉಪನಗರ ಠಾಣೆಯಲ್ಲೇ ಮೂರಕ್ಕೇರಿದ ಸೋಂಕಿತರ ಸಂಖ್ಯೆ

    ಹುಬ್ಬಳ್ಳಿ: ಇಲ್ಲಿನ ಉಪನಗರ ಪೊಲೀಸ್ ಠಾಣೆಯ 38 ವರ್ಷದ ಮಹಿಳಾ ಕಾನ್ಸ್​ಟೇಬಲ್​ಗೂ ಕರೊನಾ ಸೋಂಕು ತಗುಲಿದ್ದು, ಠಾಣೆಯಲ್ಲಿ ಸೋಂಕಿತರ ಸಂಖ್ಯೆ ಮೂರಕ್ಕೇರಿದೆ. ಮಹಿಳಾ ಕಾನ್ಸ್​ಟೇಬಲ್ ಠಾಣೆಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು.

    ಕಳ್ಳ ತಂದ ಕಂಟಕ :

    ಹಾರ್ಡವೇರ್ ಅಂಗಡಿಯಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಎರಡು ವಾರದ ಹಿಂದೆ ಉಪನಗರ ಠಾಣೆ ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದರು. ವಾರಗಳ ಕಾಲ ಠಾಣೆಯಲ್ಲೇ ಇಟ್ಟುಕೊಂಡಿದ್ದರು. ನಂತರ ಆತನಿಗೆ ತಪಾಸಣೆ ಮಾಡಿಸಿದಾಗ ಕರೊನಾ ಸೋಂಕು ಪತ್ತೆಯಾಗಿತ್ತು. ಆತನ ಪ್ರಾಥಮಿಕ ಸಂಪರ್ಕ ಹೊಂದಿದ್ದ ಇಬ್ಬರು ಸಿಬ್ಬಂದಿಗೆ ವೈರಸ್ ಹರಡಿತ್ತು. ಇದೀಗ ಕಚೇರಿಯಲ್ಲೇ ಕೆಲಸ ಮಾಡುತ್ತಿದ್ದ ಮಹಿಳಾ ಸಿಬ್ಬಂದಿಗೂ ಸೋಂಕು ಹಬ್ಬಿರುವುದು ಮತ್ತಷ್ಟು ಆತಂಕಕ್ಕೆ ದೂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts