More

    ಮಾಂಸದ ತುಂಡು, ಮೂಳೆ ಪತ್ತೆ: ಕಾರ್ಯಾಚರಣೆ ವೇಳೆ ಸಿಕ್ಕಿತು ಮೃತದೇಹದ ಅಂಗ, ಜನರಲ್ಲಿ ಹೆಚ್ಚಿದ ಆತಂಕ

    ಚನ್ನಪಟ್ಟಣ : ಚನ್ನಪಟ್ಟಣದಲ್ಲಿ ಮತ್ತೊಮ್ಮೆ ಮೃತ ದೇಹದ ಅಂಗಗಳು ಪತ್ತೆಯಾಗಿರುವುದು ಆತಂಕ ಸೃಷ್ಟಿಸಿದೆ. ನಗರದ ಮಂಗಳವಾರ ಪೇಟೆಯ 10ನೇ ಕ್ರಾಸ್‌ನ ಕುಡಿಯುವ ನೀರಿನ ಪೈಪ್‌ನಲ್ಲಿ ಮತ್ತೆ ವಾಂಸದ ಮುದ್ದೆ ಹಾಗೂ ಮೂಳೆಗಳು ಪತ್ತೆಯಾಗಿರುವುದು ಜನತೆಯಲ್ಲಿ ದಿಗ್ಭ್ರಮೆ ಮೂಡಿಸಿದೆ.
    ಅ.9ರಂದು ನಗರದ ನ್ಯಾಯಾಲಯದ ಹಿಂಭಾಗವಿರುವ ಓವರ್‌ಹೆಡ್ ಟ್ಯಾಂಕ್‌ನ ವಾಲ್ವ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಕಾಲು ಪತ್ತೆಯಾಗಿತ್ತು. ಈ ಪ್ರಕರಣ ಜನತೆಯಲ್ಲಿ ತಲ್ಲಣ ಉಂಟು ವಾಡುವ ಜತೆಗೆ ಪೊಲೀಸರಿಗೆ ಸವಾಲಾಗಿತ್ತು. ಟ್ಯಾಂಕ್ ಮೇಲೇರಿ ನೀರಿಗೆ ಬಿದ್ದು ಮಹಿಳೆ ಆತ್ಮಹತ್ಯೆ ವಾಡಿಕೊಂಡಿದ್ದಾರೆಯೇ…! ಅಥವಾ ಕೊಲೆ ವಾಡಿ ದೇಹವನ್ನು ತುಂಡು ತುಂಡು ವಾಡಿ ಟ್ಯಾಂಕಿನ ಒಳಗಡೆ ಹಾಕಿರಬಹುದೇ ಎಂದು ಶಂಕಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನಗರದ ಕೆಲ ಪ್ರದೇಶಗಳಿಗೆ ಹಲವು ದಿನ ನೀರು ಪೂರೈಕೆ ಸ್ಥಗಿತಗೊಂಡಿತ್ತು. ವಾಲ್ವ್, ನೀರುಪೂರೈಕೆ ಪೈಪ್‌ಗಳನ್ನು ಕತ್ತರಿಸಿ ಮೃತದೇಹದ ಇತರ ಅಂಗಾಂಗಗಳು ಸಿಕ್ಕಿ ಹಾಕಿಕೊಂಡಿರುವುದನ್ನು ಪತ್ತೆ ಹಚ್ಚಲು ಕಾರ್ಯಾಚರಣೆ ನಡೆಯುತ್ತಿತ್ತು.

    ಇದೀಗ, ಈ ಪ್ರಕರಣದ ಜಾಡು ಹಿಡಿದು ಹೊರಟವರಿಗೆ ಟ್ಯಾಂಕ್‌ನ ಕೂಗಳತೆ ದೂರದಲ್ಲಿನ ಪೈಪ್‌ನಲ್ಲಿ ಮಂಗಳವಾರ ಮೂಳೆ ಹಾಗೂ ವಾಂಸದ ಮುದ್ದೆ ಪತ್ತೆಯಾಗಿರುವುದು ಆತಂಕ ಹೆಚ್ಚಿಸಿದೆ. ಇದರೊಂದಿಗೆ ಈ ಪ್ರಕರಣ ಸಾಕಷ್ಟು ಜಟಿಲಗೊಂಡಿದೆ. ಈ ಹಿಂದೆ ಸಿಕ್ಕ ಕಾಲಿನ ಭಾಗವನ್ನು ಮರಣೋತ್ತರ ಪರೀಕ್ಷೆ ನಡೆಸಿದಾಗ, ಯುವತಿಯನ್ನು ಕೊಲೆ ವಾಡಿ ಕಾಲು ತುಂಡರಿಸಿ ಟ್ಯಾಂಕ್‌ಗೆ ತಂದು ಹಾಕಲಾಗಿದೆ ಎಂಬ ವರದಿ ಪೊಲೀಸರ ಕೈ ಸೇರಿತ್ತು.
    ಜೆಸಿಬಿ ಮೂಲಕ ಪೈಪ್ ಶೋಧ ಕಾರ್ಯ ಮುಂದುವರಿದಿದ್ದು, ಸ್ಥಳಕ್ಕೆ ಪೊಲೀಸ್ ಇಲಾಖೆ ಹಾಗೂ ನಗರಸಭೆ ಹಾಗೂ ಜಲಮಂಡಳಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಕ್ಕ ವಾಂಸದ ಮುದ್ದೆಯನ್ನು ಪೊಲೀಸರು ವಶಕ್ಕೆ ಪಡೆದು ಪರೀಕ್ಷೆಗಾಗಿ ಎಫ್‌ಎಸ್‌ಎಲ್‌ಗೆ ಕಳುಹಿಸಿಕೊಟ್ಟಿದ್ದಾರೆ. ಸ್ಥಳದಲ್ಲಿ ಕೊಳೆತ ಮಾಂಸದ ದುರ್ವಾಸನೆಯಿಂದ ಜನರು ಆತಂಕಕ್ಕೀಡಾಗಿದ್ದಾರೆ.

     

    ಪಾದದ ತುಂಡು ರಾತ್ರಿ ಪತ್ತೆ : ಟ್ಯಾಂಕ್ ವಾಲ್ವ್ನಲ್ಲಿ ಮೃತದೇಹದ ಕಾಲು ಪತ್ತೆ ಪ್ರಕರಣ ಗಂಟೆ ಗಂಟೆಗೂ ಕೌತುಕ ಹೆಚ್ಚಿಸುತ್ತಿದೆ. ದುಷ್ಕರ್ಮಿಗಳು ಮಹಿಳೆಯನ್ನು ಬೇರೆ ಕಡೆ ಕೊಲೆ ಮಾಡಿ ಕಾಲಿನ ಭಾಗವನ್ನು ಮಾತ್ರ ಟ್ಯಾಂಕ್‌ಗೆ ಹಾಕಿದ್ದಾರೆ ಎಂದು ಅಂದಾಜಿಸಲಾಗಿತ್ತು. ಆದರೆ, ಬುಧವಾರ ನಡೆದ ಬೆಳವಣಿಗೆಗಳು ಈ ಪ್ರಕರಣದ ದಿಕ್ಕನ್ನು ಬದಲಾಯಿಸಿದೆ. ಬುಧವಾರ ಟ್ಯಾಂಕ್‌ನಿಂದ ನೀರು ಸರಬರಾಜು ಮಾಡುವ ಪೈಪ್‌ಲೈನ್‌ಗಳನ್ನು ಪರಿಶೀಲಿಸುವಾಗ ಮಧ್ಯಾಹ್ನದ ವೇಳೆಗೆ ನಗರದ 10ನೇ ಕ್ರಾಸ್‌ನಲ್ಲಿ ಮೃತದೇಹದ ಮಾಂಸದ ತುಂಡು ಹಾಗೂ ಮೂಳೆ ಪತ್ತೆಯಾಗಿತ್ತು. ನಂತರ ರಾತ್ರಿ 7 ಗಂಟೆಯಲ್ಲಿ ಕಾಲಿನ ಪಾದದ ತುಂಡು ದೊರಕಿದೆ. ಈ ಮೂಲಕ ಇಡೀ ದೇಹವನ್ನು ತುಂಡರಿಸಿ ಟ್ಯಾಂಕ್‌ಗೆ ಹಾಕಿದ್ದಾರೆಯೇ ಎಂಬ ಸಂಶಯ ಮೂಡಿದೆ. ಕಾವೇರಿ ಜಲಮಂಡಳಿ ಹಾಗೂ ನಗರಸಭೆಯವರು ಪೈಪ್‌ಲೈನ್ ಉದ್ದಕ್ಕೂ ಕಾರ್ಯಾಚರಣೆ ಮುಂದುವರಿಸಿದ್ದಾರೆ.

    ಗಂಭೀರವಾಗಿ ಪರಿಗಣಿಸಲಿ : ಈ ಪ್ರಕರಣವನ್ನು ಭೇದಿಸಲು ಪೊಲೀಸರು ಹಾಗೂ ತಾಲೂಕು ಆಡಳಿತ ಸಂಪೂರ್ಣ ನಿಷ್ಕ್ರಿಯವಾಗಿದೆ. ಇಂತಹ ದುರಂತ ನಡೆದರೂ ಜಿಲ್ಲಾಡಳಿತ ಹಾಗೂ ಎಸ್‌ಪಿ ಸ್ಥಳಕ್ಕೆ ಭೇಟಿ ನೀಡದಿರುವುದು ವಿಪರ್ಯಾಸ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಶಾಸಕ ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಪೊಲೀಸರು ಮತ್ತು ಸಂಬಂಧಪಟ್ಟವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ತಾಲೂಕು ಗ್ರಾವಾಂತರ ಕಾಂಗ್ರೆಸ್ ಅಧ್ಯಕ್ಷ ಎಸ್.ಆರ್. ಪ್ರಮೋದ್ ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts