More

    ಮಹಿಳೆ ವಿಡಿಯೋ ಮಾಡುತ್ತಿದ್ದ ಫಾರೆಸ್ಟರ್ ಅರೆಸ್ಟ್

    ಕುಮಟಾ: ಇಲ್ಲಿನ ಮುಖ್ಯ ಬಸ್ ನಿಲ್ದಾಣದ ಮಹಿಳಾ ಶೌಚಗೃಹದ ಕಿಟಕಿಯಿಂದ ತನ್ನ ಮೊಬೈಲ್​ಫೋನ್​ನಲ್ಲಿ ಮಹಿಳೆಯೊಬ್ಬರ ವಿಡಿಯೋ ಮಾಡುತ್ತಿದ್ದ ವ್ಯಕ್ತಿಯನ್ನು ಹಿಡಿದ ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ ಘಟನೆ ಶುಕ್ರವಾರ ನಡೆದಿದೆ.

    ಗೋಕರ್ಣ ಗೊನೆಹಳ್ಳಿ ನಿವಾಸಿ, ಹೊನ್ನಾವರ ಮಂಕಿಯಲ್ಲಿ ಫಾರೆಸ್ಟರ್ ಆಗಿರುವ ಮಂಜುನಾಥ ಬೀರಪ್ಪ ಗೌಡ (33) ಬಂಧಿತ ಆರೋಪಿ. ಸಾಗರ ತಾಲೂಕಿನ ಮಹಿಳೆಯೊಬ್ಬರು ಶೌಚಗೃಹದೊಳಗೆ ಹೋದ ಸಂದರ್ಭದಲ್ಲಿ ಆರೋಪಿ ಮಂಜುನಾಥ ತನ್ನ ಮೊಬೈಲ್​ಫೋನ್​ನಲ್ಲಿ ಚಿತ್ರೀಕರಿಸುತ್ತಿದ್ದ. ಇದನ್ನು ಗಮನಿಸಿದ ಮಹಿಳೆ ಕಿರುಚಿಕೊಂಡಿದ್ದಾರೆ. ಆರೋಪಿಯು ತನ್ನ ಸ್ವಿಫ್ಟ್ ಕಾರ್​ನಿಂದ ಪರಾರಿಯಾಗಲು ಯತ್ನಿಸಿದಾಗ ನಿಲ್ದಾಣದಲ್ಲಿದ್ದ ಸಾರ್ವಜನಿಕರು ಹಾಗೂ ವಾಕರಸಾ ಸಿಬ್ಬಂದಿ ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆ ಕುರಿತು ಸಂಚಾರ ನಿಯಂತ್ರಣಾಧಿಕಾರಿ ನಾರಾಯಣ ನಾಯ್ಕ ದೂರು ದಾಖಲಿಸಿದ್ದಾರೆ. ಮಂಜುನಾಥ ಗೌಡನಿಗೆ ಆರೋಗ್ಯ ತಪಾಸಣೆ ಮಾಡಲಾಗಿದ್ದು, ಕರೊನಾ ದೃಢಪಟ್ಟಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts