More

    ಮಹಿಳೆ ಮೊಗದಲ್ಲಿ ಚಿನ್ನಾಭರಣ ಮರಳಿ ಪಡೆದ ಖುಷಿ

    ಬಸವಕಲ್ಯಾಣ: ಮಹಿಳೆಯೊಬ್ಬರು ಆಟೋದಲ್ಲಿ ಬಿಟ್ಟಿದ್ದ ಚಿನ್ನಾಭರಣ ಹೊಂದಿದ ಬ್ಯಾಗ್ ಮರಳಿ ಕೈ ಸೇರಿದ ಅಪರೂಪದ ಪ್ರಸಂಗ ನಗರದಲ್ಲಿ ನಡೆದಿದೆ. ಪೊಲೀಸರ ಸಮಯ ಪ್ರಜ್ಞೆ, ಸಕಾಲಿಕ ಪ್ರಯತ್ನ, ಆಟೋ ಮಾಲೀಕ ಮತ್ತು ಚಾಲಕರ ಪ್ರಾಮಾಣಿಕತೆಯಿಂದಾಗಿ ಕೈಜಾರಿದ ಚಿನ್ನ ಮರಳಿ ಸಿಕ್ಕಿದ್ದರಿಂದ ಮಹಿಳೆ ಮೊಗದಲ್ಲಿ ನಗೆ ಕಾಣಿಸಿತು.

    ನಗರದ ಪೂಣರ್ಿಮಾ ಗೋಸಾಯಿ ಕಲಬುರಗಿಯಿಂದ ಬಸ್ನಲ್ಲಿ ಶನಿವಾರ ಬೆಳಗ್ಗೆ 9ರ ಸುಮಾರಿಗೆ ಆಗಮಿಸಿದ್ದು, ಬಸ್ನಿಂದ ಇಳಿದು ಆಟೋ ಹತ್ತಿದ್ದಾರೆ. ಆದರೆ ಮನೆ ಬಳಿ ಚಿನ್ನದ ಸರ, ರಿಂಗ್ ಇರುವ ಒಂದು ಬ್ಯಾಗ್ ಮರೆತು ಆಟೋದಲ್ಲೇ ಬಿಟ್ಟಿದ್ದಾರೆ.

    ಒಂದು ಗಂಟೆ ನಂತರ ಬ್ಯಾಗ್ ನೆನಪಾಗಿದೆ. 10 ಗ್ರಾಂ ಚಿನ್ನದ ಮಾಂಗಲ್ಯ ಮತ್ತು 15 ಗ್ರಾಂನ ಮೂರು ಚಿನ್ನದುಂಗುರ, 2 ಸಾವಿರ ರೂ. ನಗದು ಮತ್ತು ಇತರ ದಾಖಲೆಗಳಿರುವ ಬ್ಯಾಗ್ ಇಲ್ಲದಿರುವುದು ಗಮನಿಸಿ ವಿಚಲಿತರಾಗಿದ್ದಾರೆ.

    ಆಟೋ ನಂಬರ್ ನೋಡದ್ದರಿಂದ ಸಂಬಂಧಿಕರು ಮತ್ತು ಪರಿಚಯಸ್ಥರಿಗೆ ಹುಡುಕಾಟ ಕಷ್ಟಕರ ಎನಿಸಿತು. ಹೀಗಾಗಿ ನಗರ ಪೊಲೀಸ್ ಠಾಣೆಗೆ ಆಗಮಿಸಿ ವಿಷಯ ತಿಳಿಸಿದರು. ಪಿಎಸ್ಐ ಅಮರ ಕುಲಕಣರ್ಿ ಮತ್ತು ತಂಡದವರು ಬ್ಯಾಗ್ ಪತ್ತೆಗೆ ಕಾಯರ್ಾಚರಣೆ ಆರಂಭಿಸಿದರು.

    ಆಟೋ ಕುರಿತ ಅಲ್ಪಸ್ಪಲ್ಪ ಮಾಹಿತಿ ಆಧರಿಸಿ ಗಾಂಧಿ ವೃತ್ತದಿಂದ ಕೋಟೆ ಮಾರ್ಗದ ಎರಡೂ ಕಡೆಯ ಸಿಸಿ ಕ್ಯಾಮರಾ ಪರಿಶೀಲಿಸಿದ್ದಾರೆ. ಸುಳಿವು ಸಿಕ್ಕ ತಕ್ಷಣ ಆಟೋ ಫೋಟೋ ತೆಗೆದು ವಾಟ್ಸ್ಆ್ಯಪ್ ಗ್ರೂಪ್ಗಳಿಗೆ ಶೇರ್ ಮಾಡಿದ್ದಾರೆ. ಆಟೋ ಮಾಲೀಕ ಗುರುರಾಜ ಭೆಂಡೆ ಫೋಟೋ ನೋಡಿ ಇದು ನಮ್ಮ ಆಟೋ. ಬೇರೆಯವರಿಗೆ ಬಾಡಿಗೆ ಕೊಟ್ಟಿದ್ದಾಗಿ ತಿಳಿಸಿ ಚಾಲಕನನ್ನು ಅವರೇ ಸಂಪಕರ್ಿಸಿದ್ದಾರೆ.

    ಆಟೋದಲ್ಲಿ ಕೆಳಗೆ ಬಿದ್ದಿದ್ದ ಬ್ಯಾಗ್ ಚಾಲಕ ಸಹ ನೋಡಿರಲಿಲ್ಲ. ಬೇರೆ ಯಾರಾದರೂ ಕೊಂಡೊಯ್ದರೆ ಗೊತ್ತು ಸಹ ಆಗುತ್ತಿರಲಿಲ್ಲ. ಆದರೆ ಅದೃಷ್ಟ ಸರಿ ಇದ್ದುದರಿಂದ ಬ್ಯಾಗ್ ಇದ್ದ ಜಾಗದಲ್ಲೇ ಸೇಫ್ ಆಗಿತ್ತು. ಪೊಲೀಸರ ಸಮಯಪ್ರಜ್ಞೆ ಹಾಗೂ ಆಟೋ ಮಾಲೀಕ ಗುರುರಾಜ ಬೆಂಡೆ ಮತ್ತು ಚಾಲಕ ಅಬ್ದುಲ್ ಜಬ್ಬಾರ್ ಪ್ರಾಮಾಣಿಕತೆಯಿಂದ ಕೈತಪ್ಪಿದ್ದ ಚಿನ್ನಾಭರಣ ಮರಳಿ ಕೈಸೇರುವಂತಾಯಿತು.

    ಪ್ರಾಮಾಣಿಕತೆ ಮೆರೆದ ಆಟೋ ಮಾಲೀಕ ಗುರುರಾಜ ಮತ್ತು ಚಾಲಕ ಅಬ್ದುಲ್ ಜಬ್ಬಾರ್ ಅವರನ್ನು ಠಾಣೆಯಲ್ಲಿ ಪೊಲೀಸರು ಹಾಗೂ ಆಟೋ ಯೂನಿಯನ್ನಿಂದ ಸನ್ಮಾನಿಸಲಾಯಿತು. ಪಿಎಸ್ಐ ಅಮರ ಕುಲಕಣರ್ಿ, ಅಪರಾಧ ವಿಭಾಗದ ಪಿಎಸ್ಐ ರೇಣುಕಾ, ಆಟೋ ಯೂನಿಯನ್ನ ಏಜಾಜ್ ಲಾತೂರೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts