More

    ಮಹಿಳೆಯರ ಸೇವೆ ಗುರುತಿಸಿ ಗೌರವ

    ಚಿಕ್ಕೋಡಿ: ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರನ್ನು ಗುರುತಿಸಿ ಪ್ರತಿವರ್ಷ ಅಂತಾರಾಷ್ಟ್ರೀಯ ಮಹಿಳಾ ದಿನದಂದು ಸನ್ಮಾನ ಮಾಡಿ, 10 ಸಾವಿರ ರೂ. ನಗದು ಬಹುಮಾನ ಹಾಗೂ ಪ್ರಶಸ್ತಿ ಲಕ ನೀಡಿ ಗೌರವಿಸಲು ಭಾರತೀಯ ವೈದ್ಯಕೀಯ ಸಂಘದ ಚಿಕ್ಕೋಡಿ ಶಾಖೆ ಮುಂದಾಗಿದೆ ಎಂದು ಅಧ್ಯಕ್ಷ ಡಾ.ದರ್ಶನ ಪೂಜಾರಿ ಮಾಹಿತಿ ನೀಡಿದ್ದಾರೆ.

    ಪಟ್ಟಣದ ಐಎಂಎ ಸಭಾಭವನದಲ್ಲಿ ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳಿಂದ ಮಹಿಳಾ ದಿನದ ಅಂಗವಾಗಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವೈದ್ಯೆ, ಸಮಾಜಸೇವಕಿ ಜೀನ್ ರೋಸ್ ಮೇರಿ ಬಾತೆ ಅವರಿಗೆ ಪ್ರಸಕ್ತ ಸಾಲಿನ ಪ್ರಶಸ್ತಿ ವಿತರಿಸಿ ಮಾತನಾಡಿ, ಇಂಗ್ಲೆಂಡ್‌ನಲ್ಲಿ ಜನಿಸಿದ ಜೀನ್ ರೋಸ್ ಮೇರಿ ಬಾತೆ ಅವರು ಭಾರತದ ಪ್ರತಿಷ್ಠಿತ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಹಿರಿಯ ಶ್ರೇಣಿಯ ಶುಶ್ರೊಷಕಿಯಾಗಿ ಪದವಿ ಪಡೆದರು. ಚಿಕ್ಕೋಡಿ ತಾಲೂಕಿನ ಕರೋಶಿಯ ಲಿಂ.ದುಂಡಪ್ಪ ಬಾತೆ ಅವರನ್ನು ಮದುವೆಯಾದ ನಂತರ, ಅವರು ಭಾರತಕ್ಕೆ ಆಗಮಿಸಿ ಇಲ್ಲಿ ತಮ್ಮ ವೃತ್ತಿ ಸೇವೆ ಆರಂಭಿಸಿದರು.

    ಜೀನ್ ರೋಸ್ ಮೇರಿ ಬಾತೆ ಅವರು ವೈದ್ಯಕೀಯ ವೃತ್ತಿಯೊಂದಿಗೆ ಚಿಕ್ಕೋಡಿ ತಾಲೂಕಿನ ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಅವರ ಸೇವೆ ಮುಂದುವರಿಯಲಿ ಎಂದು ಆಶಿಸಿದರು.

    ವೈದ್ಯರಾದ ರವೀಂದ್ರ ಬಾತೆ, ದೇವಿಕಾ ಬಾತೆ, ಬಸವರಾಜ ಚೌಗಲಾ, ಶ್ರೀಧರ ಕುಲಕರ್ಣಿ, ರೋಹಿಣಿ ಕುಲಕರ್ಣಿ, ದಯಾನಂದ ನೂಲಿ, ಪ್ರಗತಿ ಪಾಟೀಲ, ಪದ್ಮರಾಜ ಪಾಟೀಲ ಇದ್ದರು. ಜೀನ್ ರೋಸ್ ಮೇರಿ ಬಾತೆ ಅವರು ತಮಗೆ ನೀಡಿದ 10 ಸಾವಿರ ರೂ. ನಗದನ್ನು ಸಮಾಜಸೇವೆಗೆ ಬಳಕೆ ಮಾಡಲು ವೈದ್ಯಕೀಯ ಸಂಘಕ್ಕೆ ಮರಳಿಸಿದರು. ಡಾ. ಸಂಧ್ಯಾ ಪಾಟೀಲ ನಿರೂಪಿಸಿದರು. ಡಾ. ಸುಷ್ಮಾ ಕೋಷ್ಠ ವರದಿ ಮಂಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts