More

    ಮಹಿಳೆಯರ ಸಬಲೀಕರಣಕ್ಕೆ ಶ್ರಮಿಸಿದ ನಾಯಕ ಬಸವಣ್ಣ

    ತಾಳಿಕೋಟೆ: ಜಾತಿ ವ್ಯವಸ್ಥೆ ವಿರೋಧಿಸಿದ ವಿಶ್ವಗುರು ಬಸವಣ್ಣನವರು ಸಮಾನತೆಯ ಕ್ರಾಂತಿಯನ್ನು ತಂದರು. ಲಿಂಗ ತಾರತಮ್ಯ ವಿರೋಧಿಸುವ ಜತೆಗೆ ಸಮಾಜದಲ್ಲಿ ಮಹಿಳೆಗೆ ಉನ್ನತ ಸ್ಥಾನ ಕೊಟ್ಟ ಮಹಾನ್ ಶರಣ ಬಸವಣ್ಣನವರ ಆದರ್ಶಗಳನ್ನು ನಾವೆಲ್ಲರೂ ಅನುಸರಿಸೋಣ ಎಂದು ತಹಸೀಲ್ದಾರ್ ಕೀರ್ತಿ ಚಾಲಕ ಹೇಳಿದರು.

    ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಗುರು- ಸಾಂಸ್ಕೃತಿಕ ನಾಯಕ ಬಸವಣ್ಣನವರ ಭಾವಚಿತ್ರ ಅನಾವರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕರ್ನಾಟಕ ಸರ್ಕಾರ ವಿಶ್ವಗುರು ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕನೆಂದು ಘೋಷಿಸಿರುವುದು ಹೆಚ್ಚು ಖುಷಿ ತಂದಿದೆ ಎಂದರು.

    ಅಖಿಲ ಭಾರತ ವಚನ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಮಹಾಂತೇಶ ಮುರಾಳ, ದಲಿತ ಮುಖಂಡ ಜೈಭೀಮ ಮುತ್ತಗಿ ಮಾತನಾಡಿದರು. ಗಡಿ ಸೋಮನಾಳದ ಇಂದೂಧರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮದ ಮೊದಲಿಗೆ ಪಟ್ಟಣದ ಬಸವೇಶ್ವರ ವೃತ್ತದಲ್ಲಿರುವ ಬಸವೇಶ್ವರರ ಮೂರ್ತಿಗೆ ಪುಷ್ಪಾರ್ಪಣೆ ಮಾಡಲಾಯಿತು.

    ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ, ಗಣ್ಯರಾದ ಕಾಶಿನಾಥ ಮುರಾಳ, ಮುರಿಗೆಪ್ಪ ಸರಶೆಟ್ಟಿ, ಗಂಗಾಧರ ಕಸ್ತೂರಿ, ಸಂಗನಗೌಡ ಅಸ್ಕಿ, ರಮೇಶ ಸಾಲಂಕಿ, ಇಬ್ರಾಹಿಂ ಮನ್ಸೂರ, ಮಾನಸಿಂಗ್ ಕೊಕಟನೂರ, ಬಸವರಾಜ ಕಟ್ಟಿಮನಿ, ರಾಜು ಸಜ್ಜನ, ಡಾ.ನಜೀರ ಕೊಳ್ಯಾಳ, ದ್ಯಾಮನಗೌಡ ಪಾಟೀಲ, ಜಗದೀಶ ಬಿಳೆಭಾವಿ, ರಾಜು ಅಲ್ಲಾಪೂರ, ನೀಲಮ್ಮ ಪಾಟೀಲ, ಪುರಸಭೆ ಸದಸ್ಯರಾದ ಅಕ್ಕಮಹಾದೇವಿ ಕಟ್ಟಿಮನಿ, ಎಂ.ಕೆ. ಪಟ್ಟಣಶೆಟ್ಟಿ, ಅಣ್ಣಾರಾವ ಜಗತಾಪ, ಪರಶುರಾಮ ತಂಗಡಗಿ, ಮುದಕಪ್ಪ ಬಡಿಗೇರ, ಜೈಸಿಂಗ್ ಮೂಲಿಮನಿ, ನಿಂಗಣ್ಣ ಕುಂಟೋಜಿ, ಶಿರಸ್ತೆದಾರ ಜೆ.ಆರ್. ಜೈನಾಪುರ, ಸಿ.ಆರ್.ಸಿ. ರಾಜು ವಿಜಾಪೂರ, ಎಸ್.ಟಿ. ಸಜ್ಜನ, ಸಿದ್ದಲಿಂಗ ಪಾಟೀಲ, ಶ್ರೀಪಾದ ಜೋಶಿ, ಮುನ್ನಾ ಅತ್ತಾರ, ಗೋಪಾಲ ಕಟ್ಟಿಮನಿ, ಆಸೀ ಕೆಂಭಾವಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts