More

    ಮಹಿಳೆಯರು ಸ್ವಾವಲಂಬಿಯಾಗಿ ಬದುಕಿ

    ಮಾಂಜರಿ: ಸರ್ಕಾರಗಳಿಗೂ ಆಗದಂತಹ ಕೆಲಸವನ್ನು ಡಾ. ವೀರೇಂದ್ರ ಹೆಗಡೆ ಅವರು ಶ್ರೀಕ್ಷೇತ್ರ ಧರ್ಮಸ್ಥಳ ಸಂಘ ಸಂಸ್ಥೆಗಳ ಮೂಲಕ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದ ಮಹಿಳೆಯರು ಸ್ವಾವಲಂಬಿಯಾಗಿ ಬದುಕಬೇಕು ಎಂದು ಸಿ.ಬಿ ಕೋರೆ ಶುಗರ್ಸ್‌ ನಿರ್ದೇಶಕ ಭರತೇಶ ಬನವಣೆ ಹೇಳಿದರು.

    ಸಮೀಪದ ನಸಲಾಪುರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮೀಣಾಭಿವದ್ಧಿ ಯೋಜನೆ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಸಾಧನಾ ಸಮಾವೇಶ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಯೋಜನೆಯಡಿಯಲ್ಲಿ 1.75 ಕೋಟಿ ಮಹಿಳೆಯರು ಸದಸ್ಯತ್ವ ಹೊಂದಿದ್ದಾರೆ. ವಿವಿಧ ಸಂಸ್ಥೆಗಳನ್ನು ಮಹಿಳೆಯರ ಸೇವೆಗಾಗಿ ಕಟ್ಟಲಾಗಿದೆ ಎಂದರು.

    ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಓಂಕಾರ ಅಶ್ರಮ ಮಠದ ಮಾತೊಶ್ರೀ ಭ್ರಮರಾಂಬಿಕಾ ದೇವಿ, ಬದುಕುವ ಕಲೆಯನ್ನು ಕಲಿಸಿದವರು ಡಾ. ವೀರೇಂದ್ರ ಹೆಗಡೆಜೀ. ಹೆಣ್ಣು ಮಕ್ಕಳ ಕಷ್ಟಗಳಿಗೆ ಕೇವಲ ಸಾಂತ್ವನದ ಮಾತುಗಳನ್ನು ಹೇಳಲಿಲ್ಲ. ಬಡವರ ಬೆನ್ನೆಲುಬಾಗಿ ನಿಂತು ಸ್ವಾಭಿಮಾನದಿಂದ ಬದುಕಲು ಕಲಿಸಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಗ್ರಾಪಂ ಅಧ್ಯಕ್ಷೆ ಮುಕ್ತಾಬಾಯಿ ಕೆಂಗಣ್ಣವರ, ಉಪಾಧ್ಯಕ್ಷ ನೇಮಿನಾಥ ಖೋಮಬಾರೆ, ಅಜಿತ ಖೆಮಲಾಪುರೆ, ಆನಂದ ಸಮಾಜೆ, ಕಷ್ಣ ದತ್ತವಾಡೆ, ನೆಹರು ಮಗದುಮ, ಸಂತೋಷ ಕುಮಾರ ರೈ, ದೀಪಾ ಕುಪ್ಪನಟ್ಟಿ, ಜಯಶ್ರೀ, ವಿಠ್ಠಲ, ಸುನಿತಾ ಗಿರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts