More

    ಮಹಿಳೆಯನ್ನು ಪ್ರೀತಿ ಗೌರವದಿಂದ ಕಾಣಬೇಕು : ಮಹಿಳಾ ಸಮಾವೇಶದಲ್ಲಿ ನಟಿ ಸುಧಾರಾಣಿ ಸಲಹೆ

    ಗೌರಿಬಿದನೂರು: ಹೆಣ್ಣಿಗೆ ವಿದ್ಯೆ ಕೊಡಿಸಿದರೆ ಸಾಲದು. ಆಕೆಯನ್ನು ಪ್ರೀತಿ ಗೌರವದಿಂದ ಕಂಡು, ಅವಳ ಸಾಧನೆ ಗುರುತಿಸಬೇಕು ಎಂದು ಚಿತ್ರನಟಿ ಸುಧಾರಾಣಿ ಹೇಳಿದರು.
    ನಗರದ ಬೈಪಾಸ್​ ರಸ್ತೆಯಲ್ಲಿ ಕೆ.ಆರ್​.ಸ್ವಾಮಿ ವಿವೇಕಾನಂದ ಟ್ರಸ್ಟ್​ನಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಹೆಣ್ಣಿಗೆ ಹೆಣ್ಣೇ ಶತ್ರು ಎಂಬ ಗಾಧೆ ಮಾತು ಹಲವು ಕಡೆ ಸಾಬೀತಾಗುತ್ತಿದ್ದು, ಇದನ್ನು ಹೋಗಲಾಡಿಸಬೇಕು. ಹೆಣ್ಣು ಮತ್ತೊಂದು ಹೆಣ್ಣಿಗೆ ತೊಂದರೆ ಕೊಡಬಾರದು. ಮಹಿಳೆಯರು ಧೈರ್ಯದ ಮನೋಭಾವ ಬೆಳೆಸಿಕೊಳ್ಳಬೇಕು. ತೆರೆಯ ಮೇಲೆ ನಟಿಸುವ ನಾವು ನಾಯಕಿಯರಷ್ಟೇ. ಆದರೆ ಕಷ್ಟದಲ್ಲೂ ಕುಟುಂಬದ ನೊಗ ಹೊತ್ತು ಮಾದರಿ ಜೀವನ ಸಾಗಿಸುವವರು ನಿಜವಾದ ಸಾಧಕಿಯರು. ಅಂತಹ ಸಾಧಕಿಯರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಶ್ಲಾನೀಯ. ಜನಪರ ಕೆಲಸಗಳನ್ನು ಮಾಡುತ್ತಿರುವ ಕೆಂಪರಾಜು ಅವರನ್ನು ಬೆಂಬಲಿಸಿ ಎಂದರು.
    ರಾಷ್ಟ್ರೀಯ ಮಹಿಳಾ ಬಾಡಿ ಬಿಲ್ಡರ್​ ಚಾಂಪಿಯನ್​ ಮಮತಾ ಮಾತನಾಡಿ, ಇದೇ ತಾಲೂಕಿನ ಬಸಾಪುರ ಗ್ರಾಮ ನಾನು ನಾಲ್ಕು ವರ್ಷಗಳ ಹಿಂದೆಯೇ ಬಾಡಿ ಬಿಲ್ಡರ್​ ಚಾಂಪಿಯನ್​ ಆಗಿದ್ದೆ. ಆದರೆ ತಾಲೂಕಿನಲ್ಲಿ ಯಾರು ನನ್ನನ್ನು ಗುರುತಿಸಿರಲಿಲ್ಲ. ಆದರೆ ಕೆಂಪರಾಜು ಅವರು ಗುರುತಿಸಿರುವುದಕ್ಕೆ ನಾನು ಆಭಾರಿಯಾಗಿದ್ದೇನೆ. ಹೆಣ್ಣು ಇಂದು ಎಲ್ಲ ಕ್ಷೇತ್ರಗಳಲ್ಲೂ ತನ್ನ ಛಾಪು ತೋರಿಸಿದ್ದಾಳೆ. ಎಲ್ಲ ಮಹಿಳೆಯರಿಗೂ ತಾಯಿಯೇ ಸೂಪರ್​ ಸ್ಟಾರ್​ ಎಂದರು.
    ಟ್ರಸ್ಟ್​ನ ಅಧ್ಯ ಡಾ.ಕೆ.ಕೆಂಪರಾಜು ಮಾತನಾಡಿ, ಸಮಾವೇಶದಲ್ಲಿ ಮಹಿಳೆಯರು ಭಾಗವಹಿಸಬಾರದು ಎಂದು ಕೆಲ ರಾಜಕಾರಣಿಗಳು ಅಧಿಕಾರಿಗಳ ಮೂಲಕ ಆಶಾ, ಅಂಗನವಾಡಿ ಕಾರ್ಯಕರ್ತರಿಗೆ ಸಂದೇಶಗಳನ್ನ ರವಾನೆ ಮಾಡಿದ್ದರು. ಆದರೆ ಅದಕ್ಕೆ ಯಾವುದೇ ರೀತಿಯ ಸೊಪ್ಪು ಹಾಕದೆ ಸಮಾವೇಶದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ತಮ್ಮ ಶಕ್ತಿ ಏನು ಎಂಬುದನ್ನು ತೋರ್ಪಡಿಸಿದ ಮಹಿಳೆಯರಿಗೆ ಆಭಾರಿಯಾಗಿರುತ್ತೇನೆ. ಜನ ಪರವಾಗಿ ಕೆಲಸ ಮಾಡುವರ ಪರವಾಗಿ ನಾನು ನಿಲ್ಲುತ್ತೇನೆ. ಆದರೆ ಜನರಿಗೆ ತೊಂದರೆ ನೀಡಿದರೆ ಸುಮ್ಮನೆ ಕೈಕಟ್ಟಿ ಕೂರುವುದಿಲ್ಲ ಎಂದರು.
    ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 18 ಮಂದಿ ಸಾಧಕಿಯರಿಗೆ ಗೌರಿಬಿದನೂರಿನ ಆದರ್ಶ ಮಹಿಳೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು. ಗ್ರಾಪಂ ಸದಸ್ಯೆ ಗಾಯತ್ರಿ ನಾಗರಾಜ್​, ತಾಪಂ ಮಾಜಿ ಸದಸ್ಯ ಚೇತನಾ, ಗ್ರಾಪಂ ಸದಸ್ಯರಾದ ರಾಮು, ಅಂಬರೀಷ್​, ಗಂಗಾಧರಪ್ಪ, ರಂಗನಾಥಗೌಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts