More

    13 ರಂದು ಕನಕಪುರ ಚಲೋ

    ಚಿಕ್ಕಬಳ್ಳಾಪುರ : ರಾಮನಗರ ಜಿಲ್ಲೆಯ ಕನಕಪುರದ ಮುನೇಶ್ವರಸ್ವಾಮಿ ಕ್ಷೇತ್ರ ಕಪಾಲ ಬೆಟ್ಟವನ್ನು ಉಳಿಸಲು ಜ.13 ರಂದು ಬೆಳಗ್ಗೆ 11 ಕ್ಕೆ ಹಿಂದೂ ಜಾಗರಣಾ ವೇದಿಕೆ(ಕರ್ನಾಟಕ ದಕ್ಷಿಣ ಪ್ರಾಂತ) ಕನಕಪುರ ಚಲೋ ಹೋರಾಟ ಕೈಗೊಂಡಿದೆ.

    ಕನಕಪುರದ ಅಯ್ಯಪ್ಪಸ್ವಾಮಿ ದೇವಸ್ಥಾನದಿಂದ ತಾಲೂಕು ಕಚೇರಿಯವರೆಗೂ ಬೃಹತ್ ಪ್ರತಿಭಟನಾ ರ‌್ಯಾಲಿ ನಡೆಸಿ, ಕಪಾಲ ಬೆಟ್ಟದಲ್ಲಿ ಯಾವುದೇ ಕಾರಣಕ್ಕೂ ಏಸು ಪ್ರತಿಮೆ ಪ್ರತಿಷ್ಠಾಪಿಸಲು ಅವಕಾಶ ನೀಡದಂತೆ ಸರ್ಕಾರಕ್ಕೆ ಒತ್ತಾಯಿಸಲಾಗುತ್ತದೆ. ಈ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕು ಎಂದು ನಗರದ ಪತ್ರಕರ್ತರ ಭವನದಲ್ಲಿ ಹಿಂದೂ ಜಾಗರಣಾ ವೇದಿಕೆಯ (ಕರ್ನಾಟಕ ದಕ್ಷಿಣ ಪ್ರಾಂತ) ರಾಜ್ಯ ಸಂಚಾಲಕ ಕುಮಾರ ಸುಬ್ರಹ್ಮಣ್ಯ ಮನವಿ ಮಾಡಿದರು.

    ಕಪಾಲ ಬೆಟ್ಟವು ಮುನೇಶ್ವರ ಸ್ವಾಮಿಯ ಬೆಟ್ಟ. ಇಲ್ಲಿನ ಸರ್ಕಾರಿ ಗೋಮಾಳ ಜಾಗದಲ್ಲಿ ಏಸುವಿನ ಪ್ರತಿಮೆ ಪ್ರತಿಷ್ಠಾಪಿಸುವ ಮೂಲಕ ಸುತ್ತಲಿನ ನಲ್ಲಹಳ್ಳಿ, ಬೇಕುಪ್ಪೆ, ತಾವರೆಕಟ್ಟೆ, ಹೂಕುಂದ, ಕೂತಕಳೆ, ಹಾರೋ ಶಿವನಹಳ್ಳಿ, ಮುಳ್ಳಳ್ಳಿ, ದೊಡ್ಡಾಲಹಳ್ಳಿ ಸೇರಿ ಅನೇಕ ಗ್ರಾಮಗಳ ಜನರನ್ನು ಮತಾಂತರಗೊಳಿಸುವ ಹುನ್ನಾರ ನಡೆಸಲಾಗುತ್ತಿದೆ. ಇದರ ಸುತ್ತಲು ಇರುವ ಕುಂತಿ, ಶಿವಗಿರಿ, ಶಿವಾಲ್ದಪ್ಪನ ಬೆಟ್ಟ ಮತ್ತು ಮರಳೆಗವಿ ಮಠಗಳು ಕ್ರೈಸ್ತ ಧರ್ಮ ಮತದ ಪ್ರಭಾವಕ್ಕೆ ಸಿಲುಕಲಿವೆ ಎಂದು ಆತಂಕ ವ್ಯಕ್ತಪಡಿಸಿದರು.

    ಈಗಾಗಲೇ ಕಪಾಲ ಬೆಟ್ಟವನ್ನು ಏಸು ಬೆಟ್ಟ ಎಂಬುದಾಗಿ ಕರೆಯಲಾಗುತ್ತಿದೆ. ಇನ್ನೂ ಹಾರೋಬೆಲೆ ಜಲಾಶಯವು ಪಾದ್ರಿಕೆರೆಯಾಗುತ್ತದೆ. ಹಿಂದೆ ಕನಕಪುರ ರಸ್ತೆಯಲ್ಲಿ ಇಸ್ಕಾನ್ ಶ್ರೀಕೃಷ್ಣ ಥೀಮ್ ಪಾರ್ಕ್ ನಿರ್ಮಾಣಕ್ಕೆ ಮುಂದಾದಾಗ ಮತಾಂತರ ನಿಲ್ಲುವ ಭಯದಿಂದ ತಡೆಯೊಡ್ಡಲಾಗಿತ್ತು. ಈಗ ಏಸು ಪ್ರತಿಮೆಯನ್ನು ಸ್ಥಾಪಿಸಿ ಒಳ ಯೋಜನೆಯನ್ನು ಅನುಷ್ಠಾನಗೊಳಿಸಲು ಯತ್ನಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ತುಮಕೂರು ವಿಭಾಗದ ಪ್ರಧಾನ ಕಾರ್ಯದರ್ಶಿ ಮುನೀಂದ್ರ ಮಾತನಾಡಿ, ಹಾರೋಬೆಲೆ ಕಪಾಲಬೆಟ್ಟ ಅಭಿವೃದ್ಧಿ ಟ್ರಸ್ಟ್‌ಗೆ ಕಾನೂನು ನಿಯಮಗಳನ್ನು ಮೀರಿ ಗೋಮಾಳ ಜಮೀನು ಮಂಜೂರು ಮಾಡಲಾಗಿದೆ. ನಲ್ಲಹಳ್ಳಿಯಲ್ಲಿ 1828 ಜಾನುವಾರುಗಳಿದ್ದು ಇದಕ್ಕೆ 548 ಎಕರೆ ಗೋಮಾಳ ಜಮೀನು ಕಾಯ್ದಿರಿಸಬೇಕು. ಆದರೆ, ಇದರಲ್ಲಿ ಸರ್ವೇ ನಂಬರ್ 283 ರಲ್ಲಿ ಕೇವಲ 209.22 ಎಕರೆ ಜಮೀನು ಮಾತ್ರ ಇದೆ. ಇದನ್ನರಿತು ಕೂಡಲೇ ವಿವಾದಿತ ಜಾಗವನ್ನು ಸರ್ಕಾರ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
    ಮುಖಂಡರಾದ ಅಜಾದ್ ವರದರಾಜು, ಕೊಂಡಪ್ಪ ಇದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts