More

    ಮಹಿಳಾ ದೌರ್ಜನ್ಯ ಖಂಡಿಸಿ ಕರ್ನಾಟಕ ಭೀಮ್‌ಸೇನೆ ಪ್ರತಿಭಟನೆ

    ಚಿತ್ರದುರ್ಗ: ಮಣಿಪುರ ಘಟನೆ ಸೇರಿದಂತೆ ದೇಶದೆಲ್ಲೆಡೆ ಮಹಿಳೆಯರ ಮೇಲಿನ ದೌರ್ಜನ್ಯ ಘಟನೆಗಳನ್ನು ಖಂಡಿಸಿ ಕರ್ನಾಟಕ ಭೀಮ್‌ಸೇನೆ ಪದಾಧಿಕಾರಿಗಳು ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
    ಮಣಿಪುರದ ಘಟನೆ ನಡೆದು ತಿಂಗಳ ಮೇಲಾದರೂ ರಾಷ್ಟ್ರೀಯ ಮಹಿಳಾ ಆಯೋಗ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡಲು ಸಾಧ್ಯವಾಗದ ಜನಪ್ರತಿನಿಧಿಗಳು ಸ್ವಯಂ ಪ್ರೇರಿತವಾಗಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಡಿಸಿಗೆ ಮನವಿ ಸಲ್ಲಿಸಿದರು.
    ಕರ್ನಾಟಕ ಭೀಮ್ ಸೇನೆ ಸಂಘಟನೆ ಕಾರ‌್ಯಾಧ್ಯಕ್ಷ ಹಾಲೇಶ್, ಜಿಲ್ಲಾಧ್ಯಕ್ಷ ರಮೇಶ್ ಎನ್.ಮಸ್ಕಲ್‌ಮಟ್ಟಿ, ನಿಂಗರಾಜು, ಮೈಲಾರಪ್ಪ, ರವಿಕುಮಾರ್ ಮತ್ತಿತರರು ಇದ್ದರು.


    ಚಿತ್ರದುರ್ಗ: ಮಣಿಪುರ ಘಟನೆ ಸೇರಿದಂತೆ ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಖಂಡಿಸಿ ಕರ್ನಾಟಕ ಭೀಮ ಸೇನೆ ಸಂಘಟನೆ ಜಿಲ್ಲಾ ಶಾಖೆ ಸದಸ್ಯರು ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಡಿಸಿ ಕಚೇರಿವರೆಗೆ ಪ್ರತಿಭಟನೆ ನಡೆಸಿದರು. ರಾಜ್ಯದಲ್ಲಿ ಈಚೆಗೆ ಮೂವರು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಎಸಗಿ ಅವರನ್ನು ಕೊಲೆ ಮಾಡಲಾಗಿದೆ.

    ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ನಡೆಸಿ,ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆಯ ಬಗ್ಗೆ ದೂರು ತಲುಪಿ ತಿಂಗಳ ಮೇಲಾದರೂ ರಾಷ್ಟ್ರೀಯ ಮಹಿಳಾ ಆಯೋಗ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಪ್ರತಿಭಟನಾನಿರತರು ಆ ಕ್ರೋಶ ವ್ಯಕ್ತಪಡಿಸಿದರು.
    ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯಗಳಾಗದಂತೆ ಕ್ರಮ ವಹಿಸಬೇಕು. ಹೆಣ್ಣು ಮಕ್ಕಳಿಗೆ ಸಂರಕ್ಷಣೆ ನೀಡಲು ಸಾಧ್ಯವಾಗದ ಜನಪ್ರತಿ ನಿಧಿಗಳು ಸ್ವಯಂ ಪ್ರೇರಿತವಾಗಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಡಿಸಿಗೆ ಮನವಿ ಸಲ್ಲಿಸಿದರು. ಕರ್ನಾಟಕ ಭೀಮ ಸೇನೆ ಸಂಘಟನೆ ಕಾರ‌್ಯಾಧ್ಯಕ್ಷ ಹಾಲೇಶ್,ಜಿಲ್ಲಾಧ್ಯಕ್ಷ ರಮೇಶ್ ಎನ್.ಮಸ್ಕಲ್‌ಮಟ್ಟಿ,ನಿಂಗರಾಜು, ಮೈಲಾರಪ್ಪ,ರವಿಕುಮಾರ್ ಮತ್ತಿತರರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts