More

    ಮಹಿಳಾ ಆಸ್ಪತ್ರೆಗೆ ರೋಟರಿ ಕ್ಲಬ್ನಿಂದ ವೈದ್ಯಕೀಯ ಉಪಕರಣಗಳ ಕೊಡುಗೆ

    ದಾವಣಗೆರೆ: ನಗರದ ಕೆ.ಆರ್.ರಸ್ತೆಯ ಮಹಿಳೆಯರು ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯ ನವಜಾತ ಶಿಶುಗಳ ವಿಶೇಷ ನಿಗಾ ಘಟಕದಲ್ಲಿ ಮಕ್ಕಳ ಚಿಕಿತ್ಸೆಗೆ ಅವಶ್ಯಕ 28.16 ಲಕ್ಷ ರೂ. ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ನೀಡಲು ರೋಟರಿ ಕ್ಲಬ್ ವಿದ್ಯಾನಗರ ಮುಂದಾಗಿದೆ.

    ರೋಟರಿ ಕ್ಲಬ್ ವಿದ್ಯಾನಗರವು ರಜತಮಹೋತ್ಸವ ವರ್ಷಾಚರಣೆಯ ಈ ಸಂದರ್ಭದಲ್ಲಿ ಗ್ಲೋಬಲ್ ಗ್ರ್ಯಾಂಟ್ ಪ್ರಾಜೆಕ್ಟ್‌ನಡಿ ನ್ಯೂನಟಾಲ್ ವೆಂಟಿಲೇಟರ್, ಸಿಪಿಎಪಿ ಯಂತ್ರ(2), ಎಚ್‌ಎಫ್‌ಎನ್‌ಸಿ ಯಂತ್ರ, ಇನ್‌ಫ್ಯೂಸನ್ ಪಂಪ್, ಸಿರಿಂಜ್ ಪಂಪ್ಸ್ ಇತ್ಯಾದಿ ನೀಡಲಾಗುತ್ತಿದೆ ಎಂದು ಗ್ಲೋಬಲ್ ಗ್ರ್ಯಾಂಟ್ ಸಮಿತಿ ಅಧ್ಯಕ್ಷ ಎಂ.ಎನ್.ಮಹೇಶ್ವರಪ್ಪ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ರೋಟರಿ ಫೌಂಡೇಷನ್ ಅಡಿ ಸದಸ್ಯರು ಅಂತಾರಾಷ್ಟ್ರೀಯ ಸಂಸ್ಥೆಗೆ ಸಲ್ಲಿಸುವ ದೇಣಿಗೆ ಮೂರು ವರ್ಷದ ಬಳಿಕ ಶೇ.50ರಷ್ಟು ಫಂಡ್ ರೂಪದಲ್ಲಿ ಬರಲಿದೆ. ಈ ಹಣವನ್ನು ಸ್ಥಳೀಯ ಯೋಜನೆಗಳಡಿ ಬಳಸಲಾಗುತ್ತದೆ.
    ಮಹಿಳೆಯರು ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯ ಎಸ್‌ಎನ್‌ಸಿಯುಗೆ ಭೇಟಿ ನೀಡಿದಾಗ ಅವಧಿಪೂರ್ವ ಜನಿಸಿದ, ಕಡಿಮೆ ತೂಕದ ಅಪೌಷ್ಟಿಕತೆಯಿಂದ ಕುಡಿ ಮಕ್ಕಳು, ಉಸಿರಾಟ ತೊಂದರೆ, ನಂಜು. ಉಸಿರುಗಟ್ಟುವಿಕೆ. ನ್ಯುಮೋನಿಯಾ ಮೊದಲಾದ ಆರೋಗ್ಯ ಸಮಸ್ಯೆ ಹಾಗೂ ಚಿಕಿತ್ಸೆಗೆ ಬೇಕಾದ ಉಪಕರಣಗಳ ಅಗತ್ಯತೆ ಗಮನಿಸಿ ಇವನ್ನು ಪೂರೈಸಲಾಗುತ್ತಿದೆ.
    ಇದರಿಂದ ನವಜಾತ ಶಿಶುಗಳು ಮಕ್ಕಳು ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಹೋಗುವುದು ಹೋಗುವುದು ಹಾಗೂ ಒಂದು ಮಗುವಿಗೆ ತಗಲುವ ಸುಮಾರು 10 ಸಾವಿರ ರೂ.ಗಳಷ್ಟು ವೆಚ್ಚ ತಗ್ಗಲಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ರೋಟರಿ ಸದಸ್ಯರು ಪರಿವೀಕ್ಷಣೆ ನಡೆಸಲಿದ್ದು, ಅಂತಾರಾಷ್ಟ್ರೀಯ ಸಂಸ್ಥೆಯ ಪ್ರತಿನಿಧಿಗಳು ಕೂಡ ಪರಿಶೀಲನೆ ನಡೆಸುವರು ಎಂದು ಹೇಳಿದರು.
    ಮೇ 1ರಂದು ಮಧ್ಯಾಹ್ನ 12-30ಕ್ಕೆ ಈ ಯಂತ್ರೋಪಕರಣಗಳ ಹಸ್ತಾಂತರ ಕಾರ್ಯಕ್ರಮ ಆಸ್ಪತ್ರೆ ಸಭಾಂಗಣದಲ್ಲಿ ನಡೆಯಲಿದೆ. ಜಿಲ್ಲಾ ಪ್ರಾಂತಪಾಲ ವೊಮ್ಮಿನ ಸತೀಶ್‌ಬಾಬು, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಡಿಎಚ್‌ಒ ಡಾ.ಎಲ್.ನಾಗರಾಜು, ರೋಟರಿ ಕ್ಲಬ್ ವಿದ್ಯಾನಗರ ಸಂಸ್ಥೆ ಅಧ್ಯಕ್ಷ ಸಿ.ಕೆ. ಸಿದ್ದಪ್ಪ, ಕೆ. ಶ್ರೀರಾಮಮೂರ್ತಿ ಬಿ. ಚಿನ್ನಪ್ಪರೆಡ್ಡಿ, ಕೆ. ಮಧುಪ್ರಸಾದ್ ಇತರರು ಭಾಗವಹಿಸುವರು.
    ಮಧ್ಯಾಹ್ನ 2 ಗಂಟೆಗೆ ಪೌಲ್ ಪಿ. ಹ್ಯಾರಿಸ್ ಪ್ರತಿಮೆ ಅನಾವರಣ ಕಾರ್ಯಕ್ರಮ ವಿದ್ಯಾನಗರದ ರೋಟರಿ ಭವನದಲ್ಲಿ ನಡೆಯಲಿದೆ. ಜಿಲ್ಲಾ ಪ್ರಾಂತಪಾಲ ಬಾಘ್‌ಸಿಂಗ್ ಪನ್ನು ಕಾರ್ಯಕ್ರಮ ಉದ್ಘಾಟಿಸುವರು ಎಂದು ತಿಳಿಸಿದರು.
    ಸುದ್ದಿಗೋಷ್ಠಿಯಲ್ಲಿ ರೋಟರಿ ಕ್ಲಬ್ ವಿದ್ಯಾನಗರ ಸಂಸ್ಥೆ ಅಧ್ಯಕ್ಷ ಸಿ.ಕೆ. ಸಿದ್ದಪ್ಪ, ಎನ್.ಬಿ. ಮೃತ್ಯುಂಜಯಪ್ಪ, ಎಚ್.ಎಂ. ಚಂದ್ರಾಚಾರ್, ಜಿ.ಬಿ.ಸಿದ್ದಪ್ಪ, ರವಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts