More

    ಮಹಾಲಕ್ಷ್ಮೀ ರಥೋತ್ಸವ ಸರಳ


    ಜೇವರ್ಗಿ: ಪಟ್ಟಣದ ಆರಾಧ್ಯ ದೇವತೆ ಶ್ರೀ ಮಹಾಲಕ್ಷ್ಮೀ ದೇವಿಯ ಜಾತ್ರಾ ಮಹೋತ್ಸವ ಸರ್ಕಾರದ ಆದೇಶದನ್ವಯ ಕರೊನಾ ನಿಯಮ ಪಾಲಿಸಿ ಜಾತ್ರಾ ಮಹೋತ್ಸವ ಸರಳವಾಗಿ ಜರುಗಿತು.
    ಸೀಗಿ ಹುಣ್ಣಿಮೆ ನಂತರ ನಡೆಯುವ ಮಹಾಲಕ್ಷ್ಮಿ ದೇವಿಯ ಜಾತ್ರೆ ಐದು ದಿನಗಳ ಪರ್ಯಂತ ಸಾಂಪ್ರದಾಯಿಕವಾಗಿ ಆಚರಿಸಲಾಯಿತು. ತಾಲೂಕು ಆಡಳಿತವು ಜಾತ್ರೆ ರದ್ದು ಮಾಡಿದ್ದರಿಂದ ಧಾರ್ಮಿಕ ಆಚರಣೆಗಳಿಗೆ ಅವಕಾಶ ನೀಡಲಿಲ್ಲ. ತಾಲೂಕು ದಂಡಾಧಿಕಾರಿ ಸಿದರಾಯ ಭೋಸಗಿ ಬುಧವಾರ ಬೆಳಗ್ಗೆ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ದರ್ಶನ ಪಡೆದ ನಂತರ ರಥೋತ್ಸವಕ್ಕೆ ಚಾಲನೆ ನೀಡಿದರು. ನಂತರ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಹೊರವಲಯದ ಆಯಿತಳ (ಸೀಮೆಯ ದೇವಸ್ಥಾನಕ್ಕೆ) ತೆರಳಿ ಉತ್ಸವ ಮೂರ್ತಿ ಪ್ರತಿಷ್ಠಾಪಿಸಲಾಯಿತು. ದೇವಸ್ಥಾನ ಟ್ರಸ್ಟ್ ಕಮಿಟಿ ಕರೊನಾ ಆತಂಕ ಹಾಗೂ ಸರ್ಕಾರದ ಆದೇಶದಂತೆ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿತ್ತು.
    ಶಾಸಕ ಡಾ.ಅಜಯಸಿಂಗ್, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಉಪಸ್ಥಿತರಿದ್ದರು.
    ಭಾನುವಾರ ಇಡೀ ರಾತ್ರಿ ಭಜನೆ, ಸೋಮವಾರ ಬಡಿಗೇರ ಸಮಾಜದಿಂದ ವಿಶೇಷ ಪೂಜೆ ಜರುಗಿತು. ಮಂಗಳವಾರ ನಡುಗಟ್ಟೆಗೆ ಶ್ರೀದೇವಿಯ ಆಗಮನವಾಯಿತು. ಬುಧವಾರದ ರಥೋತ್ಸವ ಸಂದರ್ಭದಲ್ಲಿ ಕೆಲವು ಕಲಾ ಮೇಳಗಳು ಪರಸ್ಪರ ಅಂತರ ಕಾಪಾಡಿಕೊಂಡು ಭಾಗವಹಿಸಿ ಸೇವೆ ಸಲ್ಲಿಸಿದರು. ಬೆಳಗ್ಗೆ 9ಕ್ಕೆ ರಥೋತ್ಸವ ಸಂಪನ್ನಗೊಂಡಿತು.
    ದೇವಿಗೆ ನೈವೇದ್ಯ, ಕಾಯಿ ಕರ್ಪುರ ಅರ್ಪಿಸುವುದು ನಿಷೇಧಿಸಲಾಗಿತ್ತು. ದೇವಸ್ಥಾನಕ್ಕೆ ಬೀಗ ಹಾಕಿದ ಪರಿಣಾಮ ಭಕ್ತರು ಬಾಗಿಲಿಗೆ ನಮಸ್ಕರಿಸಿ ಹರಕೆ ತೀರಿಸಿದರು.
    ಮುಖಂಡರಾದ ಅಶೋಕ ಸಾಹು ಗೋಗಿ, ಶಿವಶರಣಪ್ಪಗೌಡ ಮಾಲಿಪಾಟೀಲ್, ಷಣ್ಮುಖಪ್ಪಗೌಡ ಹಿರೇಗೌಡ, ರಮೇಶಬಾಬು ವಕೀಲ, ರಾಜಶೇಖರ ಸಿರಿ, ಸೋಮಣ್ಣ ಕಲ್ಲಾ, ಷಣ್ಮುಖಪ್ಪ ಸಾಹು ಗೋಗಿ, ದೊದ್ದಪ್ಪಗೌಡ ಪೊಲೀಸ್ ಪಾಟೀಲ, ಮಲ್ಲಶೆಟ್ಟೆಪ್ಪಗೌಡ ಹಿರೇಗೌಡ, ಮಲ್ಲಿಕಾರ್ಜುನ ಅವುಂಟಿ, ಶ್ರೀಶೈಲಗೌಡ ಪೊಲೀಸ್ಪಾಟೀಲ್, ನೀಲಕಂಠ ಅವಂಟಿ, ಜಗದೀಶ ವಿಶ್ವಕರ್ಮ, ಗುಂಡು ಬಡಿಗೇರ, ರವಿ ಕೋಳಕೂರ, ಶರಣಗೌಡ ಪೂಜಾರಿ, ಭೀಮು ತಳವಾರ, ರಾಜು ತಳವಾರ, ಹರಿಶ್ಚಂದ್ರ ಕೊಡಚಿ, ಸಂಗಮೇಶ ಕೊಂಬಿನ್, ವಿಶ್ವ ಮದಕರಿ, ಬಸವರಾಜ ಮಡಿವಾಳಕರ್ ಮತ್ತಿತರರಿದ್ದರು. ಸಿಪಿಐ ರಮೇಶ ರೊಟ್ಟಿ ಹಾಗೂ ಪಿಎಸ್ಐ ಮಂಜುನಾಥ ಹೂಗಾರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts