More

    ಮಹಾಬಲೇಶ್ವರ ಕಾರ್ತಿಕ ಶಿಖರ ದೀಪೋತ್ಸವ

    ಗೋಕರ್ಣ: ಕಾರ್ತಿಕ ಪೌರ್ಣಿಮೆ ನಿಮಿತ್ತ ಮಹಾಬಲೇಶ್ವರ ಮಂದಿರದಲ್ಲಿ ಭಾನುವಾರ ಅಹೋರಾತ್ರಿ ವಿವಿಧ ಉತ್ಸವಗಳು ಜರುಗಿದವು. ಮಧ್ಯಾಹ್ನ ಪರ್ವತ ಪ್ರದೇಶದಲ್ಲಿರುವ ಭೀಮಕುಂಡಕ್ಕೆ ತೆರಳಿದ ಮಹಾಬಲೇಶ್ವರ ಉತ್ಸವ ಅಲ್ಲಿ ಹಮ್ಮಿಕೊಂಡಿದ್ದ ವನಭೋಜನದಲ್ಲಿ ಪಾಲ್ಗೊಂಡಿತು. ರಾತ್ರಿ ಮರಳಿ ಬಂದ ಉತ್ಸವ ಮಂದಿರ ಪ್ರವೇಶಿಸುತ್ತಿದ್ದಂತೆ ಮಂದಿರದ ತುಂಬ ಹಣತೆ ಬೆಳಗಿಸಲಾಯಿತು. ತ್ರಿಪುರಾಖ್ಯ ಸಂಹಾರ ನಿಮಿತ್ತ ದೀಪೋತ್ಸವ ಜರುಗಿತು.

    ಮಂದಿರದ ಎತ್ತರದ ಶಿಖರವನ್ನು ಕೂಡ ಹಣತೆ ಹಚ್ಚಿ ಅಲಂಕರಿಸುವುದು ಕಾರ್ತಿಕ ಪೌರ್ಣಿಮೆಯ ವಿಶೇಷವಾಗಿದೆ. ಮಂದಿರದಲ್ಲಿ ವರ್ಷಕ್ಕೊಮ್ಮೆ ನಡೆಯುವ ಮಂದಿರ ದೀಪೋತ್ಸವ ಹಾಗೂ ಶಿಖರ ದೀಪೋತ್ಸವ ವೀಕ್ಷಿಸಲು ಪ್ರತಿವರ್ಷ ಮಂದಿರ ತುಂಬೆಲ್ಲ ಅಪಾರ ಸಂಖ್ಯೆಯಲ್ಲಿ ಭಕ್ತರು ಜಮಾಯಿಸುತ್ತಿದ್ದರು. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಮಂದಿರ ಖಾಲಿಯಾಗಿ ಸೀಮಿತ ಪ್ರಮಾಣದಲ್ಲಿ ಭಕ್ತರಿದ್ದರು. ರಾತ್ರಿ ಕೋಟಿತೀರ್ಥದಲ್ಲಿ ಜಲಯಾನೋತ್ಸವ ಮತ್ತು ನಂತರ ಬೆಳಗ್ಗೆ ರಥಬೀದಿಯಲ್ಲಿ ಪುಷ್ಪರಥ ಎಳೆಯಲ್ಪಟ್ಟಿತು.

    ಶ್ರೀಗಳ ಭೇಟಿ: ದೀಪೋತ್ಸವದ ಸಮಯದಲ್ಲಿ ಶ್ರೀರಾಮಚಮಂದ್ರಾಪುರಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಮಂದಿರಕ್ಕೆ ಆಗಮಿಸಿ ಒಳಾಂಗಣದಲ್ಲಿ ಜರುಗಿದ ಶ್ರೀದೇವರ ಪ್ರದಕ್ಷಿಣೆಯಲ್ಲಿ ಪಾಲ್ಗೊಂಡು ಆತ್ಮಲಿಂಗ ದರ್ಶನ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts