More

    ಮಹಾನಗರ ಪಾಲಿಕೆ ಹಣ ದುರುಪಯೋಗ: ಸಮಜಾಯಿಷಿ ನೀಡಿಲು ಎಫ್‌ಡಿಸಿ ಗುಳೇದಗೆ ಸೂಚನೆ

    ವಿಜಯಪುರ: ಸಾರ್ವಜನಿಕರಿಂದ ವಿವಿಧಿ ಶುಲ್ಕಗಳಡಿ ಸಂಗ್ರಹಗೊಂಡ 4,65,565 ರೂ.ಗಳನ್ನು ದುರುಪಯೋಗಪಡಿಸಿಕೊಂಡಿರುವ ಪಾಲಿಕೆ ಹಿಂದಿನ ಪ್ರಥಮ ದರ್ಜೆ ಸಹಾಯಕ ಆರ್.ವೈ. ಗುಳೇದಗೆ ಸಮರ್ಥ ದಾಖಲೆಯೊಂದಿಗೆ ಸಮಜಾಯಿಷಿ ನೀಡಲು ಆಯುಕ್ತ ಶ್ರೀಹರ್ಷಾ ಶೆಟ್ಟಿ ಸೂಚಿಸಿದ್ದಾರೆ.

    ಈ ಹಿಂದೆ ಮಹಾನಗರಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಪಾಲಿಕೆಯ ವಿವಿಧ ಶಾಖೆಗಳಿಂದ ಕಟ್ಟಡ ಪರವಾನಿಗೆ ಶುಲ್ಕ, ಟ್ರೇಡ್ ಲೈಸೆನ್ಸ್ ಶುಲ್ಕ, ಅಭಿವೃದ್ಧಿ ಕರ, ಖಾತಾ ಬದಲಾವಣೆ ಮತ್ತು ಇತ್ಯಾದಿ ಕರಗಳು ಸಾರ್ವಜನಿಕರಿಂದ ವಸೂಲಿಯಾದ ನಗದು ರೂಪದ ಮೊತ್ತವನ್ನು ಗುಳೇದ ಬಳಸಿಕೊಂಡಿದ್ದಾರೆ.
    ಶುಲ್ಕದ ಮೊತ್ತವನ್ನು ಪ್ರತಿ ನಿತ್ಯ ಕೆಎಂಎ್ -17 ರ ರಿಜಿಸ್ಟರ್‌ದಲ್ಲಿ (ಚಿತ್ತಾ ಪುಸ್ತಕ) ನಿಧಿವಾರು ದಾಖಲಿಸಿ ಚಲನ ಮೂಲಕ ಪಾಲಿಕೆಯ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು. ಹಾಗೆ ಮಾಡದೇ ಒಟ್ಟು 4,65,565 ರೂ.ಗಳನ್ನು ದುರುಪಯೋಗ ಪಡಿಸಿಕೊಂಡಿರುವುದು ಸಾಬೀತಾಗಿರುವುದಾಗಿ ವಿಚಾರಣಾಧಿಕಾರಿಗಳು ವರದಿ ಸಲ್ಲಿಸಿದ್ದಾರೆ. ವರದಿ ಆಧರಿಸಿ ನೋಟಿಸ್ ಕಳುಹಿಸಿದ್ದು, ನೋಟಿಸ್ ಸ್ವೀಕರಿಸಿದ 15 ದಿನಗಳೊಳಗೆ ಲಿಖಿತ ಸಮಜಾಯಿಷಿಯನ್ನು ಸಮರ್ಥ ದಾಖಲೆಗಳೊಂದಿಗೆ ಪೌರಾಡಳಿತ ನಿರ್ದೇಶನಾಲಯಕ್ಕೆ ಸಲ್ಲಿಸತಕ್ಕದ್ದು, ನಿಗದಿತ ಅವಧಿಯಲ್ಲಿ ಸಮಜಾಯಿಷಿ ಸ್ವೀಕೃತವಾಗದಿದ್ದಲ್ಲಿ, ಹೇಳಿಕೆ ಏನೂ ಇಲ್ಲವೆಂದು ಭಾವಿಸಿ ಅವರ ವಿರುದ್ಧ ಕೆಸಿಎಸ್ (ಸಿಸಿಎ) 1957 ರ ನಿಯಮಾನುಸಾರ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಆಯಕ್ತ ಶ್ರೀಹರ್ಷಾ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts