More

    ಮಹನೀಯರ ಜಯಂತಿ ಜಾತಿಗೆ ಮೀಸಲಿಡಬೇಡಿ

    ರಟ್ಟಿಹಳ್ಳಿ: ಛತ್ರಪತಿ ಶಿವಾಜಿ ಮಹಾರಾಜರು ಸೇರಿ ದೇಶದ ಉಳಿವಿಗಾಗಿ ಹೋರಾಡಿದ ಅನೇಕ ಮಹನೀಯರ ಜಯಂತಿಗಳನ್ನು ಆ ವರ್ಗದವರು ಮತ್ತು ಜಾತಿಗೆ ಸೀಮಿತಗೊಳಿಸಬಾರದು. ಎಲ್ಲ ಸಮಾಜದವರ ಸಮ್ಮುಖದಲ್ಲಿ ಜಯಂತಿ ಆಚರಿಸಿದಾಗ ಮಾತ್ರ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ತಹಸೀಲ್ದಾರ್ ಆರ್.ಎಚ್. ಭಾಗವಾನ್ ಹೇಳಿದರು.

    ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಮರಾಠ ಸಮಾಜ ಹಾಗೂ ವಿವಿಧ ಸಮಾಜದ ಮುಖಂಡರ ಸಮ್ಮುಖದಲ್ಲಿ ಬುಧವಾರ ಏರ್ಪಡಿಸಿದ್ದ ಶಿವಾಜಿ ಮಹಾರಾಜರ 393ನೇ ಜಯಂತ್ಯುತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಮಹಾರಾಜರ ಆಳ್ವಿಕೆಯಲ್ಲಿ ಜಾತಿ-ಭೇದ ಮಾಡದೇ ಎಲ್ಲ ಜನಾಂಗದವರು ಕೂಡಿಕೊಂಡು ಹೋರಾಟಗಳನ್ನು ಮಾಡುತ್ತಿದ್ದರು. ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದರು. ಶಿವಾಜಿಯವರ ಸೇನೆಯಲ್ಲಿ ಅನೇಕ ಮುಸ್ಲಿಮರು ಸೇನಾಧಿಪತಿಯಾಗಿದ್ದರು. ಆದರೆ, ಇಂದಿನ ದಿನಮಾನಗಳಲ್ಲಿ ಎಲ್ಲರೂ ಜಾತಿಗಳಿಗಾಗಿ ಮಹನೀಯರನ್ನು ಜಯಂತಿಗೆ ಮೀಸಲಿಡುತ್ತಿರುವುದು ವಿಪರ್ಯಾಸವಾಗಿದೆ ಎಂದು ಹೇಳಿದರು.

    ಉಪನ್ಯಾಸಕ ಡಾ. ಮಹೇಶ ಅಂಚಿ ಉಪನ್ಯಾಸ ನೀಡಿ, ಶಿವಾಜಿಯವರ ಕಾಲದಲ್ಲಿ ಮೊಘಲರು, ಡಚ್ಚರು, ಪೋರ್ಚುಗೀಸರು, ಫ್ರೆಂಚರು ನಾಲ್ಕು ದಿಕ್ಕುಗಳಿಂದ ಭಾರತದ ಮೇಲೆ ದಾಳಿ ಮಾಡಿದ್ದರು. ಆದರೆ, ಅವರ ದಾಳಿಯನ್ನು ಅಡಗಿಸಿದ ಕೀರ್ತಿ ಶಿವಾಜಿ ಅವರಿಗೆ ಸಲ್ಲುತ್ತದೆ. ಧರ್ಮಸಹಿಷ್ಣುತೆಯ ಆಧಾರದ ಮೇಲೆ ಆಳ್ವಿಕೆ ಮಾಡಿದ ಅವರು ಮಹಿಳೆಯರನ್ನು ಅಪಾರವಾಗಿ ಗೌರವಿಸುತ್ತಿದ್ದರು. ಅವರ ತತ್ತ್ವಳು, ಆದರ್ಶಗಳನ್ನು ಎಲ್ಲ ಸಮಾಜದವರು ಪಾಲಿಸಬೇಕು ಎಂದರು.

    ಮರಾಠ ಸಮಾಜದ ತಾಲೂಕಾಧ್ಯಕ್ಷ ಕೆ.ವೈ. ಬಾಜೀರಾಯರ, ಗ್ರಾಪಂ ಉಪಾಧ್ಯಕ್ಷ ಗೋಪಾಲ ಮಡಿವಾಳರ, ಸದಸ್ಯರಾದ ರಾಜು ಪವಾರ, ಬಸವರಾಜ ಆಡಿನವರ, ರಮೇಶ ಬಾಗೋಡಿ, ಮುಖಂಡರಾದ ತಾನೋಜಿ ಅಂಗಡಿ, ನರಸಿಂಹ ಬೇವಿನಕಟ್ಟಿ, ಶ್ರೀನಿವಾಸ ಭೈರಪ್ಪನವರ, ವೀರಭದ್ರಪ್ಪ ಬಿಳಚಿ, ಕುಮಾರ ಪವಾರ, ವಸಂತ ಬಿಳಚಿ, ಪ್ರವೀಣ ಜಮ್ಮೀದಾರ, ರಮೇಶ ಭೀಮಪ್ಪನವರ, ಮಂಜು ಅಸ್ವಾಲಿ, ಇತರರಿದ್ದರು.

    ಭಾವಚಿತ್ರಕ್ಕೆ ಪೂಜೆ: ಪಿ.ವಿ.ಎಸ್. ಶಾಲೆ: ಇಲ್ಲಿನ ಪಿ.ವಿ.ಎಸ್. ಪಬ್ಲಿಕ್ ಶಾಲೆಯಲ್ಲಿ ಬುಧವಾರ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ 393ನೇ ಜಯಂತಿ ಆಚರಿಸಲಾಯಿತು. ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಸಂಸ್ಥೆ ಪ್ರಧಾನ ಕಾರ್ಯದರ್ಶಿ ಹರೀಶಕುಮಾರ ಪವಾರ ಮಾತನಾಡಿದರು. ಮುಖ್ಯಶಿಕ್ಷಕ ಪರಶುರಾಮ ಪವಾರ, ಶಿಕ್ಷಕರಾದ ವೀರೇಶ ಹೊಸಬೆಳ್ಳೂರ, ಕಲ್ಪನಾ ಹೆಗಡೆ, ನಗೀನಾಬಾನಿ, ಮಧು ಬೆನ್ನೂರ, ಸುನೈನಾಬಾನು, ಶಶಿಕಲಾ ಗುಲದಳ್ಳಿ, ಅನ್ನಪೂರ್ಣ ಶಹಮದ್, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts