More

    ಮಹನೀಯರ ಜಯಂತಿಗೆ ಜನ ಸೇರಿಸಿ

    ಕೋಲಾರ: ನೂರಾರು ವರ್ಷಗಳ ಹಿಂದೆಯೇ ವಚನಗಳ ಮೂಲಕ ಸಮಾಜ ತಿದ್ದುವ ಕೆಲಸಕ್ಕೆ ಅನೇಕ ಶರಣರು ಮುಂದಾಗಿದ್ದು, ಅವರ ಜಯಂತಿಯನ್ನು ಕೆಲವೇ ಮಂದಿಗೆ ಸೀಮಿತಗೊಳಿಸದೆ ಹೆಚ್ಚಿನ ಸಂಖ್ಯೆಯಲ್ಲಿ ಆಚರಿಸುವಂತಾಗಲಿ ಎಂದು ಶಾಸಕ ಕೆ.ಶ್ರೀನಿವಾಸಗೌಡ ಸೂಚಿಸಿದರು.

    ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬುಧವಾರ ಆಯೋಜಿಸಿದ್ದ ಕಾಯಕ ಶರಣರ ಜಯಂತಿಯಲ್ಲಿ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಮಹಾನ್​ ವ್ಯಕ್ತಿಗಳ ಜಯಂತಿ ಆಚರಿಸುವ ಮೊದಲು ಎಲ್ಲರೊಂದಿಗೆ ಚರ್ಚಿಸಿ ಹೆಚ್ಚಿನ ಜನರನ್ನು ಸೇರಿಸಿ ಆಚರಣೆ ಮಾಡಿದರೆ ಅದಕ್ಕೆ ಅರ್ಥ ಬರುತ್ತದೆ. ಕೆಲವೇ ಕೆಲವು ಮಂದಿ ಸೇರಿ ಆಚರಣೆ ಮಾಡಿದರೆ ಸಮಾಜಕ್ಕೆ ಕೆಟ್ಟ ಹೆಸರು ಬರುತ್ತದೆ. ಇದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಎಂದರು.

    ಮಹಾನ್​ ವ್ಯಕ್ತಿಗಳ ಆಚರಣೆಗಳು ಬೇರೆ ದೇಶಗಳಲ್ಲಿ ಯಾವ ರೀತಿ ಇರುತ್ತವೆ ಎನ್ನುವುದು ನಮಗೆ ಬೇಕಿಲ್ಲ. ನಮ್ಮ ದೇಶದಲ್ಲಿ ಮೊದಲಿನಿಂದಲೂ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಎಚ್ಚರಿಕೆಯಿಂದ ಇರಬೇಕು. ಇಲ್ಲವಾದಲ್ಲಿ ನಿಮ್ಮ ಪಾಡಿಗೆ ನೀವು ಒಂದು ಸ್ಥಳದಲ್ಲಿ ಮಾಡಿಕೊಳ್ಳಿ. ಅದನ್ನು ಬಿಟ್ಟು ಈ ರೀತಿ ಆಚರಣೆ ಮಾಡುವುದು ಅವಶ್ಯವಿಲ್ಲ ಎಂದರು.

    ಜಿಲ್ಲಾಧಿಕಾರಿ ವೆಂಕಟ್​ ರಾಜಾ ಮಾತನಾಡಿ, ಅನೇಕ ಶರಣರು ಸಮಾಜಕ್ಕೆ ಕೊಡುಗೆ ನೀಡುವ ಮೂಲಕ ಉತ್ತಮ ಸಮಾಜ ನಿಮಾರ್ಣ ಮಾಡಿದ್ದಾರೆ. ದೂರದೃಷ್ಟಿಯನ್ನಿಟ್ಟುಕೊಂಡು ಉತ್ತಮ ಶಿಕ್ಷಣ, ಆಡಳಿತ ಸೇರಿ ಇನ್ನಿತರ ವ್ಯವಸ್ಥೆ ಮಾಡಿಕೊಟ್ಟರೆ ಭವಿಷ್ಯದಲ್ಲಿ ಮಕ್ಕಳು ಉತ್ತಮ ಪ್ರಜೆಗಳಾಗಿ ಬದುಕಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಎಲ್ಲರೂ ಸಹಕಾರ ನೀಡಬೇಕು ಎಂದರು.
    ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನರೇಂದ್ರಬಾಬು, ದಲಿತ ಮುಖಂಡರಾದ ಚಂದ್ರಶೇಖರ್​, ನಾಗನಾಳ ಮುನಿಯಪ್ಪ, ಸಾಹುಕಾರ್​ ಶಂಕರಪ್ಪ, ಮುನಿಆಂಜಿನಪ್ಪ, ಮತ್ತಿಕುಂಟೆ ಕೃಷ್ಣ, ವಕೀಲ ಸತೀಶ್​ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts