More

    ಮಹತೀ ಸಂಸ್ಥೆಗೆ ಸಂಗೀತ ಡಿಪ್ಲೊಮಾ, ಸರ್ಟಿಫಿಕೇಟ್ ಕೋರ್ಸ್ ನಡೆಸಲು ಮಾನ್ಯತೆ

    ದಾವಣಗೆರೆ: ನಗರದ ಮಹತೀ ಸಾಂಸ್ಕೃತಿಕ ಕಲಾ ಸಂಸ್ಥೆಗೆ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಿಂದ ಸಂಗೀತ ಪರೀಕ್ಷೆಗಳನ್ನು ನಡೆಸಲು ಮಾನ್ಯತೆ ದೊರೆತಿದೆ.
    ದಾವಣಗೆರೆಯಲ್ಲಿ ಸಂಗೀತ ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ಪದವಿ ಪರೀಕ್ಷೆಗಳನ್ನು ನಡೆಸುವ ಅವಕಾಶ ನಮ್ಮ ಸಂಸ್ಥೆಗೆ ಸಿಕ್ಕಿದೆ. ಪ್ರಸಕ್ತ ಸಾಲಿನಿಂದ ಸಂಗೀತದಲ್ಲಿ ಸರ್ಟಿಫಿಕೇಟ್, ಡಿಪ್ಲೊಮಾ ಹಾಗೂ ಬ್ಯಾಚುಲರ್ ಇನ್ ಪರ್ಫಾಮಿಂಗ್ ಆರ್ಟ್ಸ್ (ಬಿಪಿಎ) ಕೋರ್ಸ್‌ಗಳನ್ನು ಆರಂಭಿಸಲಾಗುವುದು ಎಂದು ಸಂಸ್ಥೆಯ ಕಾರ್ಯದರ್ಶಿ ಎಂ.ದ್ವಾರಕೀಶ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಸರ್ಟಿಫಿಕೇಟ್ ಕೋರ್ಸ್ ಇನ್ ಮ್ಯೂಸಿಕ್ ಮತ್ತು ಡಿಪ್ಲೊಮಾ ಕೋರ್ಸ್ ಇನ್ ಮ್ಯೂಸಿಕ್ ಒಂದು ವರ್ಷದ ಅವಧಿಯದಾಗಿವೆ. ಬಿಪಿಎ ಮೂರು ವರ್ಷದ ಕೋರ್ಸ್ ಆಗಿದೆ. ಡಿಪ್ಲೊಮಾ ಕೋರ್ಸ್‌ಗೆ ಪಿಯುಸಿ, ಸರ್ಟಿಫಿಕೇಟ್ ಕೋರ್ಸ್‌ಗೆ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ.
    ಸಂಗೀತ ಪರೀಕ್ಷೆಗಳಿಗೆ ಈಗಾಗಲೇ ಪ್ರವೇಶಾತಿ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಜುಲೈ 31 ಕಡೆಯ ದಿನವಾಗಿದೆ. ದಿನಾಂಕ ವಿಸ್ತರಣೆಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
    ಸಂಸ್ಥೆಯ ನಾಗಶ್ರೀ, ಸವಿತಾ ಕೂಲಂಬಿ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts