More

    ಮಸ್ಕತ್​ನಿಂದ ಬಂದವಗೆ ಸೋಂಕು ಖಚಿತ

    ಕಾರವಾರ/ಸಿದ್ದಾಪುರ: ಸಿದ್ದಾಪುರ ತಾಲೂಕಿನಲ್ಲಿ ಭಾನುವಾರ 2 ಕರೊನಾ ಪ್ರಕರಣಗಳು ಪತ್ತೆಯಾಗಿದ್ದು, 7 ದಿನದ ಸಾಂಸ್ಥಿಕ ಕ್ವಾರಂಟೈನ್ ಮುಗಿಸಿ ಬಂದ ವ್ಯಕ್ತಿಯ 2ನೇ ಬಾರಿಯ ಗಂಟಲ ದ್ರವ ಪರೀಕ್ಷೆಯಲ್ಲಿ ಕರೊನಾ ಪತ್ತೆಯಾಗಿರುವುದು ಅಚ್ಚರಿಗೆ ಕಾರಣವಾಗಿದೆ.

    ಮೇ 20ರಂದು ಮಸ್ಕತ್​ನಿಂದ ವಿಮಾನದಲ್ಲಿ ಮರಳಿದ 32 ವರ್ಷದ ವ್ಯಕ್ತಿ ಬೆಂಗಳೂರಿನಲ್ಲಿ ಸಾಂಸ್ಥಿಕ ಕ್ವಾರಂಟೈನ್​ಗೆ ಒಳಗಾಗಿದ್ದರು. 7 ದಿನ ಮುಗಿದ ನಂತರ ಅವರ ಗಂಟಲ ದ್ರವದ ಮಾದರಿ ಪರೀಕ್ಷೆ ನೆಗೆಟಿವ್ ಬಂದಿತ್ತು. ನಂತರ ಅವರಿಗೆ ಊರಿಗೆ ಮರಳಲು ಅವಕಾಶ ನೀಡಲಾಗಿತ್ತು. ಎನ್​ಡಬ್ಲ್ಯುಕೆಆರ್​ಟಿಸಿ ಬಸ್​ನಲ್ಲಿ ಸಾಗರಕ್ಕೆ ಬಂದಿಳಿದ ಅವರು, ಗೂಡ್ಸ್ ಆಟೋದಲ್ಲಿ ತಮ್ಮ ಊರು ಸಿದ್ದಾಪುರದ ಜಿಡ್ಡಿ ಗ್ರಾಮಕ್ಕೆ ಬಂದು ಹೋಂ ಕ್ವಾರಂಟೈನ್​ಗೆ ಒಳಗಾಗಿದ್ದರು. 2ನೇ ಹಂತದ ಪ್ರಯೋಗಾಲಯ ಪರೀಕ್ಷೆ ವೇಳೆ ಅವರಿಗೆ ಸೋಂಕು ಇರುವುದು ಖಚಿತವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ. ಮಾಹಿತಿ ನೀಡಿದ್ದಾರೆ. ಇವರ ಮಾಹಿತಿ ಇನ್ನೂ ರಾಜ್ಯ ಹೆಲ್ತ್ ಬುಲೆಟಿನ್​ನಲ್ಲಿ ಬರುವುದು ಬಾಕಿ ಇದೆ. ಈ ಪ್ರಕರಣದಿಂದ ಸರ್ಕಾರ ಕ್ವಾರಂಟೈನ್ ಅವಧಿ ಕಡಿಮೆ ಮಾಡಿದ್ದು, ಅಪಾಯಕ್ಕೆ ಎಡೆಮಾಡಿಕೊಟ್ಟಿತೇ ಎಂಬ ಅನುಮಾನ ಮೂಡಲು ಕಾರಣವಾಗಿದೆ. ಮೇ 25ರಂದು ಮಹಾರಾಷ್ಟ್ರದಿಂದ ಮರಳಿ ಕವಂಚೂರು ಹಾಸ್ಟೆಲ್​ನಲ್ಲಿ ಸಾಂಸ್ಥಿಕ ಕ್ವಾರಂಟೈನ್​ಗೆ ಒಳಗಾಗಿದ್ದ 20 ವರ್ಷದ ಯುವಕನಿಗೆ ಕರೊನಾ ಸೋಂಕು ಖಚಿತವಾಗಿದೆ. ಅವರ ಸಂಪರ್ಕಕ್ಕೆ ಬಂದ ಇನ್ನೂ ಮೂವರ ಗಂಟಲ ದ್ರವದ ಮಾದರಿಯ ವರದಿ ಬರುವುದು ಬಾಕಿ ಇದೆ.

    ಕುಮಟಾದ ನಾಲ್ವರು ಕಾರವಾರಕ್ಕೆ: ಕುಮಟಾದ ಮೂವರು ಪುರುಷರು ಹಾಗೂ ಒಬ್ಬ ಮಹಿಳೆಯಲ್ಲಿ ರೋಗ ಇರುವುದು ಶನಿವಾರ ಖಚಿತವಾಗಿತ್ತು. ಭಾನುವಾರ ಹೆಲ್ತ್ ಬುಲೆಟಿನ್​ನಲ್ಲಿ ಅಧಿಕೃತವಾಗಿ ಪ್ರಕಟವಾಗಿದೆ. ಎಲ್ಲರೂ ಒಂದೇ ಕುಟುಂಬದ

    ವರಾಗಿದ್ದು, ಮಹಾರಾಷ್ಟ್ರದಿಂದ ಆಗಮಿಸಿ ಸಾಂಸ್ಥಿಕ ಕ್ವಾರಂಟೈನ್​ನಲ್ಲಿದ್ದರು. ಎಲ್ಲರನ್ನೂ ಕ್ರಿಮ್ಸ್​ಗೆ ಸ್ಥಳಾಂತರಿ ಸಲಾಗಿದೆ. ಜಿಲ್ಲೆಯ ಒಟ್ಟಾರೆ ಕರೊನಾ ಸೋಂಕಿತರ ಸಂಖ್ಯೆ 82 ಕ್ಕೆ ತಲುಪಿದ್ದು, 43 ಜನ ಬಿಡುಗಡೆಯಾಗಿದ್ದಾರೆ. 39 ಸಕ್ರಿಯ ಪ್ರಕರಣಗಳಿವೆ. ಇನ್ನೂ 1300ಕ್ಕೂ ಅಧಿಕ ಶಂಕಿತರ ಪ್ರಯೋಗಾಲಯ ವರದಿ ಬರುವುದು ಬಾಕಿ ಇದೆ. 4100ಕ್ಕೂ ಅಧಿಕ ಜನರು ನಿಗಾದಲ್ಲಿ ಇದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts