More

    ಮಳೆ ನೀರು ಸರಾಗವಾಗಿ ಹರಿಯಲು ಟ್ರಂಚ್ ನಿರ್ಮಾಣ

    ಕುಶಾಲನಗರ: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಂದರನಗರ ಸರ್ಕಲ್ನಲ್ಲಿ ಮಳೆ ನೀರು ಸರಾಗವಾಗಿ ಹರಿಯದೆ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಗ್ರಾಪಂ ವತಿಯಿಂದ ಟ್ರಂಚ್ ನಿರ್ಮಿಸುವ ಮೂಲಕ ತಾತ್ಕಾಲಿಕವಾಗಿ ಸಮಸ್ಯೆಗೆ ಪರಿಹಾರ ಒದಗಿಸಲಾಯಿತು.

    ಕೆಲವು ದಿನಗಳ ಹಿಂದೆ ಬಿದ್ದ ಜೋರು ಮಳೆಯಿಂದ ನೀರು ಸರಾಗವಾಗಿ ಸಾಗದೆ ಸುಂದರನಗರದ ಕಾಫಿ ವರ್ಕ್ಸ್‌ಗೆ ನೀರು ನುಗ್ಗಿ ಅಂದಾಜು 23 ಟನ್ ಕಾಫಿ ಬೀಜ ನಾಶವಾಗಿತ್ತು. ಅಂತೆಯೆ ರಸ್ತೆ ಮೇಲೆ ಮಳೆ ನೀರು ಹರಿದು, ಸಾರ್ವಜನಿಕರಿಗೆ ಸಮಸ್ಯೆ ಎದುರಿಸುವಂತಾಗಿತ್ತು. ಇದನ್ನು ಗಮನಿಸಿದ ಸ್ಥಳೀಯ ಆಡಳಿತ ಸ್ಥಳದಲ್ಲಿ ಟ್ರಂಚ್ ನಿರ್ಮಿಸಿ, ಸಮಸ್ಯೆಗೆ ತಾತ್ಕಾಲಿಕವಾಗಿ ಪರಿಹಾರ ಒದಗಿಸಿದೆ.

    ಕೂಡುಮಂಗಳೂರು ಗ್ರಾಪಂ ಸದಸ್ಯ ಕೆ.ಬಿ.ಶಂಶುದ್ದೀನ್ ಮಾತನಾಡಿ, ಸುಂದರನಗರದಲ್ಲಿ ಮಳೆಗಾಲದಲ್ಲಿ ಇಂತಹ ಸಮಸ್ಯೆಗಳು ಎದುರಾಗುತ್ತಿರುತ್ತವೆ. ಈ ವಿಚಾರವಾಗಿ ಪಂಚಾಯಿತಿ ವತಿಯಿಂದ ಶಾಶ್ವತ ಪರಿಹಾರ ಒದಗಿಸಿಕೊಡುವ ಬಗ್ಗೆ ಚಿಂತಿಸಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts