More

    ಮಳೆ, ಗಾಳಿಗೆ ಬಾಳೆ, ಎಲೆಬಳ್ಳಿ ಹಾನಿ, ಪರಿಶೀಲನೆ

    ಗಜೇಂದ್ರಗಡ: ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಶನಿವಾರ ರಾತ್ರಿ ಬೀಸಿದ ಗಾಳಿ ಹಾಗೂ ಮಳೆಗೆ ಅಪಾರ ಪ್ರಮಾಣದ ತೋಟಗಾರಿಕೆ ಬೆಳೆಗಳು ನೆಲಕಚ್ಚಿ ಹಾನಿಯಾಗಿದ್ದರಿಂದ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸೋಮವಾರ ಸರ್ವೆ ಕಾರ್ಯ ನಡೆಸಿದರು.

    ಕೆಲವು ತಿಂಗಳಲ್ಲಿ ಕೈಗೆ ಬರಬೇಕಿದ್ದ ಬಾಳೆ ಫಸಲು ಗಾಳಿ ಹಾಗೂ ಮಳೆಗೆ ಸಿಲುಕಿ ನಾಶವಾಗಿದೆ ಎಂದು ರೈತ ಸೋಮಪ್ಪ ರಾಠೋಡ ಅಳಲು ತೋಡಿಕೊಂಡರು. ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆಸಿದ್ದ ಎಲೆಬಳ್ಳಿಗಳು ಮಳೆಗೆ ನಾಶವಾಗಿವೆ. ಹೀಗಾಗಿ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಬಸವರಾಜ ಅರಳಿ ಅವರು ತೋಟಗಾರಿಕೆ ಇಲಾಖೆ ಅಧಿಕಾರಿಗೆ ಮನವಿ ಮಾಡಿದರು.

    ಉಣಚಗೇರಿ ಗ್ರಾಮದ ರೈತ ಬಸವರಾಜ ಅರಳಿ ಅವರ ಎಲೆಬಳ್ಳಿ ಜಮೀನು ಹಾಗೂ ಸೋಮಪ್ಪ ರಾಠೋಡ ಅವರ ಜಮೀನುಗಳಿಗೆ ಭೇಟಿ ನೀಡಿದ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಅಂದಾಜು ನಷ್ಟದ ವರದಿಯನ್ನು ಇಲಾಖೆಯ ಮೂಲಕ ಸರ್ಕಾರಕ್ಕೆ ಕಳುಹಿಸಲಾಗುತ್ತದೆ ಎಂದು ತಿಳಿಸಿದರು.

    ತೋಟಗಾರಿಕೆ ಇಲಾಖೆಯ ಎಎಚ್​ಒ ಅನಿಲಕುಮಾರ ರಾಠೋಡ, ಗ್ರಾಮ ಲೆಕ್ಕಾಧಿಕಾರಿ ಶಬ್ಬೀರ ನಿಶಾನದಾರ, ರೈತ ಬಸವರಾಜ ಅರಳಿ, ಇತರರಿದ್ದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts