More

    ಮಳೆ ಆರ್ಭಟಕ್ಕೆ ತತ್ತರಿಸಿದ ಜನತೆ

    ಕಲಘಟಗಿ: ಮಲೆನಾಡಿನ ಸೆರಗಿನಂಚಿನಲ್ಲಿರುವ ಕಲಘಟಗಿ ತಾಲೂಕಿನಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಜನತೆ ತತ್ತರಿಸಿ ಹೋಗಿದ್ದಾರೆ.

    ಮಂಗಳವಾರ ಬೆಳಗ್ಗೆ 8ರಿಂದ ಆರಂಭಗೊಂಡ ಮಳೆ ಬುಧವಾರ ಸಂಜೆವರೆಗೂ ಸತತವಾಗಿ ಸುರಿಯುತ್ತಿರುವುದರಿಂದ ಕಲಘಟಗಿ ಜನತೆ ಮನೆಯಿಂದ ಹೊರಗಡೆ ಬರುತ್ತಿಲ್ಲ. ಇದರಿಂದ ಟಿಎಂಸಿ ರೋಡ್​ನ ಮಾರುಕಟ್ಟೆ, ರಸ್ತೆಗಳು ಬಿಕೋ ಎನ್ನುತ್ತಿದ್ದವು. ವ್ಯಾಪಾರಸ್ಥರು ವಹಿವಾಟಿಲ್ಲದೆ ಭಾರಿ ನಷ್ಟ ಅನುಭವಿಸಿದರು.

    ಮಳೆ ಆರ್ಭಟದಿಂದ ಬೆಳೆದು ನಿಂತಿರುವ ಗೋವಿನ ಜೋಳ, ಸೋಯಾಬೀನ್ ಬೆಳೆಗಳು ನೆಲಕಚ್ಚುವಂತಾಗಿವೆ. ಇದರಿಂದ ರೈತರಲ್ಲಿ ಕಳೆದ ವರ್ಷದ ಅತಿವೃಷ್ಟಿ ಭಯ ಉಂಟಾಗಿದೆ. ಮಳೆ ನಿಂತರೆ ಸಾಕಪ್ಪ ಎಂದು ರೈತರು ವರುಣ ದೇವನಲ್ಲಿ ಬೇಡಿಕೊಳ್ಳುತ್ತಿದ್ದಾರೆ.

    ಮಳೆ ನಿಲ್ಲದಿರುವುದರಿಂದ ಕೂಲಿ ಕೆಲಸವಿಲ್ಲದೆ ಮನೆಯಲ್ಲಿ ಕುಳಿತುಕೊಳ್ಳುವಂತಾಗಿದೆ ಎಂದು ಕೂಲಿ ಕಾರ್ವಿುಕ ನಾಗಪ್ಪ ಬಾರಕೇರ ಅಲವತ್ತುಕೊಂಡರು.

    2 ದಿನದ ಹಿಂದೆ ಸವಣೂರಿನಿಂದ 2000 ಸಾವಿರ ಎಲೆಗಳನ್ನು ತಂದಿದ್ದೆ. ಮಳೆಯಿಂದಾಗಿ ಮಾರುಕಟ್ಟೆಗೆ ರೈತರು, ಕಾರ್ವಿುಕರು, ಗ್ರಾಹಕರು ಬಾರದ ಕಾರಣ ಎಲೆಗಳೆಲ್ಲ ಕೊಳೆಯುವಂತಾಗಿದೆ ಎಂದು ವ್ಯಾಪಾರಿ ನಾಗರಾಜ ಕಟ್ಟಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts