More

    ಮಳೆಯಿದ್ದಾಗ ಕೆಸರು, ಇಲ್ಲದಾಗ ಧೂಳು..!

    ಶಿಗ್ಲಿ: ಗ್ರಾಮದ ಬಹುತೇಕ ಮುಖ್ಯರಸ್ತೆಗಳು ಡಾಂಬರ್ ಕಂಡು ಹಲವಾರು ವರ್ಷಗಳು ಕಳೆದಿದ್ದು ಸಂಪೂರ್ಣ ಹಾಳಾಗಿವೆ. ಮಳೆ ಬಂದಾಗ ಕೆಸರಗುದ್ದೆಯಂತಾದರೆ ಉಳಿದ ಸಂದರ್ಭದಲ್ಲಿ ಧೂಳುಮಯವಾಗಿರುತ್ತದೆ. ಹೀಗಾಗಿ, ಜನ ಹಾಗೂ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ.

    ಗ್ರಾಮದ ಹಳೆಯ ಬಸ್ ನಿಲ್ದಾಣದ ಅರ್ಧ ಆವರಣ, ಹಳೆಯ ಬಸ್ ನಿಲ್ದಾಣದಿಂದ ಹೂವಿನಶಿಗ್ಲಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ, ಗಣೇಶನ ಗುಡಿಯವರೆಗೆ ಹಾಗೂ ಹಳೆಯ ಬಸ್ ನಿಲ್ದಾಣದಿಂದ ದೊಡ್ಡೂರು ಕ್ರಾಸ್​ವರೆಗೆ ಹಾಗೂ ದೊಡ್ಡೂರು ಕ್ರಾಸ್​ನಿಂದ ಲಕ್ಷ್ಮೇಶ್ವರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಶಿರಸಂಗಿ ಲಿಂಗರಾಜರ ಸರ್ಕಲ್​ವರೆಗಿನ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಗ್ರಾಮದಲ್ಲಿ ನೇಕಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು ಕೈಮಗ್ಗ ವ್ಯಾಪಾರಕ್ಕೆ ಖ್ಯಾತಿ ಗಳಿಸಿದೆ. ರಸ್ತೆಗಳು ಉತ್ತಮವಾಗಿದ್ದರೆ ವ್ಯಾಪಾರ ವಹಿವಾಟಿಗೆ ಹೆಚ್ಚು ಅನುಕೂಲವಾಗಲಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೂಡಲೇ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎನ್ನುವುದು ಸ್ಥಳೀಯರ ಒತ್ತಾಯವಾಗಿದೆ.

    ಶಿಗ್ಲಿ ಗ್ರಾಮವು ಗುಡಿ ಕೈಗಾರಿಕೆಯಲ್ಲಿ ಮುಂಚೂಣಿಯಲ್ಲಿದೆ ಹೀಗಾಗಿ, ಗ್ರಾಮದ ಎಲ್ಲ ಮುಖ್ಯ ರಸ್ತೆಗಳ ಡಾಂಬರೀಕರಣ ಮಾಡುವುದು ಅಗತ್ಯವಾಗಿದೆ. ಅಲ್ಲದೆ, ಊರಲ್ಲಿ ಒಂದೇ ಸಾರ್ವಜನಿಕ ಶೌಚಗೃಹವಿದ್ದು ಹೆಚ್ಚಿನ ಶೌಚಗೃಹಗಳ ಅಗತ್ಯವಿದೆ.
    | ಸೋಮಣ್ಣ ಡಾಣಗಲ್ ಶಿಗ್ಲಿ ಗ್ರಾಮಸ್ಥ

    ಶಿಗ್ಲಿ ಗ್ರಾಮದ ಗೋವನಾಳ ಕ್ರಾಸ್​ನಿಂದ ದೊಡ್ಡೂರು ಕ್ರಾಸ್​ವರೆಗೆ ಗ್ರಾಮದ ಹೃದಯಭಾಗದಲ್ಲಿ ಹಾದು ಹೋಗುವ ರಸ್ತೆಯಲ್ಲಿ ವಾಹನಗಳು ಹೆಚ್ಚಾಗಿ ಸಂಚರಿಸುವುದರಿಂದ ರಸ್ತೆಗಳು ಬೇಗನೇ ಹಾಳಾಗುತ್ತದೆ. ಈ ರಸ್ತೆಯನ್ನು ಡಾಂಬರೀಕರಣ ಮಾಡುವ ಬದಲು ಉತ್ತಮ ದರ್ಜೆಯ ಸಿಸಿ ರಸ್ತೆ ನಿರ್ಮಾಣ ಮಾಡಬೇಕು.
    | ಎಸ್.ಪಿ. ಬಳಿಗಾರ ಜಿಲ್ಲಾ ಪಂಚಾಯಿತಿ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts