More

    ಮಳೆಯಿಂದ ಹಿಂದಿನ ಎಲ್ಲ ವರ್ಷಗಳಿಗಿಂತ ಹೆಚ್ಚಿನ ನಷ್ಟ; ಸಾಕಾಗುತ್ತಿಲ್ಲ ಸರ್ಕಾರದ ಸ್ಪಂದನೆ: ಕಾಗೋಡು ತಿಮ್ಮಪ್ಪ ಅಸಮಾಧಾನ

    ಸಾಗರ: ಮಲೆನಾಡು ಭಾಗದಲ್ಲಿ ನಿರೀಕ್ಷೆಗೂ ಮೀರಿ ಸುರಿದ ಮಳೆಯಿಂದ ಅಪಾರ ನಷ್ಟ ಉಂಟಾಗಿದೆ. ಹಿಂದಿನ ಎಲ್ಲ ವರ್ಷಗಳಿಗಿಂತ ಹೆಚ್ಚಿನ ನಷ್ಟ ಸಂಭವಿಸಿದ್ದು ಸರ್ಕಾರದ ಸ್ಪಂದನೆ ಸಾಕಾಗುತ್ತಿಲ್ಲ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅಸಮಾಧಾನ ವ್ಯಕ್ತಪಡಿಸಿದರು.
    ಶನಿವಾರ ತಾಲೂಕಿನ ಆನಂದಪುರ, ಆಚಾಪುರ, ಯಡೇಹಳ್ಳಿ ಭಾಗದಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಆನಂದಪುರನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಳೆದ ಒಂದೂವರೆ ತಿಂಗಳಿನಿಂದ ಮಳೆ ಬಿಟ್ಟೂ ಬಿಡದೆ ಸುರಿದಿದೆ. ವಿಪರೀತ ಮಳೆಯಿಂದ ಮನೆ, ಕೃಷಿ ಜಮೀನು, ಅಡಕೆ ತೋಟ ಸೇರಿದಂತೆ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಆದರೆ ನೊಂದವರ ಕಣ್ಣೀರು ಒರೆಸುವ ಕೆಲಸ ಪರಿಣಾಮಕಾರಿಯಾಗಿ ಆಗಿಲ್ಲ ಎಂದು ದೂರಿದರು.
    ಅನೇಕ ಭಾಗಗಳಲ್ಲಿ ಹಕ್ಕುಪತ್ರ ಇಲ್ಲದ ಮನೆಗಳು ಕುಸಿದು ಬಿದ್ದಿದೆ. ಜಮೀನಿನಲ್ಲಿ ನಾಟಿ ಮಾಡಿದ್ದು ನೀರುಪಾಲಾಗಿದೆ. ಸರ್ಕಾರ ಅಂತಹದ್ದನ್ನು ಪರಿಹಾರಕ್ಕೆ ಪರಿಗಣಿಸಬೇಕು. ನೋಡಲ್ ಅಧಿಕಾರಿಗಳು ನಷ್ಟದ ಅಂದಾಜು ತಯಾರಿಸುವಾಗ ಮಾನವೀಯತೆ ಮರೆಯಬೇಕು. ಪರಿಹಾರ ಕೊಡುವಾಗ ಮೀನಮೇಷ ಎಣಿಸದೆ ವೈಜ್ಞಾನಿಕ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಗಮನಹರಿಸಬೇಕು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts