More

    ಮಳೆಯಾಶ್ರಿತ ಹಣ್ಣು ಬೆಳೆಯಲು ಸಲಹೆ

    ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿನ ಹವಾಗುಣಕ್ಕೆ ಹೊಂದುವಂತಹ ವಿವಿಧ ಹಣ್ಣಿನ ಬೆಳೆಗಳು ನಗರದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಲಭ್ಯವಾಗುವಂತೆ ಮಾಡಲು ಗುಣಮಟ್ಟದ ಕಸಿ ಗಿಡಗಳ ಪ್ರಾತ್ಯಕ್ಷಿಕೆ ಕ್ಷೇತ್ರಕ್ಕೆ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎನ್.ಕಟ್ಟಿಮನಿ ಚಾಲನೆ ನೀಡಿದರು.
    ನಗರದ ಆಳಂದ ರಸ್ತೆಯಲ್ಲಿರುವ ಕೃಷಿ ಕಾಲೇಜಿನ ಆವರಣದಲ್ಲಿ ಬುಧವಾರ ಹಣ್ಣಿನ ಗಿಡ ನೆಡುವ ಮೂಲಕ ಚಾಲನೆ ನೀಡಿ, ರೈತರಿಗೆ ಕೃಷಿ ಹೊಂಡದ ಸುತ್ತ ಹಾಗೂ ಜಮೀನುಗಳಲ್ಲಿ ಆದಾಯ ತರಬಲ್ಲ ಹಾಗೂ ಪೋಷಕಾಂಶವುಳ್ಳ ಹಣ್ಣಿನ ಗಿಡಗಳು ಬೆಳೆಯಲು ಉತ್ತೇಜಿಸಬೇಕು ಎಂದು ಸಲಹೆ ನೀಡಿದರು.
    ಕೃಷಿ ಮತ್ತು ತೋಟಗಾರಿಕೆಗೆ ವಿಪುಲ ಅವಕಾಶಗಳಿದ್ದು ವಿವಿಧ ಮಾದರಿಯ ಹಣ್ಣಿನ ತೋಟವನ್ನು ಕೃಷಿ ವಿಜ್ಞಾನ ಕೇಂದ್ರದ ಕ್ಷೇತ್ರದಲ್ಲಿ ಬೆಳೆಸಲು ಕುಲಪತಿ ಸಲಹೆ ನೀಡಿದರು.
    ವಲಯ ಸಂಶೋಧನ ನಿರ್ದೇಶಕರಾದ ಡೀನ್ ಡಾ.ಜಿ.ಆರ್. ಪಾಟೀಲ್, ಡಾ. ಸುರೇಶ ಪಾಟೀಲ್, ವಿಜ್ಞಾನಿಗಳಾದ ಡಾ. ಆನಂದ ನಾಯಕ್, ಡಾ.ವಾಸುದೇವ ನಾಯ್ಕ್, ಡಾ. ಜಹೀರ್ ಅಹ್ಮದ್, ಡಾ.ಯೂಸೂಫ್​ ಅಲಿ, ಡಾ.ಶ್ರೀನಿವಾಸ ಬಿ.ವಿ, ಡಾ. ರಾಚಪ್ಪ ಹಾವೇರಿ, ಡಾ.ರಾಜು ತೆಗ್ಗಳ್ಳಿ ಸೇರಿ ಕೆವಿಕೆ ವೈಜ್ಞಾನಿಕ ಹಾಗೂ ತಾಂತ್ರಿಕ ಸಿಬ್ಬಂದಿ ಸಸಿ ನಾಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts