More

    ಮಳೆಯಾರ್ಭಟ: ಶಿಕಾರಿಪುರ-ಅಂಬಾರಕೊಪ್ಪ ಸೇತುವೆ ಮುಳುಗಡೆ

    ಶಿಕಾರಿಪುರ: ಒಂದು ವಾರದಿಂದ ಬಿಡುವು ಕೊಟ್ಟಿದ್ದ ಮಳೆರಾಯ ಸೋಮವಾರ ರಾತ್ರಿಯಿಂದ ಮಂಗಳವಾರ ಮುಂಜಾನೆವರೆಗೆ ಆರ್ಭಟಿಸಿದ್ದು ಶಿಕಾರಿಪುರದಿಂದ ಐ.ಬಿ.ರಸ್ತೆಯ ಮೂಲಕ ಅಂಬಾರಗೊಪ್ಪಕ್ಕೆ ಹೋಗುವ ಸಣ್ಣ ಸೇತುವೆ ಮುಳುಗಡೆಯಾಗಿದೆ. ಇದರೊಂದಿಗೆ ಅಂಬಾರಗೊಪ್ಪದಿಂದ ಶಿಕಾರಿಪುರಕ್ಕೆ ಸಂಪರ್ಕ ಕಲ್ಪಿಸುವ ಸಮೀಪದ ದಾರಿ ಮಂಗಳವಾರ ಬಂದ್ ಆಗಿದೆ.
    ಶಿಕಾರಿಪುರ ರೈತರ ಬಹುತೇಕ ಹೊಲಗಳು ಅಂಬಾರಗೊಪ್ಪ ವ್ಯಾಪ್ತಿಯಲ್ಲಿ ಹೊಳೆಯಿಂದ ಆಚೆಗೆ ಬರುತ್ತವೆ. ಪ್ರತಿದಿನ ರೈತರಿಗೆ ಈ ದಾರಿಯ ಅವಶ್ಯಕತೆಯಿದೆ. ಈ ಸಣ್ಣ ಸೇತುವೆ ತುಂಬಿದರೆ ಅಂಬಾರಗೊಪ್ಪಕ್ಕೆ ರಾಜ್ಯ ಹೆದ್ದಾರಿ ಮೂಲಕ ಕುಟ್ರಹಳ್ಳಿ ಹತ್ತಿರ ಬಳಸಿಕೊಂಡು ಹೋಗಬೇಕು. ಇದರಿಂದ 10-15 ಕಿ.ಮೀ. ಬಳಸಿ ಬರಬೇಕಾಗುತ್ತದೆ. ಇದರಿಂದ ನಿತ್ಯ ಓಡಾಡುವ ರೈತರಿಗೆ ತೊಂದರೆ ಉಂಟಾಗಿದೆ.
    ಅಂಬಾರಗೊಪ್ಪದಿಂದ ಪ್ರತಿದಿನ ಹೋಟೆಲ್ಗಳಿಗೆ ಹಾಲು ಕೊಡುವವರು, ತಾಲೂಕು ಕಚೇರಿಗೆ ಬರುವವರು, ದಿನಸಿ ಮತ್ತು ಕೃಷಿ ಸಂಬಂಧಿ ವಸ್ತುಗಳು, ರಸಗೊಬ್ಬರ ಖರೀದಿಗೆ ಸಂತೆ ಮುಂತಾದವುಗಳಿಗೆ ಓಡಾಡಲು ಈ ರಸ್ತೆ ಅತ್ಯಂತ ಅನುಕೂಲವಾಗಿತ್ತು. ಈಗ ಸೇತುವೆ ಮೇಲೆ ನೀರು ಹರಿಯುತ್ತಿರುವುದರಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ.
    ಮಂಗಳವಾರ ಇಡೀ ದಿನ ಮಳೆ ಬಿಡುವು ಕೊಟ್ಟರೆ, ನೀರು ಇಳಿಮುಖವಾಗಲಿದೆ. ಇದರೊಂದಿಗೆ ಸೇತುವೆ ಮೇಲೆ ಸಂಚಾರ ಪುನಾರಂಭಗೊಳ್ಳಲಿದೆ. ಕುಮದ್ವತಿ ಹಿನ್ನೀರಿನಿಂದ ಗೌರಿಹಳ್ಳದಲ್ಲಿಯೂ ನೀರಿನ ಪ್ರಮಾಣ ಜಾಸ್ತಿಯಾಗಿದೆ. ಇದೇ ರೀತಿ ಮಳೆ ಜೋರಾದರೆ ಶಿಕಾರಿಪುರ, ಶಿರಾಳಕೊಪ್ಪ ರಾಜ್ಯ ಹೆದ್ದಾರಿಯಲ್ಲಿರುವ ಗೌರಿಹಳ್ಳಕ್ಕೆ ಕಟ್ಟಲಾದ ಸೇತುವೆ ಕೂಡ ಮುಳುಗುವ ಸಾಧ್ಯತೆಯಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts