More

    ಮಳೆಯಾದರೂ ಏರದ ತುಂಬೆ ಡ್ಯಾಂ

    ಮಂಗಳೂರು: ಗ್ರಾಮೀಣ ಬಾಗದಲ್ಲಿ ಕಳೆದ ಒಂದೆರಡು ದಿನಗಳಿಂದ ಮಳೆಯಾದರೂ ಜಿಲ್ಲೆಯ ಪ್ರಮುಖ ಡ್ಯಾಂಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿಲ್ಲ. ಮಂಗಳೂರು ನಗರಕ್ಕೆ ನೀರು ಪೂರೈಕೆಯಾಗುವ ತುಂಬೆ ಅಣೆಕಟ್ಟಿನ ನೀರಿನ ಮಟ್ಟ ಇನ್ನಷ್ಟು ಇಳಿಕೆಯಾಗಿದ್ದು, ಗುರುವಾರ 0.03ಮೀ ಇಳಿಕೆಯಾಗಿ 3.57ಮೀ.ಗೆ ತಲುಪಿದೆ.

    ತುಂಬೆಯಲ್ಲಿ ನೀರಿನ ಕೊರತೆಯಿದ್ದರೂ ಕುಡಿಯುವ ನೀರಿನ ಪೂರೈಕೆ ಉದ್ದೇಶದಿಂದ ಬುಧವರ ಗರಿಷ್ಠ 140 ಎಂಎಲ್‌ಡಿ ನೀರು ಮೇಲಕ್ಕೆತ್ತಲಾಗಿದೆ. ತುಂಬೆ ಡ್ಯಾಂ ನೀರಿನ ಕುಸಿತವನ್ನು ತಡೆಗಟ್ಟಲು ಹರೇಕಳ ಡ್ಯಾಂನಿಂದ ನೀರು ಪಂಪಿಂಗ್ ಮಾಡುವ ಪ್ರಕ್ರಿಯೆ ನಿರಂತರವಾಗಿ ಮುಂದುವರಿದಿದೆ. ಗ್ರಾಮೀಣ ಬಾಗದಲ್ಲಿ ಮಳೆ, ಬಿಳಿಯೂರು ಡ್ಯಾಂನಿಂದ ನೀರು ಹರಿದ ಪರಿಣಾಮ ಗುರುವಾಋ ಸಾಯಂಕಾಲ ವೇಳೆ ಎಎಂಆರ್ ನೀರಿನ ಮಟ್ಟ 16.18ಮೀ. ವರೆಗೆ ಏರಿಕೆಯಾಗಿದೆ.

    *ರೇಷನಿಂಗ್ ನಿರಂತರ

    ನಗರದಲ್ಲಿ ನೀರಿನ ರೇಷನಿಂಗ್ ಆರಂಭದಿಂದ ಸಮರ್ಪಕವಾಗಿ ಕುಡಿಯುವ ನೀರಿನ ಪೂರೈಕೆ ನಡೆಯುತ್ತಿದೆ. ಗುರುವಾರ ಪಣಂಬೂರು ಸ್ಥಾವರ ವ್ಯಾಪ್ತಿಯ ಸುರತ್ಕಲ್, ಎನ್‌ಐಟಿಕೆ, ಮುಕ್ಕ, ಹೊಸಬೆಟ್ಟು, ಕುಳಾಯಿ, ಜನತಾ ಕಾಲೊನಿ, ಬೈಕಂಪಾಡಿ, ಪಣಂಬೂರು, ಮೀನಕಳಿಯ. ಪಡೀಲ್ ಸ್ಥಾವರ: ಬಜಾಲ್, ಜಲ್ಲಿಗುಡ್ಡೆ, ಮುಗೇರ್, ಎಕ್ಕೂರು, ಸದಾಶಿವನಗರ, ಅಳಪೆ, ಮೇಘನಗರ, ಮಂಜಳಿಕೆ, ಕಂಕನಾಡಿ ರೈಲು ನಿಲ್ದಾಣ ಪ್ರದೇಶ, ಕುಡುಪು, ಪಾಂಡೇಶ್ವರ, ಸ್ಟೇಟ್‌ಬ್ಯಾಂಕ್, ಗೂಡ್‌ಶೆಡ್, ದಕ್ಕೆ, ಕಣ್ಣೂರು, ನಿಡ್ಡೆಲ್, ಶಿವನಗರ, ಕೊಡಕ್ಕಲ್, ನೂಜಿ, ಸರಿಪಳ್ಳ, ಉಲ್ಲಾಸ್ ನಗರ, ವೀರನಗರಕ್ಕೆ ನೀರಿನ ಪೂರೈಕೆಯಾಗಿದೆ. ಶಕ್ತಿನಗರ ವ್ಯಾಪ್ತಿಯ ಕೆಲವು ಪ್ರದೇಶದ ಕಂಡೆಟ್ಟು, ಕುಲಶೇಖರ, ಮರೋಳಿ, ಕಕ್ಕೆಬೆಟ್ಟು, ಸಿಲ್ವರ್ ಗೇಟ್, ಕೊಂಗೂರುಮಠ, ಪ್ರಶಾಂತ್ ನಗರ, ತುಂಬೆ ಪಣಂಬೂರು ನೇರ ಮಾರ್ಗ ವ್ಯಾಪ್ತಿಯ ಮೂಡ ಪಂಪ್‌ಹೌಸ್, ಕೊಟ್ಟಾರ ಚೌಕಿ ಪಂಪ್‌ಹೌಸ್, ಕೂಳೂರು ಪಂಪ್‌ಹೌಸ್, ಕಾಪಿಕಾಡ್, ದಡ್ಡಲಕಾಡ್, ಬಂಗ್ರಕೂಳೂರುವ್ಯಾಪ್ತಿಗೆ ನೀರು ಪೂರೈಕೆಯಾಗಿದೆ.

    ——————–

    ಸಧ್ಯಕ್ಕೆ ಎಎಂಆರ್ ಡ್ಯಾಂನಲ್ಲಿ ನೀರು 16.18ಮೀ. ವರೆಗೆ ಏರಿಕೆಯಾಗಿದೆ. ಆದರೆ ತುಂಬೆಯಲ್ಲಿ ನೀರಿನ ಮಟ್ಟ ಕುಸಿತವಾಗಿದೆ. ಜಿಲ್ಲೆಯ ಹಲವಡೆ ಮಳೆಯಾಗಿದ್ದರಿಂದ ಮುಂದಿನ ದಿನ ನೀರಿನ ಕೊರತೆ ಕಡಿಮೆಯಾಗುವ ಸಾಧ್ಯತೆ ಇದೆ. ತುಂಬೆ ನೀರಿನ ಮಟ್ಟ ಕುಸಿತವಾಗುವುದನ್ನು ನಿಯಂತ್ರಿಸಲು ಹರೆಕಳದಿಂದ ತುಂಬೆಗೆ ನಿರಂತರ ನೀರು ಪಂಪಿಂಗ್ ಮಾಡಲಾಗಿತ್ತಿದೆ. ನೀರಿನ ಕುಸಿತದ ನಡುವೆಯೂ ಪ್ರತೀ ದಿನ ತುಂಬೆ ಡ್ಯಾಂನಿಂದ 155 ಎಂಎಲ್‌ಡಿ ನೀರು ಲಿಫ್ಟ್ ಮಾಡಿಪೂರೈಕೆಯಾಗುತ್ತಿದೆ.

    ಸುಧೀರ್ ಶೆಟ್ಟಿ ಕಣ್ಣೂರು, ಮಂಗಳೂರು ಮೇಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts