More

    ಮಳೆಗೆ ಮಹದೇಶ್ವರರ ಪ್ರತಿಮೆ ಬಳಿಯ ತಡೆಗೋಡೆ ಕುಸಿತ


    ಚಾಮರಾಜನಗರ : ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ದೀಪದಗಿರಿ ಒಡ್ಡುವಿನಲ್ಲಿ ನಿರ್ಮಿಸಿರುವ 108 ಅಡಿ ಎತ್ತರದ ಶ್ರೀ ಮಹದೇಶ್ವರರ ಪ್ರತಿಮೆ ಬಳಿಯ ತಡೆಗೋಡೆ ಮಳೆಗೆ ಕುಸಿದಿದೆ.


    ಮ.ಬೆಟ್ಟವನ್ನು ಅಭಿವೃದ್ಧಿಪಡಿಸುವ ಸಲುವಾಗಿ ಹಾಗೂ ಆಗಮಿಸುವ ಭಕ್ತರಿಗೆ ಶ್ರೀ ಮಹದೇಶ್ವರರ ಸಂಪೂರ್ಣ ಚಾರಿತ್ರ್ಯವನ್ನು ತಿಳಿಸುವ ಉದ್ದೇಶದಿಂದ 20 ಕೋಟಿ ರೂ. ವೆಚ್ಚದಲ್ಲಿ ದೀಪದಗಿರಿ ಒಡ್ಡುವಿನಲ್ಲಿ ಶ್ರೀ ಮಹದೇಶ್ವರರ ಪ್ರತಿಮೆಯನ್ನು ನಿರ್ಮಿಸಲಾಗಿದೆ.

    ಗುಹೆಯಲ್ಲಿನ ಮೂರ್ತಿಗಳು, ಉದ್ಯಾನವನ, ರಸ್ತೆ, ವಿದ್ಯುತ್ ಸೇರಿದಂತೆ ಇನ್ನು ಅನೇಕ ಕಾಮಗಾರಿಗಳು ಬಾಕಿಯಿದ್ದರೂ ಮಾ.18 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆಗೊಳಿಸಿ ಭಕ್ತರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಈ ಮಾರ್ಗದ ರಸ್ತೆ ಕಾಮಗಾರಿಯನ್ನು ಆರಂಭಿಸುವ ಹಿನ್ನೆಲೆಯಲ್ಲಿ ಪ್ರಾಕಾರದ ಆಡಳಿತ ಭಕ್ತರಿಗೆ ಪ್ರವೇಶವನ್ನು ನಿರ್ಬಂಸಲಾಗಿತ್ತು. ಈ ಬಗ್ಗೆ ಭಕ್ತರು ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.


    ಇದೀಗ ಆಗಾಗ್ಗೆ ಸುರಿಯುತ್ತಿರುವ ಮಳೆಯಿಂದಾಗಿ ಪ್ರತಿಮೆಯ ಸಮೀಪದಲ್ಲಿನ ತಡೆಗೋಡೆ ಕುಸಿದಿದ್ದು, ಕಲ್ಲುಗಳು ಕಿತ್ತು ಬಂದಿವೆ. ಸತತ ಮಳೆಯಾದರೆ ತಡೆಗೋಡೆ ಸಂಪೂರ್ಣ ಕುಸಿಯುವ ಸಾಧ್ಯತೆ ಹೆಚ್ಚಾಗಿದೆ. ಈ ಬಗ್ಗೆ ಭಕ್ತರು ತೀವ್ರ ಆಕ್ಷೇಪವ್ಯಕ್ತಪಡಿಸಿದ್ದು, ಪ್ರಾಕಾರದ ಆಡಳಿತ ಇತ್ತ ಗಮನಹರಿಸಿ ತಡೆಗೋಡೆಯನ್ನು ರಿಪೇರಿ ಮಾಡಿಸುವುದರ ಜತೆಗೆ ಬಾಕಿಯಿರುವ ಕಾಮಗಾರಿಯನ್ನು ಪೂರ್ಣಗೊಳಿಸಿ ಭಕ್ತರ ವೀಕ್ಷಣೆಗೆ ಅವಕಾಶ ಕಲ್ಪಿಸುವಂತೆ ಒತ್ತಾಯಿಸಿದ್ದಾರೆ.
    ೆಟೋ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts