More

    ಮಳೆಕೊಯ್ಲು ಅನುಷ್ಠಾನದಲ್ಲಿ ಅಕ್ರಮ

    ಕೋಲಾರ: ಜಿಲ್ಲೆಯಲ್ಲಿನ ಸವಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಹಾಸ್ಟೆಲ್‌ಗಳಲ್ಲಿ ಮಳೆ ಕೊಯ್ಲು ಹಾಗೂ ಆರ್‌ಒ ಟಕಗಳ ಅಳವಡಿಕೆಗೆ ಗುತ್ತಿಗೆ ಪಡೆದಿದ್ದ ಬೆಂಗಳೂರು ಗ್ರಾವಾಂತರ ಜಿಲ್ಲೆಯ ಭೂ ಸೇನಾ ನಿಗಮ ಕ್ರಿಯಾ ಯೋಜನೆಯ ಪ್ರಕಾರ ಕಾಮಗಾರಿ ನಡೆಸದೆ ಭ್ರಷ್ಟಾಚಾರ ಎಸಗಿರುವುದು ಜಿಪಂ ಸದಸ್ಯರನ್ನು ಒಳಗೊಂಡ ತನಿಖಾ ಸಮಿತಿಯ ವರದಿಯಲ್ಲಿ ಸಾಬೀತಾಗಿರುವುದರಿಂದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ಕ್ರಿಮಿನಲ್ ಕೇಸ್ ದಾಖಲಿಸಲು ಜಿಪಂ ಸಾವಾನ್ಯ ಸಭೆಯಲ್ಲಿ ತೀರ್ವಾನಿಸಲಾಯಿತು.

    ಜಿಪಂ ಸಭಾಂಗಣದಲ್ಲಿ ಗುರುವಾರ ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯ ಬಿ.ವಿ.ಮಹೇಶ್ ಸೇರಿ ಕೆಲ ಸದಸ್ಯರು ಹಾಸ್ಟೆಲ್‌ಗಳಲ್ಲಿ ಮಳೆಕೊಯ್ಲು ಮತ್ತು ಆರ್‌ಒ ಟಕ ನಿರ್ವಾಣದ ಗುತ್ತಿಗೆಯನ್ನು ಬೆಂಗಳೂರು ಗ್ರಾವಾಂತರ ಜಿಲ್ಲೆಗೆ ಸೇರಿದ ಭೂ ಸೇವಾ ನಿಗಮಕ್ಕೆ ವಹಿಸಲಾಗಿತ್ತು, ಯೋಜನಾ ವೆಚ್ಚ ಮತ್ತು ಕಾಮಗಾರಿ ಪ್ರಮಾಣ ಗಮನಿಸಿದಲ್ಲಿ ಭಾರಿ ವ್ಯತ್ಯಾಸದ ಜತೆಗೆ ಕಳಪೆ ಕಾಮಗಾರಿ ನಡೆದಿದೆ ಎಂದು ಆರೋಪಿಸಿದರು.

    ಕಳೆದ ಸಭೆಯಲ್ಲೇ ಈ ವಿಚಾರ ಪ್ರಸ್ತಾಪಿಸಿದಾಗ ಆಯಾ ತಾಲೂಕಿನ ಜಿಪಂ ಸದಸ್ಯರನ್ನೊಳಗೊಂಡ ತನಿಖಾ ಸಮಿತಿ ರಚಿಸಲಾಗಿತ್ತು, ಬಂಗಾರಪೇಟೆ ತಾಲೂಕಿನಲ್ಲಿ ಪರಿಶೀಲನೆ ನಡೆಸಿದಾಗ ಕಾಮಗಾರಿ ಪೂರ್ಣಗೊಳಿಸದೆ ಮುಂಗಡ ಹಣ ಪಡೆದಿರುವುದು ಬಯಲಾಗಿರುವುದರಿಂದ ತಪ್ಪಿತಸ್ಥರ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಮಹೇಶ್ ಪ್ರಶ್ನಿಸಿದರು.

    ನಮ್ಮ ತಾಲೂಕಿನಲ್ಲಿ 9 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಕೇವಲ 1.25 ಲಕ್ಷ, 5 ಲಕ್ಷ ರೂ. ಕಾಮಗಾರಿಗೆ 75 ಸಾವಿರ, 4 ಲಕ್ಷ ರೂ. ಕಾಮಗಾರಿಗೆ 89 ಲಕ್ಷ ರೂ. ಖರ್ಚು ವಾಡಿ ಉಳಿದ ಹಣಕ್ಕೆ ಲೆಕ್ಕ ಕೊಟ್ಟಿಲ್ಲ, ಯೋಜನೆ ಅನುಷ್ಠಾನದಲ್ಲಿ ಅಕ್ರಮ ನಡೆದಿರುವುದು ವರದಿಯಲ್ಲಿ ಉಲ್ಲೇಖವಾಗಿದ್ದರೂ ಸದಸ್ಯರ ಗಮನಕ್ಕೆ ಏಕೆ ತಂದಿಲ್ಲ ಎಂದು ಸವಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಾಲಾಜಿ ಅವರನ್ನು ತರಾಟೆಗೆ ತೆಗೆದುಕೊಂಡರು.

    ಇದೇ ವಿಚಾರವಾಗಿ ಶ್ರೀನಿವಾಸಪುರ ತಾಲೂಕಿನ ಗೋವಿಂದಸ್ವಾಮಿ, ವಾಲೂರಿನ ವಾಸ್ತಿಯ ಎಚ್.ವಿ.ಶ್ರೀನಿವಾಸ್, ಮುಳಬಾಗಿಲಿನ ವಿ.ಎಸ್.ಅರವಿಂದ ಕುವಾರ್ ಧ್ವನಿಗೂಡಿಸಿ, ನಮ್ಮಲ್ಲೂ ಅಕ್ರಮ ನಡೆದಿದೆ, ಎರಡು ತಿಂಗಳಾದರೂ ತನಿಖಾ ವರದಿ ನೀಡಿಲ್ಲ ಎಂದು ಅಸವಾಧಾನ ವ್ಯಕ್ತಪಡಿಸಿದರು.

    ಗುತ್ತಿಗೆದಾರ ಅಂದಾಜು ಪಟ್ಟಿ ನೀಡದಿರುವುದರಿಂದ ವರದಿ ನೀಡಲು ವಿಳಂಬವಾಗಿದೆ, ಬಂಗಾರಪೇಟೆ ತಾಲೂಕಿನ ವಾಹಿತಿ ವಾತ್ರ ಲಭ್ಯವಾಗಿದ್ದರಿಂದ ಅದನ್ನು ಸದಸ್ಯ ಮಹೇಶ್‌ಗೆ ನೀಡಲಾಗಿದೆ, ಕಾಮಗಾರಿಯಲ್ಲಿ ಲೋಪವಾಗಿರುವುದು ಗಮನಕ್ಕೆ ಬಂದಿದೆ ಎಂದು ಸಮಾಜಕಲ್ಯಾಧಿಕಾರಿ ಬಾಲಾಜಿ ಉತ್ತರಿಸಿದಾಗ, ಸದಸ್ಯ ಗೋವಿಂದಸ್ವಾಮಿ ಅಕ್ಷೇಪ ವ್ಯಕ್ತಪಡಿಸಿ ಅಂದಾಜು ಪಟ್ಟಿ ನೀಡಿಲ್ಲ ಎಂಬುದು ಪೂರ್ವಯೋಜಿತ ಉತ್ತರವಾಗಿದೆ ಎಂದು ಸಿಡಿಮಿಡಿಗೊಂಡರು.

    ಸದಸ್ಯರ ಆರೋಪ ಅಲಿಸಿದ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಬಂಗಾರಪೇಟೆ ತಾಲೂಕಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಿ, ಉಳಿದ ತಾಲೂಕುಗಳಿಂದ ಒಂದು ವಾರದಲ್ಲಿ ವರದಿ ತರಿಸಿಕೊಂಡು ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ಕ್ರಿಮಿನಲ್ ಕೇಸ್ ದಾಖಲಿಸದಿದ್ದರೆ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳುವೆ ಎಂದು ಬಾಲಾಜಿಗೆ ಎಚ್ಚರಿಕೆ ನೀಡಿದರು.

    ಸಭೆ ತಡವಾಗಿ ಆರಂಭ: ಸಭೆ ಬೆಳಗ್ಗೆ 11ಕ್ಕೆ ನಿಗದಿಯಾಗಿತ್ತು. ಕೋರಂ ಕೊರತೆಯಿಂದ ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಸದಸ್ಯರಿಗಾಗಿ ಕಾದು ಕುಳಿತು 12.32ಕ್ಕೆ ಕೋರಂ ಸಿಕ್ಕ ನಂತರ ಸಭೆ ಆರಂಭಿಸಿದರು. ವಾಜಿ ಶಾಸಕ ವರ್ತೂರು ಪ್ರಕಾಶ್ ಬಣದಲ್ಲಿ ಗುರುತಿಸಿಕೊಂಡಿರುವ ಅರುಣ್ ಪ್ರಸಾದ್ ಗೈರು ಹಾಗೂ ಸಭೆಯಿಂದ ತಾಪಂ ಅಧ್ಯಕ್ಷ ಆಂಜಿನಪ್ಪ ಸಭಾತ್ಯಾಗ ಚರ್ಚೆಗೆ ಗ್ರಾಸವಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts