More

    ಮಳವಳ್ಳಿ ತಾಲೂಕಿನ ವಿವಿಧೆಡೆ ಮಳೆಗೆ ಅಪಾರ ಹಾನಿ

    ಮಳವಳ್ಳಿ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಗುರುವಾರ ಸಂಜೆ ಸುರಿದ ಬಿರುಗಾಳಿ ಸಹಿತ ಮಳೆಗೆ ಮನೆಗಳ ಛಾವಣಿಗಳು ಹಾರಿ ಹೋಗಿದ್ದು ವಿದ್ಯುತ್ ಕಂಬಗಳು ಮತ್ತು ಹಲವು ಮರಗಳು ಧರೆಗುರುಳಿವೆ.
    ತಾಲೂಕಿನ ರಾಗಿಬೊಮ್ಮನಹಳ್ಳಿ ಗ್ರಾಮವೊಂದರಲ್ಲೇ ಐದು ಮನೆಗಳ ಛಾವಣಿ ಬಿರುಗಾಳಿಯ ರಭಸಕ್ಕೆ ಸಿಲುಕಿ ನಾಶವಾಗಿವೆ. ಮಧು ಎಂಬುವರ ಮನೆಯ ಮೇಲೆ ಹಾಕಲಾಗಿದ್ದ ಉದ್ದನೆಯ ಶೀಟ್‌ಗಳಿದ್ದ ಛಾವಣಿ ಪೂರ್ಣ ಬಿರುಗಾಳಿಗೆ ಸಿಲುಕಿ 100 ಅಡಿ ದೂರದಲ್ಲಿದ್ದ ಶಿವಸ್ವಾಮಿ ಎಂಬುವರ ಮನೆಯ ಮೇಲೆ ಅಪ್ಪಳಿಸಿದ ಪರಿಣಾಮ ಛಾವಣಿ ಸಂಪೂರ್ಣ ಧ್ವಂಸವಾಗಿದೆ. ಅದೃಷ್ಟವಶಾತ್ ಮನೆಯೊಳಗಿದ್ದವರಿಗೆ ಯಾವುದೇ ಪ್ರಾಣ ಹಾನಿಯಾಗಿಲ್ಲ. ಕೆಲ ದಿನಗಳ ಹಿಂದಷ್ಟೇ ಗೃಹಪ್ರವೇಶ ಮಾಡಿ ವಾಸವಿದ್ದ ಮನೆ ಹಾಗೂ ಸುಂದ್ರಮ್ಮ ಎಂಬುವರ ಮನೆ ಶೀಟ್‌ಗಳು ಹಾರಿಹೋಗಿವೆ. ಕೆಂಪಣ್ಣ ಎಂಬುವರಿಗೆ ಸೇರಿದ ಮನೆಯ ಮೇಲೆ ಮರವೊಂದು ಮುರಿದು ಹಾನಿಯಾಗಿದೆ.
    ದೊಡ್ಡಬೂಹಳ್ಳಿ ಗ್ರಾಮದಲ್ಲಿ ಬೈಕ್‌ನಲ್ಲಿ ದಂಪತಿ ತೆರಳುತ್ತಿದ್ದಾಗ ವಿದ್ಯುತ್ ಕಂಬಗಳು ರಸ್ತೆಗೆ ಬಿದ್ದಾಗ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಅಣಕೋಳ, ಸುಜ್ಜಲೂರು, ನಂಜೇಗೌಡನದೊಡ್ಡಿ ಗ್ರಾಮಗಳಲ್ಲಿ ಸುಮಾರು ಸುಮಾರು 10 ಎಕರೆಗೂ ಹೆಚ್ಚು ಕಟಾವಿಗೆ ಬಂದಿದ್ದ ಬಾಳೆ ಬೆಳೆ ನೆಲಕಚ್ಚಿದೆ.
    ಎಲ್ಲ ಗ್ರಾಮಗಳಿಗೂ ಈ ವ್ಯಾಪ್ತಿಯ ರಾಜಸ್ವ ನಿರೀಕ್ಷ ಲಿಂಗಸ್ವಾಮಿ ಹಾಗೂ ಗ್ರಾಮ ಲೆಕ್ಕಾಧಿಕಾರಿ ಪುನೀತ್ ಭೇಟಿ ನೀಡಿ ಪರಿಶೀಲಿಸಿದ್ದು, ಜಿಲ್ಲಾಡಳಿತಕ್ಕೆ ವರದಿ ಕಳುಹಿಸಿ ಸೂಕ್ತಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ. ಶೆಟ್ಟಹಳ್ಳಿ ಗ್ರಾಮದಲ್ಲೂ ಆರ್. ಶಿವಕುಮಾರ್ ಮಾಲೀಕತ್ವದ ರೇಷ್ಮೆ ಉಳು ಸಾಕಾಣಿಕೆಗೆ ನಿರ್ಮಿಸಿದ್ದ ಮನೆಯೂ ಮಳೆಗಾಳಿಗೆ ಹಾನಿಯಾಗಿ ಒಂದು ಲಕ್ಷಕ್ಕೂ ಅಧಿಕ ರೂ. ಮೌಲ್ಯದ ವಸ್ತುಗಳು ಹಾನಿಯಾಗಿದೆ ಎನ್ನಲ್ಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts