More

    ಮಲೆನಾಡಿನಲ್ಲಿ ಕುಟುಂಬದೊಂದಿಗೆ ಯೋಗ

    ಶಿವಮೊಗ್ಗ: ವಿಶ್ವ ಯೋಗ ದಿನವನ್ನು ಇದೇ ಮೊದಲ ಬಾರಿಗೆ ಭಾನುವಾರ ನಗರದಲ್ಲಿ ಸಾರ್ವಜನಿಕರು ತಮ್ಮ ಮನೆಗಳಲ್ಲಿ ಕುಟುಂಬ ಸದಸ್ಯರೊಂದಿಗೆ ಆಚರಿಸಿದರು.

    ಸಾಮೂಹಿಕವಾಗಿ ಆಚರಣೆ ಮಾಡುತ್ತಿದ್ದ ಯೋಗವನ್ನು ಕರೊನಾ ವೈರಸ್ ಆತಂಕದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ಸಾರ್ವಜನಿಕರು ಕುಟುಂಬ ಸದಸ್ಯರೊಂದಿಗೆ ಮನೆಗಳಲ್ಲಿ ಆಚರಿಸಿ ಸಂಭ್ರಮಿಸಿದರು.

    ಯೋಗ ಶಿಕ್ಷಣ ಸಮಿತಿಯಿಂದ 5ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಸರಳವಾಗಿ ಆಚರಿಸಲಾಯಿತು. ಕೇಂದ್ರದ ಸರ್ಕಾರದ ಆಯುಷ್ ಇಲಾಖೆ ನೀಡಿರುವ ಆಸನ ಕೇಬಲ್​ಗಳಲ್ಲಿ ಪ್ರಸಾರ ಮಾಡಲಾಯಿತು. ಫೇಸ್​ಬುಕ್, ಯ್ಯೂಟೂಬ್​ನಲ್ಲೂ ಯೋಗ ಪ್ರಸಾರಗೊಂಡಿದ್ದು ಈ ಬಾರಿಯ ವಿಶೇಷತೆಯಾಗಿತ್ತು.

    ‘ಮನೆಯಲ್ಲೇ ಯೋಗ-ಕುಟುಂಬದೊಂದಿಗೆ ಯೋಗ’ವನ್ನು ದೂರದರ್ಶನ ವಾಹಿನಿಯ ಎಲ್ಲ ಚಾನಲ್​ಗಳಲ್ಲಿ ನೇರ ಪ್ರಸಾರ ಮಾಡಲಾಯಿತು. ಯೋಗಪಟುಗಳು ಹಾಗೂ ಯೋಗತಜ್ಞರಿಂದ ಸಂವಾದ ನಡೆದವು.

    ಆನ್​ಲೈನ್​ನಲ್ಲಿ ಸಹಜ ಯೋಗ ಧ್ಯಾನ: ಎಚ್.ಎಚ್.ಮಾತಾಜಿ ನಿರ್ಮಲಾದೇವಿ ಅವರ ಸಹಜಯೋಗ ಟ್ರಸ್ಟ್​ನಿಂದ ಆನ್​ಲೈನ್​ನಲ್ಲಿ ಉಚಿತ ಸಹಜ ಯೋಗ ಧ್ಯಾನ ಆಯೋಜಿಸಲಾಗಿತ್ತು. 20 ವಿಶ್ವ ಭಾಷಿಕರೊಂದಿಗೆ 30 ಅಧಿವೇಶನಗಳನ್ನು 15 ಜಾಗತಿಕ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಸೂರ್ಯೋದಯದಿಂದ ಸೂರ್ಯೋದಯಕ್ಕೆ ಜಪಾನ್​ನಿಂದ ಬ್ರೆಜಿಲ್​ವರೆಗೂ ಕುಂಡಲಿನಿಯ ಜಾಗೃತಿ, ಆತ್ಮ ಸಾಕ್ಷಾತ್ಕಾರದ ಅನುಭವವನ್ನು ಒದಗಿಸಿದರು.

    ಡಿಸಿ ಕೆ.ಬಿ.ಶಿವಕುಮಾರ್ ಪುತ್ರಿ ಹಸ್ಮಿತಾ ಜತೆ, ಜಿಪಂ ಸಿಇಒ ಎಂ.ಎಲ್.ವೈಶಾಲಿ, ಎಸ್ಪಿ ಕೆ.ಎಂ.ಶಾಂತರಾಜು ಸೇರಿ ಹಲವು ಹಿರಿಯ ಅಧಿಕಾರಿಗಳು ತಮ್ಮ ನಿವಾಸಗಳಲ್ಲೇ ಯೋಗಾಭ್ಯಾಸ ಮಾಡಿದರು. ಅವರಿಗೆ ಕುಟುಂಬ ಸದಸ್ಯರು ಸಾಥ್ ನೀಡಿದರು.

    ಸಚಿವರಿಂದ ಕುಟಂಬದಲ್ಲಿ ಯೋಗ : ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಮಲ್ಲೇಶ್ವರನಗರದ ಮನೆಯಲ್ಲಿ ಯೋಗ ಮಾಡಿದರು. ಅವರಿಗೆ ಪತ್ನಿ ಜಯಲಕ್ಷ್ಮಿ, ಪುತ್ರ, ಜಿಪಂ ಸದಸ್ಯ ಕೆ.ಇ.ಕಾಂತೇಶ್, ಸೊಸೆ ಶಾಲಿನಿ, ಪುತ್ರಿಯರು, ಬಂಧುಗಳು ಹಾಗೂ ಸ್ನೇಹಿತರು ಸಾಥ್ ನೀಡಿದರು. ಅರ್ಧ ಗಂಟೆಗೂ ಅಧಿಕ ವಿವಿಧ ಆಸನ ಪ್ರದರ್ಶಿಸಿದರು. ಬಳಿಕ ಮಾತನಾಡಿದ ಈಶ್ವರಪ್ಪ, ಯೋಗ ಭಾರತೀಯ ಸಂಸ್ಕೃತಿಯಾಗಿದೆ. ಇದನ್ನು ವಿಶ್ವದಾದ್ಯಂತ ಪರಿಚಯಿಸಿ ಅದಕ್ಕೊಂದು ದಿನಾಚರಣೆಯನ್ನಾಗಿಸಿರುವ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಬೇಕು. ಯೋಗದಿಂದ ಆರೋಗ್ಯಕ್ಕೂ ಕ್ಷೇಮ, ಜ್ಞಾನ ವೃದ್ಧಿಯೂ ಆಗುತ್ತದೆ. ಯೋಗವನ್ನು ದಿನಾ ಅಭ್ಯಾಸ ಮಾಡುವ ಮೂಲಕ ಆರೋಗ್ಯವಾಗಿರೋಣವೆಂದು ಆಶಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts