More

    ಮಲೆನಾಡಿಗರ ಹಕ್ಕೊತ್ತಾಯ ಮಂಡಿಸಲು ಜನ-ದನಿ ಸಮಾವೇಶ

    ಬಾಳೆಹೊನ್ನೂರು: ಎದ್ದೇಳು ಕರ್ನಾಟಕ ಸಂಘಟನೆಯಿಂದ ಮಲೆನಾಡಿನ ಜನರ ಹಕ್ಕೊತ್ತಾಯ ಮಂಡಿಸುವ ಜನ-ದನಿ ಸಮಾವೇಶವನ್ನು ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ 30ರ ಮಧ್ಯಾಹ್ನ 12 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಜನಶಕ್ತಿ ಸಂಘಟನೆ ರಾಜ್ಯ ಕಾರ್ಯದರ್ಶಿ ಕೆ.ಎಲ್.ಅಶೋಕ್ ಹೇಳಿದರು.

    ಮಲೆನಾಡಿನ ಜ್ವಲಂತ ಸಮಸ್ಯೆಗಳಾದ ಾರ್ಮ್ 50, 53, 57, ನಿವೇಶನ, ಕಸ್ತೂರಿ ರಂಗನ್ ವರದಿಗಳು ಜನಸಾಮಾನ್ಯರಲ್ಲಿ ಅಭದ್ರತೆ ಮೂಡಿಸಿವೆ. ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಅವರಿಂದ ಖಚಿತ ಉತ್ತರ ಪಡೆಯುವ ಉದ್ದೇಶದಿಂದ ಸಮಾವೇಶ ನಡೆಸಲಾಗುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಬಡವರಿಗೆ ನಿವೇಶನ, ಹಕ್ಕುಪತ್ರ ನೀಡುತ್ತಿಲ್ಲ. ಒತ್ತುವರಿಯನ್ನು ಲೀಸ್ ಆಧಾರದ ಮೇಲೆ ನೀಡುವುದನ್ನು ಸಂಘಟನೆ ವಿರೋಧಿಸುತ್ತಿದೆ. ಇದು ಕಾರ್ಪೋರೇಟ್ ಕಂಪನಿಗಳಿಗೆ ರತ್ನಗಂಬಳಿ ಹಾಸಿದಂತೆ. ಬಡವರಿಗೆ ನಿವೇಶನ ನೀಡಲು ಸರ್ಕಾರದ ಬಳಿ ಜಾಗವಿಲ್ಲ. ಆದರೆ ಶ್ರೀಮಂತರು ಮಾಡಿದ ಒತ್ತುವರಿಯನ್ನು ಲೀಸ್ ಮೂಲಕ ನೀಡಲು ಅವಕಾಶ ಕಲ್ಪಿಸಿರುವುದು ಖಂಡನೀಯ ಎಂದರು.
    ಸಮಾವೇಶಕ್ಕೆ ಶೃಂಗೇರಿ, ಮೂಡಿಗೆರೆ ಹಾಗೂ ಚಿಕ್ಕಮಗಳೂರಿನ ಶಾಸಕರು, ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಜನಶಕ್ತಿ ಸಂಘಟನೆ ರಾಜ್ಯಾಧ್ಯಕ್ಷ ನೂರ್ ಶ್ರೀಧರ್, ರಾಜ್ಯ ದಲಿತ ಸಂಘರ್ಷ ಸಮಿತಿ ಸಂಚಾಲಕ ಗುರುಪ್ರಸಾದ್ ಕೆರೆಗೋಡು, ಎದ್ದೇಳಿ ಕರ್ನಾಟಕದ ರಾಜ್ಯ ಮುಖಂಡ ತಾರಾ ರಾವ್, ಗೌಸ್ ಮೊಯಿದ್ದೀನ್, ಕಲ್ಕುಳಿ ವಿಠಲ್ ಹೆಗ್ಡೆ ಸೇರಿದಂತೆ ಹಲಲವರು ಭಾಗವಹಿಸಲಿದ್ದಾರೆ ಎಂದರು.
    ಜನಶಕ್ತಿ ಸಂಘಟನೆ ರಾಜ್ಯ ಸಮಿತಿ ಸದಸ್ಯ ಕೌಳಿ ರಾಮು ಮಾತನಾಡಿ, ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ವರ್ಷದಿಂದ ವರ್ಷಕ್ಕೆ ನಿವೇಶನರಹಿತರ ಪಟ್ಟಿ ಬೆಳೆಯುತ್ತಿದೆಯೇ ಹೊರತು ಭೂಮಿ ಹೆಚ್ಚಳವಾಗುತ್ತಿಲ್ಲ. ಕಂದಾಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವುದರಿಂದ ಸ್ಮಶಾನಕ್ಕೂ ಜಾಗವಿಲ್ಲದಂತಾಗಿದೆ. ಬಡವರು ಕೃಷಿ ಮಾಡಿದ ಭೂಮಿಯನ್ನು ಸೆಕ್ಷನ್ 4 ವ್ಯಾಪ್ತಿಗೆ ತಂದು ಶ್ರೀಮಂತರ ಒತ್ತುವರಿಯನ್ನು ಕೈಬಿಡಲಾಗಿದೆ ಎಂದು ಆರೋಪಿಸಿದರು.
    ಸಂಘಟನೆ ಪ್ರಮುಖರಾದ ಗಡಿಕಲ್ ಸರೋಜಾ, ಕರ್ನಾಟಕ ಜನಶಕ್ತಿ ಸಂಘಟನೆ ಜಿಲ್ಲಾ ಕಾರ್ಯದರ್ಶಿ ರಾಧಾ ಹಾಗಲಗಂಚಿ, ಗಡಿಕಲ್ ಸುರೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts