More

    ಮಲವಳ್ಳಿಯಲ್ಲಿ ಚಿಕೂನ್ ಗುನ್ಯಾ ಭೀತಿ

    ಮುಂಡಗೋಡ: ತಾಲೂಕಿನ ಮಲವಳ್ಳಿ ಗ್ರಾಮದಲ್ಲಿ ಚಿಕೂನ್ ಗುನ್ಯಾ ಕಾಯಿಲೆ ಪತ್ತೆಯಾದ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಆತಂಕದ ಛಾಯೆ ಆವರಿಸಿದ್ದು, ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಗುರುವಾರ ಜಾಗೃತಿ ಮೂಡಿಸಿದರು.

    ಮಲವಳ್ಳಿ ಗ್ರಾಮದ ನೀಲಾವತಿ ನಾಗನೂರ, ಯಲ್ಲಮ್ಮ ವಡ್ಡರ, ರಾಚಯ್ಯಾ ಕೋರಿಮಠ, ಮೈಮುನಾ ದುಂಡಶಿ ಸೇರಿ ಇನ್ನೂ ಹಲವರಿಗೆ ಚಿಕೂನ್ ಗುನ್ಯಾ ಕಾಯಿಲೆ ಪತ್ತೆಯಾದ ಬಗ್ಗೆ ತಿಳಿದು ಬಂದಿದೆ.

    ಕಾಯಿಲೆ ಲಕ್ಷಣಗಳಾದ ವಿಪರೀತ ಜ್ವರ, ತಲೆ ನೋವು, ಕೀಲು ನೋವುಗಳಿಂದ ಬಳಲುತ್ತಿದ್ದರು. ಅವರ ರಕ್ತ ಮಾದರಿ ಸಂಗ್ರಹಿಸಿ ತಪಾಸಣೆಗೆ ಕಳುಹಿಸಲಾಗಿತ್ತು. ರಕ್ತ ತಪಾಸಣೆಯ ವರದಿಯ ಪ್ರಕಾರ ಈ ನಾಲ್ಕು ಜನರಿಗೆ ಚಿಕೂನ್ ಗುನ್ಯಾ ಕಾಯಿಲೆ ಇರುವುದು ಖಚಿತವಾಗಿದ್ದು, ಇನ್ನೂ ಹಲವರಲ್ಲಿ ಈ ಕಾಯಿಲೆಯ ಶಂಕೆ ವ್ಯಕ್ತವಾಗಿದೆ. ಜಿಲ್ಲೆಯ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ರಮೇಶರಾವ್, ಕೀಟ ಶಾಸ್ತ್ರಜ್ಞೆ ಜೋತ್ಸಾ ಕೈರನ್ನ, ಆರೋಗ್ಯ ನಿರೀಕ್ಷಕ ರಾಜು ತಳೇಕರ ಬುಧವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳೊಂದಿಗೆ ರ್ಚಚಿಸಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿ ಗ್ರಾಮಗಳಲ್ಲಿ ಮನೆಮನೆಗೆ ತೆರಳಿ ವಾರದ ಹಿಂದೆ ಶೇಖರಿಸಿಟ್ಟ ನೀರನ್ನು ಖಾಲಿ ಮಾಡಿಸುತ್ತಿದ್ದಾರೆ. ಕಾಯಿಲೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಸೊಳ್ಳೆಗಳ ನಿಮೂಲನೆಗಾಗಿ ಈಗಾಗಲೇ ಗ್ರಾಮದೆಲ್ಲೆಡೆ ಫಾಗಿಂಗ್ ಮಾಡಿಸುತ್ತಿದ್ದಾರೆ.

    ಗ್ರಾಮದ 18-20 ಜನರಲ್ಲಿ ಚಿಕೂನ್ ಗುನ್ಯಾ ಕಾಯಿಲೆಯ ಲಕ್ಷಣಗಳು ಕಂಡು ಬಂದಿದ್ದು, ಇದರಲ್ಲಿ ನಾಲ್ಕು ಜನರಿಗೆ ಕಾಯಿಲೆ ಇರುವುದು ಖಚಿತವಾಗಿರುವುದರಿಂದ ಎಲ್ಲರಿಗೂ ಈ ಕಾಯಿಲೆ ಇರುವ ಬಗ್ಗೆ ಶಂಕೆ ಇದೆ. ಮುನ್ನೆಚ್ಚರಿಕೆ ಕ್ರಮವಾಗಿ ಲಾರ್ವಾಗಳ ಬಗ್ಗೆ ಹತೋಟಿ ತರುತ್ತಿದ್ದೇವೆ. ಹೊಸ ರೋಗಿಗಳು ಯಾರೂ ಕಂಡು ಬಂದಿಲ್ಲ. ಗ್ರಾಮದ ತುಂಬಾ ಫಾಗಿಂಗ್ ಮಾಡಲಾಗಿದೆ. | ಎಚ್.ಎಫ್. ಇಂಗಳೆ ಆಡಳಿತ ವೈದ್ಯಾಧಿಕಾರಿ ಮುಂಡಗೋಡ

    ಮಲವಳ್ಳಿ ಗ್ರಾಮದ ತುಂಬಾ ರೋಗ ಹರಡಿದ್ದು ಮಹಿಳೆಯರು, ಮಕ್ಕಳು ಹಾಗೂ ವೃದ್ಧರಲ್ಲಿ ಭಯದ ವಾತಾವರಣ ಮೂಡಿಸಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಮುತುವರ್ಜಿ ವಹಿಸಿ ಗ್ರಾಮಸ್ಥರಿಗೆ ಚಿಕಿತ್ಸೆ ನೀಡುವಲ್ಲಿ ಮುಂದಾಗಬೇಕು. | ರಾಚಯ್ಯಾ ಕೋರಿಮಠ ಗ್ರಾಮಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts