More

    ಮರಾಠ ಭವನ ಕಾಮಗಾರಿ ಶೀಘ್ರ ಆರಂಭಿಸಿ

    ಬೀದರ್: ಶಾಸಕರ ಪ್ರದೇಶಾಭಿವೃದ್ಧಿ ನಿಯಡಿ ಟೆಂಡರ್ ಪೂರ್ಣಗೊಳಿಸಲಾದ ಔರಾದ್ ತಾಲೂಕಿನ ಗಣೇಶಪುರ ಬಳಿಯ ಮರಾಠ ಸಮುದಾಯ ಭವನ ಕಾಮಗಾರಿ ಶೀಘ್ರ ಆರಂಭಿಸುವಂತೆ ಮರಾಠ ಸಮಾಜದ ಮುಖಂಡರು ಒತ್ತಾಯಿಸಿದ್ದಾರೆ.ಮುಖಂಡರಾದ ನಾರಾಯಣರಾವ ಪಾಟೀಲ್, ಅಶೋಕ ಪಾಟೀಲ್, ತೇಜರಾವ ಮುಳೆ, ದೀಪಕ ಪಾಟೀಲ್ ಚಾಂದೋರಿ ಒಳಗೊಂಡ ನಿಯೋಗ ಶನಿವಾರ ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರನ್ನು ಭೇಟಿ ಮಾಡಿ ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರ ಸಲ್ಲಿಸಿತು.ಶಾಸಕ ಪ್ರಭು ಚವ್ಹಾಣ್ ಅವರು ತಮ್ಮ ಶಾಸಕರ ಪ್ರದೇಶಾಭಿವೃದ್ಧಿ ನಿಯಡಿ 2015-16ನೇ ಸಾಲಿನಲ್ಲಿ ಗಣೇಶಪುರ ಬಳಿ ಹಾಗೂ 2017-18ನೇ ಸಾಲಿನಲ್ಲಿ ಔರಾದ್ ಪಟ್ಟಣದ ಮರಾಠ ಭವನದ ಸಮೀಪ ಸಮುದಾಯ ಭವನ ನಿರ್ಮಾಣಕ್ಕೆ ತಲಾ 20 ಲಕ್ಷ ರೂ. ಅನುದಾನ ಒದಗಿಸಿದ್ದಾರೆ. ಜಿಪಂ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗಕ್ಕೆ ಕಾಮಗಾರಿ ಸಹ ವಹಿಸಿದ್ದಾರೆ. ವಿಭಾಗ ಅಕಾಧಿರಿಗಳು ಗಣೇಶಪುರ ಸರ್ವೇ ಸಂಖ್ಯೆ 240/6 ರಲ್ಲಿ ಭವನಕ್ಕೆ ಸ್ಥಳ ಗುರುತಿಸಿ, ಅಂದಾಜು ಪತ್ರಿಕೆ ಸಿದ್ಧಪಡಿಸಿ, ಜಿಲ್ಲಾಡಳಿತದ ಆಡಳಿತಾತ್ಮಕ ಅನುಮೋದನೆ ಪಡೆದು ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಪ್ರತ್ಯೇಕ ಗುತ್ತಿಗೆದಾರರೊಂದಿಗೆ ಕಾಮಗಾರಿಗಳ ಒಪ್ಪಂದವನ್ನೂ ಮಾಡಿಕೊಂಡಿದ್ದಾರೆ. ಹೀಗಾಗಿ ಇಲ್ಲಿ ಬೇಗ ಕಾಮಗಾರಿ ಪ್ರಾರಂಭಿಸಬೇಕು ಎಂದು ಆಗ್ರಹಿಸಿದೆ.ಮರಾಠ ಸಮುದಾಯದವರ ದೇಣಿಗೆ ಹಣದಿಂದ ಗಣೇಶಪುರ ಬಳಿ ಖರೀದಿಸಿದ ನಿವೇಶನದಲ್ಲಿ ಬೇಗ ಸುಸಜ್ಜಿತ ಹಾಗೂ ಮಾದರಿ ಭವನ ನಿರ್ಮಾಣವಾಗಬೇಕು ಎನ್ನುವ ಸಮಾಜದವರ ಬಹು ದಿನಗಳ ಅಭಿಲಾಷೆ. ಈ ಹಿಂದೆ ನಿವೇಶನಕ್ಕೆ ದಾರಿ ಸಮಸ್ಯೆ ಕಾಡಿತ್ತು. ಇದೀಗ ಸುತ್ತಮುತ್ತಲಿನ ರೈತರು ಸ್ವಯಂ ಪ್ರೇರಣೆಯಿಂದ ದಾರಿ ಬಿಟ್ಟುಕೊಟ್ಟಿದ್ದಾರೆ. ಬೇಗ ಕೆಲಸ ಆರಂಭಿಸಿ ಅನುವು ಮಾಡಿಕೊಡುವಂತೆ ನಿಯೋಗ ಗಮನ ಸೆಳೆದಿದೆ.ಜಿಪಂ ಸಿಇಒ, ಸಹಾಯಕ ಆಯುಕ್ತರು, ಜಿಪಂ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಇಇ ಹಾಗೂ ಔರಾದ್ ಉಪ ವಿಭಾಗದ ಎಇಇಗೂ ಪ್ರತ್ಯೇಕ ಮನವಿ ಪತ್ರ ಸಲ್ಲಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts